ಫ್ಯಾಕ್ಟ್‌ಚೆಕ್ : ಶುಭ್ಮನ್ ಗಿಲ್‌ನನ್ನು ತಬ್ಬಿಕೊಂಡ ಸಾರಾ ತೆಂಡೂಲ್ಕರ್ ಫೋಟೊ ವೈರಲ್! ವಾಸ್ತವೇನು?

ಶುಭ್‌ಮನ್ ಗಿಲ್‌ ಮತ್ತು ಸಾರಾ ತೆಂಡೂಲ್ಕರ್‌ ಇಬ್ಬರೂ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಡಿಯೋವೊಂದು ವೈರಲ್ ಆದ ಬೆನ್ನಲೆ, ಇಬ್ಬರ ಫೋಟೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್  ಮತ್ತು  ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಇಬ್ಬರ ಫೋಟೊ ಸೋ‍ಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕುರ್ಚಿಯಲ್ಲಿ ಕುಳಿತಿರುವ ಶುಭ್‌ಮನ್ ಗಿಲ್ ಅವರನ್ನು ಸಾರಾ ತಬ್ಬಿಕೊಂಡಿರುವಂತೆ ಕಾಣುವ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಫೋಟೊದ ಸತ್ಯಾಸತ್ಯೆತೆ ಏನೆಂದು ತಿಳಿದುಕೊಳ್ಳೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸಾರಾ ಹಾಗೂ ಶುಭ್‌ಮನ್ ಗಿಲ್ ಇಬ್ಬರ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸಾರಾ ತೆಂಡೂಲ್ಕರ್ ಜೊತೆಗೆ ಇರುವ ವ್ಯಕ್ತಿ ಶುಭ್‌ಮನ್ ಗಿಲ್ ಅಲ್ಲ ಎಂದು ಖಚಿತವಾಗಿದೆ.

Image

ಸಾರಾ ತನ್ನ ಸಹೋದರ ಅರ್ಜುನ್ ತೆಂಡೂಲ್ಕರ್ ಜೊತೆಗೆ ಇರುವ ಫೋಟೊವನ್ನು ಡಿಜಿಟಲ್ ಮೂಲಕ ಎಡಿಟ್ ಮಾಡಿರುವುದು ಕಂಡುಬಂದಿದೆ. ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರಿದ್ದ ಚಿತ್ರವನ್ನು ಎಡಿಟ್ ಮಾಡುವ ಮೂಲಕ ಅರ್ಜುನ್ ಮುಖದ ಜಾಗಕ್ಕೆ ಶುಭಮಾನ್ ಗಿಲ್ ಅವರ ಮುಖವನ್ನು ಮಾರ್ಫಿಂಗ್ ಮಾಡಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಮತ್ತು ಮಗಳು ಸಾರಾ ಇರುವ ಚಿತ್ರವನ್ನು ಶುಭ್‌ಮಾನ್ ಗಿಲ್ನೊಂದಿಗೆ ಇರುವಂತೆ ಕ್ರಯೇಟ್ ಮಾಡಲಾದ ಡಿಜಿಟಲ್ ಬದಲಾವಣೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಗಮನ ಸೆಳೆಯಲು ಸುಳ್ಳು ಪ್ರತಿಪಾದನೆಯೊಂದಿಗೆ ಪ್ರಸಾರ ಮಾಡಲಾಗುತ್ತಿದೆ.

ಸಾರಾ ಮತ್ತು ಶುಭ್‌ಮಾನ್ ಗಿಲ್ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಗಾಳಿಸುದ್ದಿ ಸೊಶಿಯಲ್ ಮೀಡಿಯಾದಲ್ಲಿ ಆಗಾಗ್ಗ ಕೇಳಿಬರುತ್ತಿರುತ್ತದೆ. ಇತ್ತೀಚೆಗೆ ಶುಭ್‌ಮನ್ ಗಿಲ್‌ ಮತ್ತು ಸಾರಾ ತೆಂಡೂಲ್ಕರ್‌ ಇಬ್ಬರೂ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಜಿಯೋ ವರ್ಲ್ಡ್ ಪ್ಲಾಜಾ’ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರೂ ಇರುವ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.

 

View this post on Instagram

 

A post shared by Instant Bollywood (@instantbollywood)

ಈ ವೀಡಿಯೊದಲ್ಲಿ, ಸಾರಾ ತೆಂಡೂಲ್ಕರ್ ಮತ್ತು ಶುಭ್‌ಮಾನ್ ಗಿಲ್ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಈವೆಂಟ್‌ನಿಂದ ಹೊರಬರುವುದನ್ನು ಕಾಣಬಹುದು, ಆದರೆ ಅವರ ಕಣ್ಣುಗಳು ಹೊರಗೆ ನಿಂತಿರುವ ಕ್ಯಾಮರಾಮನ್‌ನ ಮೇಲೆ ಬಿದ್ದ ತಕ್ಷಣ, ಅವರು ಅಲ್ಲಿಯೇ ನಿಲ್ಲುತ್ತಾರೆ, ನಂತರ ಇಬ್ಬರೂ ಪ್ರತ್ಯೇಕವಾಗಿ ಹೊರಡುತ್ತಾರೆ. ಸಾರಾ ರೆಡ್ ಫ್ಲೋರ್ ಲೆಂಗ್ತ್ ಗೌನ್ ಧರಿಸಿದ್ದು, ಶುಭಮನ್ ಗಿಲ್ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಡೆಂಗ್ಯೂ ಕಾರಣದಿಂದಾಗಿ ಶುಭಮನ್ ಗಿಲ್ ಈ ವಿಶ್ವಕಪ್‌ನ ಮೊದಲ ಕೆಲವು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ, ಅಲ್ಲಿಂದೀಚೆಗೆ ಭಾರತದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗಿಲ್ ಕಾಣಿಸಿಕೊಂಡಿದ್ದಾರೆ ಆದರೆ ಇಲ್ಲಿಯವರೆಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಬಾಂಗ್ಲಾದೇಶ ವಿರುದ್ಧ ಗಿಲ್ 53 ರನ್ ಗಳಿಸಿದ್ದರು. ಇದಲ್ಲದೆ, ಅವರು ಪಾಕಿಸ್ತಾನ ವಿರುದ್ಧ 16, ನ್ಯೂಜಿಲೆಂಡ್ ವಿರುದ್ಧ 26 ಮತ್ತು ಇಂಗ್ಲೆಂಡ್ ವಿರುದ್ಧ 9 ರನ್ ಗಳಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಸಾರಾ ಸಹೋದರ ಅರ್ಜುನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬದ ಸೆಪ್ಟಂಬರ್ 24 ರಂದು ಇದ್ದ ಕಾರಣಕ್ಕೆ ಈ ಫೋಟೊವನ್ನು ಸಾರಾ ಹಂಚಿಕೊಂಡಿದ್ದರು. ಆದರೆ ಕೆಲವರು ಈ ಫೋಟೊವನ್ನು ಎಡಿಟ್ ಮಾಡುವ ಮೂಲಕ ಅರ್ಜುನ್ ಮುಖಕ್ಕೆ ಶುಭ್ಮನ್ ಗಿಲ್ ಅವರ ಚಿತ್ರವನ್ನು ಸೇರಿಸಿ ತಪ್ಪಾಗಿ ಹಂಚಿಕೋಂಡಿದ್ದಾರೆ. ಆಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೇಷನ್ ಅಕ್ಕಿಯಲ್ಲಿ ಕಂಡು ಬಂದಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ! ಮತ್ತೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights