ಫ್ಯಾಕ್ಟ್‌ಚೆಕ್ : ನಮಾಝ್‌ಗಾಗಿ ಪರೀಕ್ಷೆ ಸಮಯವನ್ನು ಬದಲಾಯಿಸಿ ಮುಸ್ಲಿಂ ಓಲೈಕೆಗೆ ಮುಂದಾದ ಕಾಂಗ್ರೆಸ್ ಸರ್ಕಾರ ಎಂದು ಸುಳ್ಳು ಪೋಸ್ಟ್ ಹಂಚಿಕೊಂಡ BJP
ನಮಾಝ್ ಮಾಡುವುದಕ್ಕಾಗಿ ಶುಕ್ರವಾರ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ(BJP) ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದೆ.
ತುಷ್ಟೀಕರಣ ರಾಜಕಾರಣದ ಪಿತಾಮಹ ಸಿಎಂ @siddaramaiah ಅವರು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿಯೂ ಸಹ ಓಲೈಕೆ ರಾಜಕಾರಣಕ್ಕೆ ಆದ್ಯತೆ ನೀಡಿದ್ದಾರೆ.
ಶುಕ್ರವಾರ ನಡೆಯುವ ಪರೀಕ್ಷೆ ಮಧ್ಯಾಹ್ನ 2 ಗಂಟೆ ನಂತರವಂತೆ, ಉಳಿದ ದಿನ ನಡೆಯುವ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಂತೆ.@INCKarnataka ಕರ್ನಾಟಕ ಆಡಳಿತವನ್ನು… https://t.co/VDGEtTQ0F7
— BJP Karnataka (@BJP4Karnataka) February 4, 2024
ತುಷ್ಟೀಕರಣ ರಾಜಕಾರಣದ ಪಿತಾಮಹ ಸಿಎಂ @siddaramaiah ಅವರು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿಯೂ ಸಹ ಓಲೈಕೆ ರಾಜಕಾರಣಕ್ಕೆ ಆದ್ಯತೆ ನೀಡಿದ್ದಾರೆ. ಶುಕ್ರವಾರ ನಡೆಯುವ ಪರೀಕ್ಷೆ ಮಧ್ಯಾಹ್ನ 2 ಗಂಟೆ ನಂತರವಂತೆ, ಉಳಿದ ದಿನ ನಡೆಯುವ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಂತೆ.
@INCKarnataka ಕರ್ನಾಟಕ ಆಡಳಿತವನ್ನು ತಾಲಿಬಾನ್ & ಐಸಿಸ್ ಮಾದರಿಯಲ್ಲಿ ಮುನ್ನಡೆಸುತ್ತಿರುವುದು ಅವರ ನಿಲುವುಗಳಿಂದಲೇ ಸಾಬೀತಾಗುತ್ತಿದೆ. ಪರೀಕ್ಷೆ ವಿಚಾರದಲ್ಲೂ ಒಂದು ಸಮುದಾಯಕ್ಕೆ ಇಷ್ಟೊಂದು ಓಲೈಕೆ ಮಾಡುವ ಕಾಂಗ್ರೆಸ್, ಹಿಂದೂ ವಿದ್ಯಾರ್ಥಿಗಳನ್ನು ಈಗ ಎರಡನೇ ದರ್ಜೆಗೆ ಇಳಿಸಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ತೂರಿ ಬರುತ್ತಿರುವ ನಿಮ್ಮ ಹೊಲಸು ತುಷ್ಟೀಕರಣಕ್ಕೆ ಕರ್ನಾಟಕದ ಜನತೆ ಅಂತಿಮ ಮೊಳೆ ಹೊಡೆಯುವುದು ನಿಶ್ಚಿತ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದೆ.
ವಿಸ್ತಾರ ನ್ಯೂಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಸುದ್ದಿಯ ಥ್ರೆಡ್‌ಅನ್ನು ಬಿಜೆಪಿ ಪಿನ್ ಮಾಡಿ ಪೋಸ್ಟ್ ಮಾಡಿದೆ. ವಿಸ್ತಾರ ನ್ಯೂಸ್ ಕೂಡ ತನ್ನ ಸುದ್ದಿಯ ತಲೆ ಬರಹದಲ್ಲಿ “SSLC Exam: ಪರೀಕ್ಷೆಯಲ್ಲೂ ಮುಸ್ಲಿಮರ ಓಲೈಕೆ; ನಮಾಜ್‌ಗಾಗಿ ಸಮಯವೇ ಬದಲು!” ಎಂದು ಸುದ್ದಿಯನ್ನು ಪ್ರಸಾರ ಮಾಡಿದೆ.
ಕರ್ನಾಟಕದ ಬಲಪಂಥೀಯ ಪ್ರತಿಪಾದಕ ಚಕ್ರವರ್ತಿ ಸೂಲಿಬೆಲೆ ಕೂಡ ತನ್ನ ಎಕ್ಸ್ ಖಾತೆಯಲ್ಲಿ ಮುಸ್ಲಿಮರ ಓಲೈಕೆಹೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ “ರಾಜ್ಯದ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಬೆಳಗಿನ ಅವಧಿಯಲ್ಲಿ ಎಲ್ಲಾ ಪರೀಕ್ಷೆಗಳು ನಡೆಯುತ್ತಿವೆ, ಆದರೆ ಶುಕ್ರವಾರ. ಏಕೆ? ಓಹ್.. ನಮಾಜ್‌ಗೆ ಸಮಯ? ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಸರ್ಕಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರಿಕ್ಷಾ ವೇಳಾ ಪಟ್ಟಿಯನ್ನು ದಿನಾಂಕ 01.03.2024 ರ ಶುಕ್ರವಾರ ಮಧ್ಯಾಹ್ನಕ್ಕೆ ಬದಲಾಯಿಸಲಾಗಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
BJP ಮತ್ತು ಚಕ್ರವರ್ತಿ ಸೂಲಿಬೆಲೆ ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಿದಾಗ, ಇದು ಸುಳ್ಳು ಎಂದು ತಿಳಿದುಬಂದಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ:
ಮಾ.1ರ ಮಧ್ಯಾಹ್ನ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವ ವಿಚಾರದಲ್ಲಿ ಕೆಲವು ಧರ್ಮಕ್ಕೆ ಒಲವು ತೋರಿಸುವ ಕೆಲಸ ಮಾಡಿದ್ದಾರೆಂಬ ಆರೋಪ ‘ಬಿಜೆಪಿಯವರು ಎಲ್ಲವನ್ನೂ ಜೋಡಣೆ ಮಾಡುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು. ಕಳ್ಳನಿಗೆ ಒಂದು ಸುಳ್ಳು ನೆಪ ಬೇಕು ಅಂತಾರಲ್ಲ ಹಾಗೆ, ಬಿಜೆಪಿಯವರ ಅಂಗ ಸಂಸ್ಥೆ ಆಸ್ಎಸ್ಎಸ್ನವರ ಕೆಲಸ ಇದು. ಮಾರ್ಚ್ 1ರಂದು ಬೆಳಗ್ಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಾಗಿದೆ. SSLC ಪೂರ್ವ ಸಿದ್ದತಾ ಪರೀಕ್ಷೆ ಆಗಿದ್ದರಿಂದ ಮಧ್ಯಾಹ್ನ ಮಾಡ್ತಿದ್ದೇವೆ. ಮಾ.1ರಂದು 3 ಪರೀಕ್ಷೆ ಇರುವುದರಿಂದ ಮುಂದೂಡಿದ್ರೆ ಸಮಸ್ಯೆ ಆಗುತ್ತೆ. ಮಕ್ಕಳಿಗೆ ಅನುಕೂಲವಾಗುವ ರೀತಿ ಆಡಳಿತ ನಡೆಸಲು ನಮಗೆ ಬರುತ್ತದೆ ಎನ್ನುವ ಮೂಲಕ ಸ್ಪಷ್ಟತೆ ನೀಡಿದ್ದಾರೆ.
ಕಾಂಗ್ರೆಸ್ ಟ್ವೀಟ್ :
ಮಾರ್ಚ್ 1ನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಾರ್ಚ್ ಒಂದನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ SSLC ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ.
ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ SSLC ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ.
ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ.
ಇದರಲ್ಲಿ ಸುಳ್ಳು… https://t.co/74McSA0V4w pic.twitter.com/hOAz2C8URf
— Karnataka Congress (@INCKarnataka) February 5, 2024
ನಮಾಝ್ ಮಾಡುವುದಕ್ಕಾಗಿ ಶುಕ್ರವಾರ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್, “ಸುಳ್ಳು ಅಪಪ್ರಚಾರದ ಮೂಲಕ ಪ್ರಚೋದನೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಕನಿಷ್ಠ ಮರ್ಯಾದೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಮಾಝ್ ಮಾಡುವುದಕ್ಕಾಗಿ ಶುಕ್ರವಾರ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಗಾಂಪರು ಅದೇ ದಿನ ಬೆಳಿಗ್ಗೆ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಮಾಝ್ ಮಾಡುವ ಅಗತ್ಯವಿಲ್ಲವೇ ಎಂಬುದನ್ನು ಉತ್ತರಿಸಲಿ!
ಈ ಸುಳ್ಳು ಹರಡಲು ಕಾರಣಕರ್ತನಾದ ಮಾಜಿ ಪತ್ರಕರ್ತ!?, ಹಾಲಿ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋನೆಮನೆ ಹೊಟ್ಟೆಗೆ ತಿನ್ನುವುದು ಏನನ್ನು ಎಂಬುದನ್ನು ತಿಳಿಸಲಿ. ಈತ ಮುಖ್ಯಸ್ಥನಾಗಿದ್ದ ಮಾಧ್ಯಮ ಸಂಸ್ಥೆಯೂ ಆತ ಹೇಳಿದ ಸುಳ್ಳನ್ನೇ ಪ್ರಸಾರ ಮಾಡಿದೆ ಎಂದರೆ ಆತ ನಿಜಕ್ಕೂ ಪತ್ರಕರ್ತನಾಗಿ ಮಾಜಿಯಾಗಿದ್ದಾನಾ ಎಂಬ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ 1 ರ ಶುಕ್ರವಾರದಂದು ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಅಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆ ನಡೆಯಲಿದೆ. ಹಾಗಾಗಿ ಅ ದಿನದ SSLC ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ SSLC ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ. ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ವಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಹಾಗಾಗಿ ನಮಾಜ್‌ಗಾಗಿ ಪರೀಕ್ಷೆ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವಿಚಿತ್ರ ಪ್ರಾಣಿಯೊಂದು ಗುಬ್ಬಿಯಲ್ಲಿ ಕಾಣಿಸಿಕೊಂಡಿದೆಯೇ? ಈ ಸ್ಟೋರಿ ಓದಿ