ಇಂದು ಸಂಜೆ 6 ಗಂಟೆಗೆ ಮೋದಿ ಭಾಷಣ : ದೇಶವಾಸಿಗಳಿಗೆ ನಮೋರಿಂದ ಕಾದಿದಿಯಾ ಗುಡ್ ನ್ಯೂಸ್!

ಬಹು ದಿನಗಳ ಬಳಿಕ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುವುದಾಗಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮೂಲಕ ಈ ಬಗ್ಗೆ ಸಂದೇಶ ಹೊರಡಿಸಿದ್ದಾರೆ. ಈ ಹಿಂದೆ ಟ್ವೀಟ್, ರೇಡಿಯೋ, ವೀಡಿಯೋ ಮೂಲಕ ಸಂದೇಶವನ್ನು ನೀಡುತ್ತಿದ್ದ ಮೋದಿ ಈ ಬಾರಿ ಯಾವ ವಿಧಾನದಲ್ಲಿ ಜನತೆಗೆ ಸಂದೇಶ ನೀಡುತ್ತಾರೆ ಅನ್ನೋದು ಮಾತ್ರ ಖಚಿತವಾಗಿ ಮಾಹಿತಿ ನೀಡಿಲ್ಲ. ಆದರೆ ಈ ವರೆಗೆ ಅವರು ವೀಡಿಯೋ ಸಂದೇಶಗಳನ್ನು ನೀಡಿರುವುದರಿಂದ ಈ ಬಾರಿಯೂ ವೀಡಿಯೋ ಸಂದೇಶ ರವಾನೆ ಮಾಡುವ ಸಾಧ್ಯತೆ ಇದೆ.

ಪ್ರತಿನಿತ್ಯ 50 ಸಾವಿರಕ್ಕೂ ಹೆಚ್ಚು ಜನರಿಗೆ ತಗಲುತ್ತಿರುವ ಸೋಂಕು ದೇಶದ ಜನರ ನಿದ್ದೆಗೆಡಿಸಿದೆ. ಸೆಪ್ಟೆಂಬರ್ ಮಧ್ಯದಲ್ಲಿ 90,000 ಕ್ಕಿಂತ ಹೆಚ್ಚು ದೈನಂದಿನ ಪ್ರಕರಣಗಳ ವಿರುದ್ಧ ದೈನಂದಿನ ಸರಾಸರಿ ಪ್ರಕರಣಗಳು 50,000-60,000 ಕ್ಕೆ ಇಳಿದಿರುವುದರಿಂದ ದೇಶವು ತನ್ನ ಕೊರೊನಾವೈರಸ್ ಉತ್ತುಂಗವನ್ನು ದಾಟಿದೆ ಎಂದು ಸರ್ಕಾರ ಇತ್ತೀಚೆಗೆ ಹೇಳಿದೆ.

ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ಅತಿ ಹೆಚ್ಚು ಚೇತರಿಕೆ ದರವನ್ನು ಹೊಂದಿದೆ ಎಂದು ಪಿಎಂ ಮೋದಿ ಹೇಳಿದರು. ಸುಸಜ್ಜಿತವಾದ ಲಸಿಕೆ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲು ದೇಶವು ಈಗಾಗಲೇ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಸದ್ಯ ತೀವ್ರ ಕುತೂಹಲ ಮೂಡಿಸಿದ ಪ್ರಧಾನಿ ಮೋದಿ ಭಾಷಣ ಕೊರೊನಾ ಲಸಿಕೆಯ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆ ಇದೆ. ದೇಶವನ್ನು ಮಾತ್ರವಲ್ಲದೇ ಇಡೀ ವಿಶ್ವವನ್ನೇ ಬೆಂಬಿಡದೇ ಕಾಡುತ್ತಿರುವ ಕೊರೊನಾ ವಿರುದ್ಧ ರಾಮಬಾಣ ಬಿಡುವ ಮೂಲಕ ಮೋದಿ ದೇಶವಾಸಿಗಳಿಗೆ ಗುಡ್ ನ್ಯೂಸ್ ಕೊಡಲಿದ್ದಾರಾ..? ಅನ್ನೋ ಕುತೂಹಲ ಇದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.