ಕೊರೊನ ಸಂಕಟ: 2022ರವರೆಗೆ ಭೌತಿಕ ಅಂತರ ನಿಯಮ ಅನುಸರಿಸಬೇಕಾಗಬಹುದು: ತಜ್ಞರು

ಕೊರೊನ ಸಂಕ್ರಾಮಿಕ ಮತ್ತೆ ಮತ್ತೆ ಹಿಂದಿರುಗುವ ಸಾಧ್ಯತೆ ಇರುವುದರಿಂದ 2022 ರವರೆಗೆ ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

“ಸೈನ್ಸ್” ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಈ ಸಂಕ್ರಾಮಿಕವನ್ನು ನಿಯಂತ್ರಿಸಲು ಒಂದು ಸಮಯದ ಲಾಕ್ ಡೌನ್ ಸಾಕಾಗುವುದಿಲ್ಲ. ಒಂದು ಪಕ್ಷ ಈಗ ನಿಯಂತ್ರಣಕ್ಕೆ ಬಂದಲೂ ಲಸಿಕೆ ಅಥವಾ ಪರಿಣಾಮಕಾರಿ ಔಷದಿಯ ಅಲಭ್ಯವಿದ್ದ ಸನ್ನಿವೇಶದಲ್ಲಿ 2025ರವರೆಗೂ ಮತ್ತೆ ಮತ್ತೆ ಇದು ಮರುಕಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಅಧ್ಯಯನದ ಭಾಗವಾಗಿರುವ ಹಾರ್ವಾರ್ಡ್ ನ ಸಾಂಕ್ರಾಮಿಕ ರೋಗಗಳ ತಜ್ಞ ಮಾರ್ಕ್ ಲಿಪ್ಸಿಚ್ ಅವರು ತಿಳಿಸುವಂತೆ “ಸಾಂಕ್ರಾಮಿಕ ಹರಡುವಲ್ಲಿ ಎರಡು ಸಂಗತಿಗಳಿವೆ. ಆಗಲೇ ಸೋಂಕು ತಗುಲಿದ ವ್ಯಕ್ತಿಗಳು ಮತ್ತು ಸೋಂಕಿಗೆ ಒಳಗಾಗಬಲ್ಲ ವ್ಯಕ್ತಿಗಳು. ದೊಡ್ಡ ಮಟ್ಟದ ಅಂಕಿ ಅಂಶ ದೊರೆಯದ ಹೊರತು ಸಮೂಹ ರೋಹನಿರೋಧಕ ಹುಟ್ಟುವ ಬಗ್ಗೆ ಮಾಹಿತಿ ಇಲ್ಲ. ಆದುದರಿಂದ ಇಡೀ ಜನಸಂಖ್ಯೆಯ ಬಹುಪಾಲು ಜನರು ಈ ರೋಗಕ್ಕೆ ತುತ್ತಾಗುವ ಸಂಭವ ಇದೆ. ಆದುದರಿಂದ 2020 ಬೇಸಿಗೆ ನಂತರ ಈ ಸಾಂಕ್ರಾಮಿಕ ಕೊನೆಯಾಗುತ್ತದೆ ಎಂಬ ವಾದಕ್ಕೆ ಸಾಕ್ಷ್ಯಗಲಿಲ್ಲ” ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಇನ್ನೂ ಯಾವುದೇ ದೇಶಗಳು ಈಗಿನ ಸದ್ಯದ ಲಾಕ್ ಡೌನ್ ಹೊರತುಪಡಿಸಿ ಮುಂದಿನ ಕ್ರಮಗಳು ಏನು ಎಂಬುದರ ಬಗ್ಗೆ  ಯೋಜನೆಗಳನ್ನು ರೂಪಿಸಿಲ್ಲ. ಭಾರತ ಸರ್ಕಾರವೂ ಮೇ 3 ರವರೆಗಿನ ಲಾಕ್ ಡೌನ್ ಯೋಜನೆಯನ್ನು ನೆನ್ನೆಯಷ್ಟೇ ಘೋಷಿಸಿದೆ.

ಹೊಸ ಚಿಕಿತ್ಸೆ, ಲಸಿಕೆ ಅಥವಾ ತುರ್ತು ನಿಘಾ ಚಿಕಿತ್ಸೆಯಲ್ಲಿ ಗುಣಾತ್ಮಕ ಬದಲಾವಣೆ ಈಗಿರುವ ಕಠಿಣ ಭೌತಿಕ ಅಂತರ ನಿಯಮಗಳ ಕ್ರಮಗಳನ್ನು ಸಡಿಲಿಸಲು ಅವಕಾಶ ಕೊಡಬಹುದು ಆದರೇ ಅವುಗಳ ಅನುಪಸ್ಥಿತಿಯಲ್ಲಿ ಕಣ್ಗಾವಲು ಮತ್ತು ಆಗಾಗ ಭೌತಿಕ ಅಂತರ ನಿಯಮಗಳನ್ನು ಅನುಸರಿಸುವ ಕ್ರಮಗಳನ್ನು ಜಾರಿಗೊಳಿಸುವುದು 2022ರವರೆಗೆ ಮುಂದುವರೆಯಬೇಕಾಗಬಹುದು ಎಂದು ಈ ಅಧ್ಯಯನ ಅಭಿಪ್ರಾಯಪಟ್ಟಿದೆ.

ಈ ಸೋಂಕು ತಗುಲಿದ ಮೇಲೆ ಹುಟ್ಟುವ ರೋಗನಿರೋಧಕ ಶಕ್ತಿ ಖಾಯಂ ಆಗಿದ್ದರೆ ಇನ್ನು ಐದು ವರ್ಷಗಳಲ್ಲಿ ಇದು ಸಂಪೂರ್ಣ ನಿರ್ಮೂಲನೆ ಆಗಬಹುದು. ಇಂತಹ ರೋಗನಿರೋಧಕ ಶಕ್ತಿ ಹುಟ್ಟದೆ ಹೋದರೆ ಪ್ರತಿ ವರ್ಷ ಸಾಂಕ್ರಾಮಿಕ ಮರುಕಳಿಸುವ ಸಾಧ್ಯತೆ ಇದೆ. ಇವೆಲ್ಲವಕ್ಕೂ ಹೆಚ್ಚಿನ ಅಧ್ಯಯನದ ಅಗತ್ಯ ಇದೆ ಎಂದಿರುವ ಸಂಶೋಧಕರು, ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಒಂದು ಹಂತದ ಲಾಕ್ ಡೌನ್ ಮಾತ್ರ ಇದನ್ನು ತಡೆಯಲು ಪರಿಣಾಮಕಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಇದು ಅಂಕಿ ಅಂಶಗಳ ಮಾಡೆಲ್ ಮತ್ತು ಇದಕ್ಕೆ ಹಲವು ಸಂಗತಿಗಳನ್ನು ಊಹಿಸಲಾಗಿದೆ. ಈಗಿರುವ ಸದ್ಯದ ಮಾಹಿತಿಯನ್ನು ಮಾತ್ರ ಅವಲಂಬಿಸಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights