ರಾಹುಲ್‌ ಆಪ್ತ, ಕಾಂಗ್ರೆಸ್‌ ಸಂಸದ ರಾಜೀವ್ ಸತಾವ್ ಕೊರೊನಾಗೆ ಬಲಿ

ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ರಾಜೀವ್ ಸತಾವ್ ಅವರು ಭಾನುವಾರ ಸಾವನ್ನಪ್ಪಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರಾಜೀವ್‌ ಅವರಿಗೆ ಏಪ್ರಿಲ್ 22ರಂದು ಕೊರೊನಾ ಪಾಸಿಟಿವ್‌ ಬಂದಿತ್ತು. ಇದರಿಂದಾಗಿ ಅವರು ಪುಣೆಯ ಜೆಹಾಂಗೀರ್​ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರ ಆಪ್ತರಾಗಿದ್ದ ರಾಜೀವ್​, ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರು. ಈ ಹಿಂದೆ ಮಹಾರಾಷ್ಟ್ರದ ಹಿಂಗೋಲಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. ಕಳೆದ ಚುನಾವಣೆಯಲ್ಲಿ ಶಿವಸೇನೆಯ ಸುಭಾಷ್ ವಾಂಖೆಡೆ ವಿರುದ್ದ ಸೋಲನುಭವಿಸಿದ್ದರು. ನಂತರ, ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ರಾಜೀವ್​ ಅವರು ಗುಜರಾತ್ ರಾಜ್ಯದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಶಾಶ್ವತವಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಮಾಸ್ಕ್‌ 3 ರೂ, ಫೇಸ್‌ಶೀಲ್ಡ್‌ 21 ರೂ, ಗ್ಲೌಸ್‌ 5 ರೂ; ಅಗತ್ಯ ವಸ್ತುಗಳಿಗೆ ಕಡಿಮೆ ಬೆಲೆ ನಿಗದಿ ಮಾಡಿ ಮಾದರಿಯಾದ ಪಿಣರಾಯಿ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights