ಆನಂದಾಶ್ರಮ ನೀರುಪಾಲು : ‘ಸಿಎಂ ಬಂದ್ರು ನಾನು ಮಠ ಬಿಟ್ಟು ಬರೋದಿಲ್ಲ’ ಪೂಜಾರಿ ಹೈಡ್ರಾಮಾ..!

ಮಳೆನೀರಿನಿಂದ ತುಂಬುತ್ತಿದ್ದ ಯಾದಗಿರಿಯ ಸಹಾಪುರದ ಆನಂದಶ್ರಾಮದ ಮತ್ತು ಸುತ್ತಲ ಸ್ಥಳೀಯರನ್ನು ರಕ್ಷಣೆ ವೇಳೆ ‘ಸಿಎಂ ಬಂದ್ರು ನಾನು ಮಠ ಬಿಟ್ಟು ಬರೋದಿಲ್ಲ’ ಎಂದು ಪೂಜಾರಿಯೊಬ್ಬ ಪಟ್ಟುಹಿಡಿದು ಕುಳಿತಿದ್ದಾರೆ.

ರಾಜ್ಯದಲ್ಲಿ ಕೆಲ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಉತ್ತರ ಕರ್ನಾಟಕದ ಕೊಪ್ಪಳ, ಗದಗದಲ್ಲಿ ಭಾರೀ ಮಳೆ ನೀರಿಗೆ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಇದರಲ್ಲಿ ಯಾದಗಿರಿ ಕೂಡ ಹೊರತಾಗಿಲ್ಲ.

ಯಾದಗಿರಿಯ ಸಹಾಪುರದ ಆನಂದಾಶ್ರಮ ದೇವಿ ದೇವಸ್ಥಾನದಲ್ಲಿ ದಸರಾಪೂಜೆ ಬಹಳ ಅದ್ದೂರಿಯಾಗಿ ನಡೆಯುತ್ತಿದ್ದು ಪ್ರತಿನಿತ್ಯ ಹೋಮ, ಹವನ ಸಿದ್ಧತೆ ಮಾಡಲಾಗುತ್ತಿದೆ. ಭೀಮಾ ನದಿ ಪ್ರವಾಹದ ತೀವ್ರತಿಯಿಂದಾಗಿ ಸುತ್ತಲ ಹಳ್ಳಿಗಳು ಮಾತ್ರವಲ್ಲದೇ ದೇವಸ್ಥಾನ ಕೂಡ ಮುಳುಗುವ ಹಂತಕ್ಕೆ ಬಂದಿದೆ. ಪ್ರತೀ ವರ್ಷ ತುಂಬಾ ಅದ್ದೂರಿಯಾಗಿ ಮಾಡುತ್ತಿದ್ದ ಪೂಜೆಗೆ ಇದೇ ವರ್ಷ ನದಿ ಪ್ರವಾಹದಿಂದ ಅಡ್ಡಿಯನ್ನುಂಟು ಮಾಡಿದೆ. ದಸರಾದಲ್ಲಿ 9 ದಿನ ಅನುಷ್ಠಾನ ಪೂಜೆ ಇರುತ್ತದೆ. ಹೀಗಾಗಿ ನಾನು ಪೂಜೆ ನಿಲ್ಲಿಸುವುದಿಲ್ಲ ಎಂದು ಅಲ್ಲಿನ ಪೂಜಾರಿ ಸ್ಥಳಬಿಡಲು ಹಿಂದೇಟು ಹಾಕುತ್ತಿದ್ದಾರೆ.ಬಲವಂತಾಗಿ ಕರೆದುಕೊಂಡು ಹೋದರೆ ನಾನು ವಿಷ ಕುಡಿಯುತ್ತೇನೆ ಎಂದು ಹಠ ಹಿಡಿದು ಕುಳಿತಿದ್ದಾರೆ.

ಯಾದಗಿರಿಯ ಸಹಾಪುರದ ಆನಂದಶ್ರಾಮದಲ್ಲಿ ಪೂಜಾರಿ ಹಠಮಾಡಿಕೊಂಡು ಕುಳಿತಿದ್ದಾರೆ. ತಹಶೀಲ್ದಾರರು ಪೂಜಾರಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights