ಲಾಕ್‌ಡೌನ್‌ ಸಮಯದಲ್ಲೂ ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ; ಏನದು ಗೊತ್ತಾ?

ಟೀಮ್ ಇಂಡಿಯಾದ ನಾಯಕ ವಿಶ್ವದ ನಂಬರ್ ಒನ್ ಬಾಟ್ಸಮನ್ ವಿರಾಟ್ ಕೊಯ್ಲಿಗೆ ದಾಖಲೆಗಳನ್ನು ನಿರ್ಮಿಸುವುದು, ಹಳೆ ದಾಖಲೆಗಳನ್ನು ಹೊಸಕಿಹಾಕುವುದು ಮತ್ತು  ಹೊಸ ಮೈಲುಗಲ್ಲುಗಳಲ್ಲಿ ತಮ್ಮ ಹೆಸರು ಬರೆಸಿಕೊಳ್ಳುವ ಹವ್ಯಾಸ ಕೊರೊನಾ ವೈರಸ್ ಸಂಕಷ್ಟದಲ್ಲು ಮುಂದುವರೆದಿದೆ… ಎನಪ್ಪಾ ಇದು ಲಾಕ್ ಡೌನ್ ಸಮಯದಲ್ಲಿ ವಿರಾಟ್ ಯಾವ ಮೈದಾನದಲ್ಲಿ ಯಾರೊಂದಿಗೆ ಕ್ರಿಕೆಟ್ ಆಡಿದರು, ಮತ್ಯಾವ ಹೊಸ ವಿಕ್ರಮ ಸ್ಥಾಪಿಸಿದರು ಅನ್ನುವ ಗೊಂದಲಕ್ಕೆ ಇಲ್ಲಿದೆ ಉತ್ತರ…

ಈ ಬಾರಿ ವಿರಾಟ್ ಬ್ಯಾಟ್ ನಿಂದ ಅಂಗಳದಲ್ಲಿ ನೂತನ ರಿಕಾರ್ಡ್ ಮಾಡಿಲ್ಲ,  ಈ ಬಾರಿ ಅವರು  ಸಾಮಾಜಿಕ ತಾಣದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ..  ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದುವಲ್ಲಿ ‘ಕಿಂಗ್ ಕೊಯ್ಲಿ’  ದಾಖಲೆ ಬರೆದಿದ್ದಾರೆ.. ಫೇಸ್​ಬುಕ್​, ಟ್ವಿಟರ್​ಗಿಂತ ಇನ್ಸ್​ಟಾಗ್ರಾಮ್​ನಲ್ಲಿ ಅತಿಹೆಚ್ಚು ಫಾಲೋವರ್ಸ್​ನ ಕೊಹ್ಲಿ ಹೊಂದಿದ್ದಾರೆ. ಸದ್ಯ ವಿರಾಟ್​ ಕೊಹ್ಲಿ ಅವರನ್ನ ಇನ್ಸ್​ಟಾಗ್ರಾಮ್​ನಲ್ಲಿ 68.7 ಮಿಲಿಯನ್​ ಜನ ಫಾಲೋ ಮಾಡ್ತಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಈ ಮೂಲಕ ಕೊಹ್ಲಿ, ವಿಶ್ವದಲ್ಲಿ ಅತಿಹೆಚ್ಚು ಇನ್ಸ್​ಟಾಗ್ರಾಮ್​ ಫಾಲೋವರ್ಸ್ ಹೊಂದಿರೋ ನಾಲ್ಕನೇ ಅಥ್ಲೀಟ್ ಎನಿಸಿದ್ದಾರೆ. ಅಮೆರಿಕಾದ ಬಾಸ್ಕೆಟ್​ ಬಾಲ್​ ಆಟಗಾರ ಲೆಬ್ರನ್​ ಜೇಮ್ಸ್​ರನ್ನ ಕೊಹ್ಲಿ ಹಿಂದಿಕ್ಕಿದ್ದಾರೆ. ಮೊದಲ ಸ್ಥಾನದಲ್ಲಿ ಪೋರ್ಚುಗಲ್​ನ ಕ್ರಿಸ್ಟಿಯಾನೋ ರೊನಾಲ್ಡೋ, ಎರಡನೇ ಸ್ಥಾನದಲ್ಲಿ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ, ಮೂರರಲ್ಲಿ ಬ್ರೆಜಿಲ್​ನ ​ ನೇಯ್ಮರ್ ಇದ್ದಾರೆ. ​ ಮೂವರು ಫುಟ್ ಬಾಲ್ ಆಟಗಾರರ ನಂತರ ಕ್ರಿಕೆಟ್ ಆಟಗಾರ ಸ್ಥಾನ ಪಡೆದಿದ್ದಾರೆ..

ವಿಶ್ವದಲ್ಲಿ ಅತಿಹೆಚ್ಚು ​ ಫಾಲೋವರ್ಸ್ ಹೊಂದಿರೋ ನಾಲ್ಕನೇ ಅಥ್ಲೀಟ್ ಆಗಿರುವ ವಿರಾಟ್ ಕೊಯ್ಲಿ ದೇಶದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲಿಬ್ರೆಟಿ ಆಗಿದ್ದಾರೆ… ವಿರಾಟ್ ನಂತರ ಬಾಲಿವುಡ್ ಸ್ಆರ್ ಗಳಾದ ಪ್ರೀಯಾಂಕ್ ಚೋಪ್ರಾ ಇದ್ದರೆ ನಂತರ ಕನ್ನಡತಿ ದೀಪಿಕಾ ಪಡಕೊಣಿ ಹಾಗು ಆಲಿಯಾ ಭಟ್ ಸ್ಥಾನ ಗಳಿಸಿದ್ದಾರೆ.  ಗಮನಿಸಬೇಕಾದ ಅಂಶ

1. Virat Kohli 68.7 M
2. Priyanka Chopra 55 M
3. Deepika Padukone 50.6 M
4. Alia Bhatt 48 M

 

ಬಾಲಿವುಡ್‌ನ ಎಲ್ಲಾ ಸೂಪರ್‌ ಸ್ಟಾರ್‌ಗಳು ಬಚ್ಚನ್, ಖಾನ್‌ಗಳನ್ನೂ ಮೀರಿಸಿ ಬಾಲಿವುಡ್‌ನ ನಟಿಯರು ಹೆಚ್ಚು ಫಾಲೋವರ್ಸ್‌ ಹೊಂದಿದ್ದು, ಭಾರತದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ವಿರಾಟ್‌ ಕೊಹ್ಲಿ ಹೊಂದ್ದಿದ್ದಾರೆ.

ವಿಶ್ವಗುರುವಾಗಲು ಹೊರಟಿರುವ ಭಾರತ ಪ್ರಧಾನಿ ನರೇಂದ್ರ ಮೋದಿಯವರು 45.2 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights