ರಾಜ್ಯದಲ್ಲಿ ವಿವಾದದ ಕಿಚ್ಚು ಹೆಚ್ಚಿಸಿದ ಮೈಸೂರು ದೇಗುಲ ತೆರವು : ಕಾರ್ಯಚರಣೆಗೆ ತಾತ್ಕಾಲಿಕ ತಡೆ!

ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಮೈಸೂರು ದೇಗುಲ ತೆರವು ವಿಚಾರ ಮುಳುವಾಗಿದೆ. ಸ್ವಪಕ್ಷ ಹಾಗೂ ವಿಪಕ್ಷಗಳು ದೇವಾಲಯಗಳ ತೆರವಿಗೆ ವಿರೋಧ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳಿಗೆ ಬೆಲೆ ಏರಿಕೆ ಹಾಗೂ ದೇಗುಲ ತೆರವು ವಿಚಾರ ಬೊಮ್ಮಾಯಿ ಸರ್ಕಾರದ ವಿರುದ್ಧ ಪ್ರಶ್ನೆ ಮಾಡಲು ಸುಲಭ ಅಸ್ತ್ರವಾಗಿದೆ.

ಎಲ್ಲಂದ್ರಲ್ಲಿ ಅನಧಿಕೃತ ದೇವಾಲಯಗಳನ್ನು ತೆರೆಯಲಾಗುತ್ತಿದ್ದು ಇದರಿಂದ ಪಾರ್ಕ್ ಸ್ಥಳ ಆಕ್ರಮಿಸಿಕೊಳ್ಳುಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್ ಬೇಸರ ವ್ಯಕ್ತ ಪಡಿಸಿ 2009ರಲ್ಲಿ ಅನಧಿಕೃತ ದೇವಾಲಯಗಳ ತೆರವಿಗೆ ಆದೇಶ ಹೊರಡಿಸಿತ್ತು. ಆದರೆ ಇದೇ ಸದ್ಯ ರಾಜ್ಯ ಸರ್ಕಾರಕ್ಕೆ ಮುಳುವಾಗಿದೆ.

ಸುಪ್ರೀಂ ಕೋರ್ಟ್ ಅನಧಿಕೃತ ದೇವಾಲಯಗಳ ತೆರವು ಮಾಡಬೇಕು ಎಂದು 2009ರಲ್ಲಿ ಕೊಟ್ಟಿದ್ದ ತೀರ್ಪನ್ನು ಯಾಕಿನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಪ್ರಶ್ನೆಗಳು ಒಂದೆಡೆ ಮೂಡಿದರೆ ಮತ್ತೊಂದೆಡೆ ಬೊಮ್ಮಾಯಿ ಸರ್ಕಾರಕ್ಕೆ ಇಷ್ಟು ದಿನ ಬಿಟ್ಟು ಈಗ ಯಾಕೆ ಹಿಂದು ದೇಗುಲಗಳ ಮೇಲೆ ಕಣ್ಣು ಬಿದ್ದಿದೆ ಎನ್ನುವ ಆಕ್ರೋಶ ಹೊರಹಾಕಲಾಗುತ್ತಿದೆ.

ಈ ಸಂದರ್ಭದಲ್ಲಿ ಬಿಜೆಪಿ ಬದಲಿಗೆ ಕಾಂಗ್ರೆಸ್ ಅಥವಾ ಬೇರೆ ಪಕ್ಷ ಇದ್ದರೆ ಬಿಜೆಪಿ ಪ್ರಶ್ನೆ ಮಾಡಿ ಕೋಮುಗಲಭೆ ಸೃಷ್ಟಿ ಮಾಡುತ್ತಿತ್ತು ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಸರ್ಕಾರವೇ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ.

ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಆದೇಶವನ್ನು ಪಾಲಿಸಬೇಕು. ಜನರ ಭಾವನೆಗಳಿಗೂ ಸ್ಪಂದಿಸಿಬೇಕು. ಇದು ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ. ದೇವಾಲಯಗಳ ತೆರವಿಗೆ ಹಿಂದುಗಳು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನೋಟೀಸ್ ರವಾನೆ ಮಾಡಿದೆ.

ಹೀಗಾಗಿ ಮೈಸೂರು ದೇಗುಲಗಳ ತೆರವಿಗೆ ಜಿಲ್ಲಾಡಳಿತ ತಾತ್ಕಾಲಿಕ ತಡೆಯನ್ನು ನೀಡಿದೆ. ಹಾಗಾದ್ರೆ ಬೇರೆ ಬೇರೆ ಜಿಲ್ಲೆಗಳಲ್ಲಿ ದೇವಾಲಯಗಳನ್ನು ತೆರವುಗೊಳಿಸಲಾಗುತ್ತಾ ಎನ್ನುವ ಪ್ರಶ‍್ನೆ ಮೂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights