ಫ್ಯಾಕ್ಟ್‌ಚೆಕ್: 2019ರ ಹಳೆಯ ದೃಶ್ಯಗಳನ್ನು ಟರ್ಕಿ ಮತ್ತು ಸಿರಿಯಾದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೆ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 28 ಸಾವಿರಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ “ದ್ವಿಗುಣವಾಗಬಹುದು ಅಥವಾ ಅದಕ್ಕಿಂತ ಹೆಚ್ಚು” ಆಗಬಹುದು ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಅವರು ಹೇಳಿದ್ದಾರೆ.
https://twitter.com/iamironman_x7/status/1624281270694936579
ಕಟ್ಟಡಗಳ ಅವೇಶಷಗಳಡಿಯಲ್ಲಿ ಸಾಕಷ್ಟು ಜನರು ಸಿಲುಕಿರುವುದು ಹಾಗೂ ರಕ್ಷಣಾ ತಂಡಗಳು ಅವರನ್ನು ರಕ್ಷಿಸುವುದರಲ್ಲಿ ನಿರತವಾಗಿವೆ. ಹೀಗೆ ಸಿಲುಕಿದವರ ಪರಿಸ್ಥಿತಿ, ಅವರಿಗೆ ತಗುಲಿದ ಗಾಯ, ಹವಾಮಾನ ಪರಿಸ್ಥಿತಿ ಹಾಗೂ ಹೇಗೆ ಸಿಲುಕಿದ್ದಾರೆ ಎಂಬುದರ ಮೇಲೆ ನಿರ್ಧರಿತವಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ವಿನಾಶಕಾರಿ ಭೂಕಂಪದಿಂದ ಕಾಣೆಯಾಗಿರುವ ಅದೆಷ್ಟೋ ಜನರನ್ನು ಹುಡುಕಲು ಪ್ರಪಂಚದಾದ್ಯಂತದ ಹುಡುಕಾಟ ತಂಡಗಳು ಟರ್ಕಿ ಮತ್ತು ಸಿರಿಯಾದಲ್ಲಿ ಸ್ಥಳೀಯ ತುರ್ತು ಸಿಬ್ಬಂದಿಯನ್ನು ಸೇರಿಕೊಂಡಿವೆ.
Be kind to every kind not just mankind. #TurkeySyriaEarthquake pic.twitter.com/bAthdukeDR
— Marcela Menéndez (@marcelamenendez) February 8, 2023
ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಕುಸಿದ ಕಟ್ಟಡದ ಅವಶೇಷಗಳಡಿಯಿಂದ ವ್ಯಕ್ತಿಯೊಬ್ಬ ನಾಯಿ ಮತ್ತು ನಾಯಿ ಮರಿಗಳನ್ನು ರಕ್ಷಿಸಲು ಯತ್ನಿಸುತ್ತಿರುವ ವಿಡಿಯೋ ಪ್ರಸಾರವಾಗುತ್ತಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪನಕ್ಕೆ ಸಂಬಂಧಿಸಿವೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ದೃಶ್ಯಗಳು ಟರ್ಕಿಯ ಭೂಕಂಪನಕ್ಕೆ ಸಂಬಂಧಿಸಿವೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಟರ್ಕಿಯಲ್ಲಿ ಸಂಭವಿಸಿರುವ ಭೂಕಂಪನ ಅವಶೇಷಗಳಡಿಯಲ್ಲಿ ಸಿಲುಕಿರುವ ನಾಯಿ ಮತ್ತು ನಾಯಿ ಮರಿಗಳನ್ನು ರಕ್ಷಿಸಲಾಗುತ್ತಿರುವ ವಿಡಿಯೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2019 ರಲ್ಲಿ YouTubeನಲ್ಲಿ ಹಂಚಿಕೊಂಡ ಇದೇ ರೀತಿಯ ವಿಡಿಯೊ ಲಭ್ಯವಾಗಿದೆ.
ನಾಯಿ ತನ್ನ ನಾಯಿಮರಿಗಳನ್ನು ಕಾಪಾಡಲು ಬಂದ ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುತ್ತದೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಇದನ್ನು 28 ಆಗಸ್ಟ್ 2019 ರಂದು ಅನಿಮಲ್ ಏಡ್ ಅನ್‌ಲಿಮಿಟೆಡ್, ಮತ್ತು street animal rescue center in India ಎಂಬ NGOದಿಂದ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಮನೆಯೊಂದು ಕುಸಿದು ಬಿದ್ದಾಗ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ನಾಯಿ ಮರಿಗಳನ್ನು ಹೊರತೆಗೆಯಲು ಅನಿಮಲ್ ಏಡ್ ನ ರಕ್ಷಕರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ವಿಡಿಯೊ ವಿವರಣೆಯಲ್ಲಿ ಹೇಳಲಾಗಿದೆ.
ನಾಯಿ ಮತ್ತು ನಾಯಿ ಮರಿಗಳನ್ನು ರಕ್ಷಸಿದ ರಾಜ್ ಕಿಶೋರ್ ಕುಮಾರ್ ಅವರನ್ನು ದಿ ಕ್ವಿಂಟ್ ಸಂಪರ್ಕಿಸಿದಾಗ ವೈರಲ್ ವಿಡಿಯೋ ಟರ್ಕಿ ಮತ್ತು ಸಿರಿಯಾ ಭೂಕಂಪನಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ. ವಾಸ್ತವವಾಗಿ ಈ ವಿಡಿಯೋ 2019ರದ್ದು ಎಂದು ತಿಳಿಸಿದ್ದಾರೆ.
ಒಟ್ಟರೆಯಾಗಿ ಹೇಳುವುದಾದರೆ, 2019ರಲ್ಲಿ ಭಾರತದ ಉದಯಪುರದ ಹಳೆಯ ವಿಡಿಯೊವನ್ನು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅದಾನಿ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಅಕ್ರಮ ಸಂಬಂಧ ಇದೆಯೇ?

