ಫ್ಯಾಕ್ಟ್‌ಚೆಕ್: ನಟರಾಜ್ ಪೆನ್ಸಿಲ್‌ನ Work from Home ನಕಲಿ ಜಾಹಿರಾತುಗಳಿಗೆ ಮಾರು ಹೂಗುವ ಮುನ್ನ ಇರಲಿ ಎಚ್ಚರ!

ಮನೆಯಲ್ಲೆ ಕೂತು ಕೆಲಸ ಮಾಡಿದ್ರೆ ಸಂಬಳ ಕೊಡ್ತಾರೆ ಅಂದ್ರೆ ಯಾರುತಾನೆ ಬೇಡ ಅಂತಾರೆ, ಈಗ ಅಂತಹದ್ದೆ ಒಂದು ಜಾಹೀರಾತು ವೈರಲ್ ಆಗಿದೆ. ದೇಶದ ಪ್ರಮುಖ ಪೆನ್ಸಿಲ್‌ ತಯಾರಿಕಾ ಸಂಸ್ಥೆಯಾದ ಹಿಂದೂಸ್ಥಾನ್‌ ಪೆನ್ಸಿಲ್ಸ್‌ ಪ್ರೈವೇಟ್ ಲಿಮಿಟೆಡ್‌ ಹೊರಡಿಸಿದೆ ಎನ್ನಲಾದ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಗಿದೆ.

4 ಜನರು ಮತ್ತು ಪಠ್ಯ ನ ಚಿತ್ರವಾಗಿರಬಹುದು

“ನಟರಾಜ್ ಪೆನ್ಸಿಲ್ ಕಂಪನಿಯು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುತ್ತಿದೆ, 1 ತಿಂಗಳ ಸಂಬಳ 30000.
ಮುಂಗಡ 15000  ನೀಡಲಾಗುವುದು. ಪೆನ್ಸಿಲ್ ಪ್ಯಾಕ್ ಇರಬೇಕು,  ತೆರೆದ ವಸ್ತುಗಳು ಮತ್ತು ಪಾರ್ಸೆಲ್ ವಸ್ತುಗಳನ್ನು ತಲುಪಿಸಬಹುದು,  ಇದನ್ನು ಬಡವರು  ವಿದ್ಯಾವಂತರು ಮತ್ತು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.

 

ಪೆನ್ಸಿಲ್ ಪ್ಯಾಕಿಂಗ್ ಕೆಲಸ, ಮನೆಯಿಂದ ಕೆಲಸ ಮಾಡಿ  ದಿನಕ್ಕೆ 1000 ದಂತೆ 1 ತಿಂಗಳ ಸಂಬಳ 30000 ವೇತನ ಪಡೆಯಿರಿ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ವಾಟ್ಸಾಪ್‌ ನಂ ಸಂಪರ್ಕಿಸಿ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. Whatsapp 8145784993 / 9685643229 ಸಂಖ್ಯೆಗಳನ್ನು ನೀಡಿದ್ದಾರೆ. ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ನಟರಾಜ್‌ ಪೆನ್ಸಿಲ್‌ ಸಂಸ್ಥೆಯಲ್ಲಿ ಪೆನ್ಸಿಲ್‌ ಪ್ಯಾಕ್‌ ಮಾಡುವ ಉದ್ಯೋಗಗಳು ಖಾಲಿ ಇವೆ. ಮನೆಯಲ್ಲಿಯೇ ಕುಳಿತು ₹30,000ದ ವರೆಗೆ ಹಣ ಸಂಪಾದಿಸಬಹುದು ಎಂದು ಹಲವು ಜಾಹೀರಾತುಗಳನ್ನು ನೀಡಲಾಗಿದೆ. ಕೆಲಸ ಮಾಡಲು ಇಚ್ಚಿಸುವವರು ಕಂಪನಿಯ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳನ್ನೂ ನೀಡಲಾಗಿದೆ. ಹೀಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳನ್ನು ಪರಿಶೀಲಿಸಿದಾಗ ಇದು ನಕಲಿ ಜಾಹಿರಾತು ಎಂದು ತಿಳಿದುಬಂದಿದೆ.

ನಟರಾಜ್‌ ಪೆನ್ಸಿಲ್ಸ್ ಕಂಪನಿ ಫೇಸ್‌ಬುಕ್‌ನಲ್ಲಿ ಹೊರಡಿಸಲಾದ ಜಾಹೀರಾತು ನಕಲಿಯಾಗಿದೆ ಎಂದು ಹಿಂದೂಸ್ಥಾನ್‌ ಪೆನ್ಸಿಲ್ಸ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ನಟರಾಜ್‌ ಪೆನ್ಸಿಲ್‌ಗಳನ್ನು ಪ್ಯಾಕ್‌ ಮಾಡುವ ಕೆಲಸ ಲಭ್ಯ ಇದೆ ಎಂಬಂತ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವು ನಕಲಿ ಜಾಹೀರಾತುಗಳಾಗಿದ್ದು, ಹಿಂದೂಸ್ಥಾನ್‌ ಪೆನ್ಸಿಲ್ಸ್‌ ಸಂಸ್ಥೆಗೆ ಸಂಬಂಧಿಸಿಲ್ಲ. ಸಂಸ್ಥೆಯ ಪೆನ್ಸಿಲ್‌ಗಳ ತಯಾರಿ ಮತ್ತು ಪ್ಯಾಕಿಂಗ್‌ ಸಂಪೂರ್ಣವಾಗಿ ಯಂತ್ರಗಳ ಮೂಲಕ ನಡೆಯುತ್ತದೆ. ಈ ಪ್ರಕ್ರಿಯೆಗೆ ಜನರ ಅಗತ್ಯವಿಲ್ಲ ಎಂದು ತಿಳಿಸಿದೆ.

ಜಾಹಿರಾತುಗಳು ಒಂದು ವಂಚನೆಯ ಜಾಲವಾಗಿದ್ದು, ಇದಕ್ಕೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇದನ್ನು ನಂಬಿ ಮೂಸಹೋಗದಂತೆ ಕಂಪನಿ ತಿಳಿಸಿದೆ. ಈ ರೀತಿ ನಕಲಿ ಜಾಹಿರಾತು ನೀಡುವವರ ಉದ್ದೇಶ ಮುಗ್ದ ಜನರನ್ನು ಮೋಸಗೊಳಿಸುವುದೇ ಆಗಿರುತ್ತದೆ.

ಜಾಹೀರಾತಿನೊಂದಿಗೆ ಮೊಬೈಲ್‌ ಸಂಖ್ಯೆಯನ್ನು ನೀಡಿರುತ್ತಾರೆ, ಒಂದು ವೇಳೆ ಆ ಸಂಖ್ಯೆಗೆ ಕರೆ ಮಾಡಿದರೆ ಕೊನೆಗೆ ಒಂದೇ ಅವಕಾಶ ಇರುವುದು ತಕ್ಷಣಕ್ಕೆ ಒಂದಷ್ಟು ಹಣವನ್ನು ಡೆಪಾಸಿಟ್‌ ಇಡುವಂತೆ ಸೂಚಿಸುತ್ತಾರೆ, ಮಾಸಿಕ 30 ಸಾವಿರ ವೇತನದ ಆಸೆಗೆ ಒಂದಷ್ಟು ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡುತ್ತಾರೆ. ಅಲ್ಲಿಗೆ ಅವರ ಫೋನ್ ನಂ ಸ್ವಿಚ್ ಆಫ್ ಆಗುತ್ತದೆ ಅಥವ ಕರೆ ಸ್ವೀಕರಿಸದೆ ಮತ್ತಷ್ಟು ಹಣ ಕೀಳಲು ಪ್ರಯತ್ನಿಸುತ್ತಾರೆ. ಇವರ ಗುರಿ ಸದಾ ಮುಗ್ದ ಜನರೇ ಆಗಿರುತ್ತಾರೆ. ಹಾಗಾಗಿ ಇಂತಹ ನಕಲಿ ಜಾಹೀರಾತನ್ನು ನಂಬಿ ಮೋಸ ಹೋಗುವ ಮುನ್ನ ಎಚ್ಚರವಿರಲಿ.

ಪೆನ್ಸಿಲ್ ಪ್ಯಾಕಿಂಗ್ ಜಾಬ್ ಎಂಬ ಈ ಹಗರಣದ ಬಗ್ಗೆ ಈ ಹಿಂದೆಯೂ ಸುದ್ದಿ ಲೇಖನಗಳು ವರದಿಯಾಗಿದ್ದವು. ಈ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅದಾನಿ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಅಕ್ರಮ ಸಂಬಂಧ ಇದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights