ಕೊರೊನಾಗಿಲ್ಲ ವಿಶ್ವದ ದೊಡ್ಡಣ್ಣನ ಮೇಲೆ ಕರುಣೆ : ಒಂದೇ ದಿನಕ್ಕೆ 2,228 ಮಂದಿ ಬಲಿ!

ಕೊರೊನಾ ಸೋಂಕು ತನ್ನ ಬೃಹತ್ ಬಾಹುಗಳಿಂದ ವಿಶ್ವದ ದೊಡ್ಡನ ಮೇಲೆ ಕರಿ ನೆರಳು ಹರಡುತ್ತಿದ್ದು, ಅಮೆರಿಕಾ ಸರ್ಕಾರ ಕೈಕಟ್ಟಿ ಕೂರುವಂತೆ ಮಾಡಿದೆ.

ಹೌದು… ವಿಶ್ವದಲ್ಲಿ ಕೊರೊನಾ ಅಟ್ಟಹಾಸ ಮೂಮದುವರೆದಿದ್ದು ಎಲ್ಲೆಡೆ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಅಮೆರಿಕಾ. ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 2,228 ಮಂದಿ ಸಾವಿಗೀಡಾಗಿದ್ದಾರೆ. ಏಪ್ರಿಲ್‌ 10ರಂದು ಒಂದೇ ದಿನದಲ್ಲಿ 2,108 ಮಂದಿ ಸಾವಿಗೀಡಾಗಿದ್ದು ವರದಿಯಾದ ನಂತರದಲ್ಲಿ ನಿತ್ಯದ ಸಾವಿನ ಸಂಖ್ಯೆ ಇಳಿಮುಖವಾಗಿತ್ತು. ಆದರೆ, ಮಂಗಳವಾರದ ಲೆಕ್ಕದ ಪ್ರಕಾರ ಸೋಂಕಿನ ಪ್ರಭಾವ ಇನ್ನಷ್ಟು ತೀವ್ರವಾಗಿರುವುದು ತಿಳಿದು ಬಂದಿದೆ.

ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಗುಣಮುಖರಾಗುತ್ತಿರುವವರ ಸಂಖ್ಯೆ ತೀರಾ ಕಡಿಮೆಯಿಂದ್ದು ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಇದು ನೆರೆ ದೇಶಗಳಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿ ಮಾಡಿದೆ. ಜಾನ್ಸ್‌ ಹಾಪ್‌ಕಿನ್ಸ್‌ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಒಟ್ಟು ಕೋವಿಡ್‌-19 ದೃಢಪಟ್ಟ ಪ್ರಕರಣಗಳು 6 ಲಕ್ಷ ದಾಟಿವೆ ಹಾಗೂ ಈವರೆಗೂ ಸೋಂಕಿನಿಂದ ಕನಿಷ್ಠ 25,757 ಮಂದಿ ಮೃತಪಟ್ಟಿದ್ದಾರೆ. ಒಟ್ಟು 6,02,989 ಸೋಂಕು ಪ್ರಕರಣಗಳ ಪೈಕಿ 46,515 ಮಂದಿ ಗುಣಮುಖರಾಗಿದ್ದಾರೆ.

ಇಷ್ಟಾದರೂ ಅಮೆರಿಕಾದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿಲ್ಲ. ಸೋಂಕಿತರು ಕಡಿಮೆ ಇರುವ ಸ್ಥಳಗಳನ್ನು ಸಡಿಲಗೊಳಿಸಲಾಗಿದೆ. ಸೋಂಕಿತರಿಲ್ಲದ ಪ್ರದೇಶಗಳಲ್ಲಿ ಜನ ಓಡಾಟ ಸಮಾನ್ಯವಾಗಿದೆ. ಇಂತಹ ನಿರ್ಲಕ್ಷ್ಯವೇ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇನ್ನೂ ಬಿಎನ್‌ಒ ನ್ಯೂಸ್‌ ಪ್ರಕಾರ, ಜಗತ್ತಿನಾದ್ಯಂತ ಕೋವಿಡ್‌-19 ದೃಢಪಟ್ಟ ಪ್ರಕರಣಗಳು 20,00,794 ತಲುಪಿದೆ. ಒಟ್ಟು 1,30,483 ಸೋಂಕಿತರು ಸಾವಿಗೀಡಾಗಿದ್ದು, 4,81,768 ಮಂದಿ ಗುಣಮುಖರಾಗಿದ್ದಾರೆ.

ಫ್ರಾನ್ಸ್‌ನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 15,000 ದಾಟಿದೆ. ಈ ಮೂಲಕ ಜಗತ್ತಿನಲ್ಲಿ ನಾಲ್ಕು ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ 15 ಸಾವಿರ ದಾಟಿದಂತಾಗಿದೆ. ಅಮೆರಿಕದಲ್ಲಿ ಸಾವಿನ ಪ್ರಮಾಣ 30 ಸಾವಿರ ಸಮೀಪಿಸುತ್ತಿದೆ. ಸ್ಪೇನ್‌ನಲ್ಲಿ 18,255, ಇಟಲಿಯಲ್ಲಿ 21,067 ಹಾಗೂ ಫ್ರಾನ್ಸ್‌ನಲ್ಲಿ 15,729 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಮಂಗಳವಾರದವರೆಗೂ ಕೋವಿಡ್ ರೋಗ ಬಾಧಿತರ ಸಂಖ್ಯೆ 9,272 ಆಗಿದ್ದು ಇಲ್ಲಿಯವರೆಗೆ 1,189 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಗೆ ಬಲಿಯಾದವರ ಸಂಖ್ಯೆ 353ಕ್ಕೇರಿದೆ.

ಒಟ್ಟಿನಲ್ಲಿ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರ ನಿದ್ದೆಗೆಟ್ಟಿದೆ. ಇದರಿಂದ ಮುಕ್ತಿ ಯಾವಾಗ ಎನ್ನುವ ಪ್ರಶ್ನೆಯಲ್ಲೇ ಜನ ದಿನ ಕಳೆಯುವಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights