ಬಿಜೆಪಿಗರು ಅಗತ್ಯವಿದ್ದಾಗ ನಮ್ಮನ್ನು ಬಳಸಿಕೊಂಡು, ನಮ್ಮ ವಿರುದ್ದವೇ ಮಾತನಾಡುತ್ತಾರೆ: ಹೆಚ್‌ಡಿಕೆ

ಬಿಜೆಪಿಯವರು ಈಗ ನಮ್ಮ ಸಹಕಾರ ಕೇಳುತ್ತಾರೆ. ಅವಶ್ಯಕತೆ ಇದ್ದಾಗ ನಮ್ಮನ್ನು ಬಳಸಿಕೊಂಡು, ನಂತರ, ನಮ್ಮ ವಿರುದ್ದವೇ ಮಾತನಾಡುತ್ತಾರೆ. ಹೀಗಾಗಿ ಕಲಬುರ್ಗಿ ಮೈತ್ರಿಯ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ರಚನೆಗೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳಲ್ಲಿ ಅಧಿಕಾರ ಪಡೆಯಲು ವಿಫಲವಾಗಿರುವ ಕಾಂಗ್ರೆಸ್‌ ಕಲಬುರ್ಗಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ಕಲಬುರ್ಗಿ ಆಡಳಿತದ ಚುಕ್ಕಾಣಿ ಹಿಡಿಯಲು ಕೈ ಪಕ್ಷ ಯತ್ನಿಸುತ್ತಿದೆ. ಅಧಿಕಾರ ಕಾಂಗ್ರೆಸ್‌ನ ಕೈ ತಪ್ಪಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದ್ದು, ಎರಡೂ ಪಕ್ಷಗಳು ಜೆಡಿಎಸ್‌ ಓಲೈಕೆಗೆ ಮುಂದಾಗಿವೆ.

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಬೆಂಬಲ ನೀಡುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ. ಆದರೆ, ನಮ್ಮ ಪಕ್ಷ ಮೈತ್ರಿ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಪಕ್ಷದ ಶಾಸಕರ ಜತೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಕಲಬುರ್ಗಿ ಮೈತ್ರಿಯಾಗುವ ಸಂದರ್ಭವು ಜೆಡಿಎಸ್‌ನ ನಡೆಯು ಅಧಿವೇಶನದಲ್ಲಿ ಏನಿರಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವು 18 ಮಸೂದೆಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಹೀಗಾಗಿ, ಜೆಡಿಎಸ್ ನಡೆಗಳನ್ನು ಸೂಕ್ಷ್ಮವಾಗಿರಬೇಕಾಗಿದೆ. ಜೆಡಿಎಸ್‌ ಕಲಬುರ್ಗಿಯಲ್ಲಿ ಬಿಜೆಪಿಗೆ ಬೆಂಬಲ ನೀಡಿದರೆ, ಅದು ಸದನದಲ್ಲಿಯೂ ಬಿಜೆಪಿ ಪರವಾಗಿರಲಿದೆ. ವಾಕೌಟ್ ಮಾಡುವ ಮೂಲಕ ಕೃಷಿ ಮಸೂದೆಗಳನ್ನು ಅಂಗೀಕರಿಸುವಂತಹ ವಿಷಯಗಳಲ್ಲಿ ಪಕ್ಷವು ತಂತ್ರಗಾರಿಕೆಯಿಂದ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಒಂದು ವೇಳೆ ಸಿದ್ದರಾಮಯ್ಯ ಗೆದ್ದರೂ ಅವರನ್ನು ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ: ಬಿಎಸ್‌ ಯಡಿಯೂರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights