ಉತ್ತಮ ಮಳೆ – ಅಧಿಕ ಬೆಳೆ : ಆದರೂ ರೈತರ ಮುಖದಲ್ಲಿಲ್ಲ ಮಂದಹಾಸ…

ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಉತ್ತಮಮಳೆಯಾಗಿದೆ. ಮಳೆಯಿಂದ krs ಜಲಾಶಯ ತುಂಬಿದ್ದು ಜಿಲ್ಲೆಯ ರೈತರು ಕೂಡ ಉತ್ತಮ ಬೆಳೆ ಬೆಳೆದಿದ್ದಾರೆ. ಉತ್ತಮ ಮಳೆಯಾಗಿ ಉತ್ತಮ ಬೆಳೆ ಬೆಳೆದಿದ್ರು ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ೨ ಸಕ್ಕರೆ ಕಾರ್ಖಾನೆಗಳಾ್ PSSK & ಮೈಷುಗರ್ ಸಕ್ಕರೆ‌ ಕಾರ್ಖಾನೆಗಳು ಸ್ಥಗಿತಗೊಂಡಿರೋದ್ರಿಂದ ಒಂದು ಕಡೆ ಕಬ್ಬು ಬೆಳೆದ ರೈತರು ಸಂಕಷ್ಟದಲ್ಲಿದ್ರೆ,ಮತ್ತೊಂದು ಕಡೆ ಸೊಗಸಾಗಿ ಭತ್ತ ಬೆಳೆದಿದ್ರು ಸರ್ಕಾರ ಭತ್ತ ಖರೀದಿ ಕೇಂದ್ರ ತೆರಯದ ಕಾರಣ ಭತ್ತ ಬೆಳೆದ ರೈತರು ಕೂಡ ದಳ್ಳಾಳಿಗಳಿಂದ ಶೋಷಣೆ ಗೊಳಗಾಗಿ ಸಂಕಷ್ಟದಲ್ಲಿದ್ದಾರೆ.

 

ಹೌದು! ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಈ ಭಾಗದ krs ಡ್ಯಾಂ ಭರ್ತಿಯಾಗಿ ರೈತರು ಕೂಡ ಸೊಗಸಾಗಿ ಭತ್ತ ಮತ್ತು ಕಬ್ಬು ಬೆಳೆ ಬೆಳೆದಿದ್ದಾರೆ. ಆದ್ರೆ ಸೊಗಸಾಗಿ‌ ಭತ್ತ ಕಬ್ಬು ಬೆಳೆದಿದ್ರು ರೈತರ ಸಂಕಷ್ಟ ಮಾತ್ರ ದೂರ ಆಗಿಲ್ಲ. ಯಾಕೆಂದ್ರೆ ಸೊಗಸಾಗಿ ಕಬ್ಬು ಬೆಳೆದ್ರು ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡಿರೋದ್ರಿಂದ ಕಬ್ಬು ಬೆಳೆದ ರೈತರು ಒಂದು ಕಡೆ ಸಂಕಷ್ಟದಲ್ಲಿದ್ರೆ,ಮತ್ತೊಂದು ಕಡೆ ಭತ್ತ ಬೆಳೆದ ರೈತರು ಕೂಡ ಜಿಲ್ಲೆಯದ್ಯಂತ ಸೊಗಸಾದ ಭತ್ತ ಬೆಳೆದ್ರು ಸರಿಯಾದ ಸಮಯಕ್ಕೆ ಭತ್ತ ಖರಿದೀ ಕೇಂದ್ರ ತೆರೆಯದ ಕಾರಣಕ್ಕೆ ಸರ್ಕಾರದ ಬೆಂಬಲ ಬೆಲೆ ಸಿಗದೆ ಭತ್ತ ಬೆಳೆದ ರೈತ ದಲ್ಲಾಳಿಗಳಿಂದ ನಷ್ಟ ಅನುಭವಿಸುವಂತಾಗಿದೆ. ಸರಿಯಾದ ಸಮಯಕ್ಕೆ ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದಿಲ್ಲವೆಂದು ರೈತ ಸಂಕಷ್ಟ ತೋಡಿಕೊಂಡ್ರೆ, ಭತ್ತದ ದಳ್ಳಾಳಿಗಳೂ ರೈತರ ಜಮೀನಿನ ಬಳಿಯೇ ಲಾರಿ ತೆಗೆದುಕೊಂಡು ಕಡಿಮೆ ಬೆಲೆ ರೈತರಿಂದ ಭತ್ತಕೊಂಡು ಬೇರೆಡೆ ಮಾರಾಟ ಮಾಡ್ತಿದ್ದಾರೆ.

ಇನ್ನು ಈ ಬಾರಿ ಜಿಲ್ಲೆಯಲ್ಲಿ ರೈತರು ವ್ಯಾಪಕ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ಆದ್ರೆ ಸರ್ಕಾರ ಭತ್ತ ಬೆಳೆದ ರೈತರಿಗೆ ಅನುಕೂಲವಾಗು ವಂತೆ ಸಮಯಕ್ಕೆ ಸರಿಯಾಗಿ ಭತ್ತ ಖರಿದೀ ಕೇಂದ್ರ ತೆರೆದಿಲ್ಲ.ಈ ಕಾರಣಕ್ಕೆ ಭತ್ತ ಬೆಳೆದ ರೈತ ದಲ್ಲಾಳಿಗಳ ಮೂಲಕ ಬೆಳೆದ ಭತ್ತವನ್ನು ಕಡಿಮೆ ದರಕ್ಕೆ ಮಾರಾಟ ಮಾಡ್ತಿದ್ದಾನೆ. ಭತ್ತ ಮಾರಾಟ ಕುರಿತಾಗಿ ರೈತರು ಈಗಾಗಲೇ ಹಲವು ಪ್ರತಿಭಟನೆ ಮಾಡಿದ್ರಿಂದ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಡ ಹೇರಿದ್ರಿಂದ ಭತ್ತ ಖರೀದಿ ಕೇಂದ್ರ ತೆರಯಲು ಸರ್ಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಮೊನ್ನೆ ಮಂಡ್ಯದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ ಡಿ-೨೬ ಕ್ಕೆ ಭತ್ತ ಖರೀದಿ ಕೇಂದ್ರಗಳ ನೊಂದಣಿ ಆರಂಭಿಸಲಾಗಿದೆ. ಅಲ್ದೆ ರೈತರ ಭತ್ತಕ್ಕೆ ಸರ್ಕಾರ ೧೮೧೫ ಮತ್ತು ೧೮೨೫ ರೂ ಬೆಂಬಲ ಬೆಲೆ ನಿಗದಿ ಮಾಡಿರೋದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ತಿಳಿಸಿದ್ದಾರೆ‌.

ಒಟ್ಟಿನಲ್ಲಿ ಮಂಡ್ಯ ರೈತರು ಅತ್ತ ಕಬ್ಬು ಬೆಳೆ ಬೆಳೆದ್ರು ೨ ಕಾರ್ಖಾನೆ ಮುಚ್ಚಿರೋ ಕಾರಣದಿಂದ ಒಂದು ಕಡೆ ಸಂಕಷ್ಟ ಪಡ್ತಿದ್ರೆ ಇತ್ತ ಭತ್ತ ಬೆಳೆದ ರೈತರು ಭತ್ತ ಖರೀದಿ ಕೇಂದ್ರಗಳಿದೆ ಪರದಾಡ್ತಿದ್ರು ಶೀಘ್ರವೇ ಸರ್ಕಾರ ಮತ್ತು ಜಿಲ್ಲಾಡಳಿತ ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights