FACT CHECK | ಮೈಸೂರಿನ ಮಾಲ್‌ನಲ್ಲಿ ಎಸ್ಕಲೇಟರ್‌ಗಳು ಕುಸಿದು ಹಲವು ಜನರು ಸಾವನಪ್ಪಿದ್ದು ನಿಜವೇ?
ಮಾಲ್‌ವೊಂದರಲ್ಲಿ ಎಸ್ಕಲೇಟರ್ ಕುಸಿದು ಜನರು ಸಾವನಪ್ಪಿದ್ದಾರೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮೈಸೂರಿನ ಬಿ.ಎಂ. ಹ್ಯಾಬಿಟ್ಯಾಟ್ ಮಾಲ್‌ಗೆ ಈ ವಿಡಿಯೋ ಸಂಬಂಧಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಮಾಲ್‌ನಲ್ಲಿದ್ದ ಹಲವು ಎಸ್ಕಲೇಟರ್‌ಗಳು ಏಕಕಾಲಕ್ಕೆ ಕುಸಿಯುವುದು ವಿಡಿಯೊದಲ್ಲಿದೆ. ಅವಘಡದಲ್ಲಿ ಅನೇಕರು ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 10 ರಂದು ಯೂಟ್ಯೂಬ್ ಚಾನೆಲ್ ಡಿಸಾಸ್ಟರ್ ಸ್ಟ್ರಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಅದೇ ವೈರಲ್ ವೀಡಿಯೊ ಲಭ್ಯವಾಗಿದೆ. ಯೂಟ್ಯೂಬ್ ಕ್ರಿಯೇಟರ್ ಹಂಚಿಕೊಂಡ ವಿವರಗಳ ಪ್ರಕಾರ ಇದು AI- ರಚಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿವೆ. ಶೀರ್ಷಿಕೆಯಲ್ಲಿ, “ಇದು ನನ್ನಿಂದ ರಚಿಸಲ್ಪಟ್ಟ AI ಕಲೆ” ಎಂದು ಬರೆಯಲಾಗಿದೆ.
ಮತ್ತಷ್ಟು ಪರಿಶೀಲಿಸಲು, ನಾವು ವೈರಲ್ ವೀಡಿಯೊವನ್ನು AI ಡಿಟೆಕ್ಟರ್ ಉಪಕರಣವಾದ ಹೈವ್‌ನೊಂದಿಗೆ ಪರಿಶೀಲಿಸಿದ್ದೇವೆ ಮತ್ತು ವೀಡಿಯೊ AI- ರಚಿತವಾಗಿದೆ ಎಂದು ಕಂಡುಕೊಂಡಿದ್ದೇವೆ. ವೀಡಿಯೊ 99% AI- ರಚಿತ ವಿಷಯವನ್ನು ತೋರಿಸುತ್ತದೆ. ಇದಲ್ಲದೆ, ಸೂಕ್ತ ಕೀವರ್ಡ್‌ಗಳನ್ನು ಬಳಸಿ ವಿಡಿಯೋವನ್ನು ಸರ್ಚ್ ಮಾಡಿ ಪರಿಶೀಲಿಸಿದಾಗ, ಮೈಸೂರಿನ ಮಾಲ್‌ನಲ್ಲಿ ಲಿಫ್ಟ್‌ಗಳು ಕುಸಿದುಬಿದ್ದ ಯಾವುದೇ ಘಟನೆ ನಡೆದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ಆದರೂ, ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ BM ಹ್ಯಾಬಿಟ್ಯಾಟ್ ಮಾಲ್‌ನಲ್ಲಿ ಸೆಪ್ಟೆಂಬರ್ 08, 2025 ರಂದು ಒಂದು ದುರಂತ ಅಪಘಾತ ಸಂಭವಿಸಿದೆ ಎಂದು ಹೇಳುವ ವರದಿಗಳು ಲಭ್ಯವಾಗಿವೆ.

ಮಾಲ್‌ನಲ್ಲಿ ಟೆಕ್ನೀಷಿಯನ್ ಆಗಿದ್ದ ಸುನೀಲ್ ಸಂಜೆ 5 ಗಂಟೆ ಸಮಯದಲ್ಲಿ ಮಾಲ್ ಒಳ ಆವರಣದಲ್ಲಿ 60 ಅಡಿ ಎತ್ತರದಲ್ಲಿ ಅಳವಡಿಕೆಯಾಗಿದ್ದ ಬ್ಯಾನರ್ ತೆರವುಗೊಳಿಸುವ ಕಾರ್ಯದಲ್ಲಿದ್ದರು. ಈ ವೇಳೆ ಪಿಒಪಿ ಬಾರ್ ಮೇಲೆ ಕಾಲಿಟ್ಟಿದ್ದಾರೆ. ತಕ್ಷಣವೇ ಬಾರ್ ಕುಸಿದು ಸುನೀಲ್ ಕೆಳಗೆಬಿದ್ದಿದ್ದಾರೆ. ಈ ವೇಳೆ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಚಂದ್ರು ಕೂಡ ಸ್ಥಳದಲ್ಲಿಯೇ ಇದ್ದು ರಕ್ಷಣೆಗೆ ಮುಂದಾಗಿ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದಿದೆ. ಇದೇ ವರದಿಯಲ್ಲಿ ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದ ಸುನೀಲ್ (35) ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂ ನಿವಾಸಿ ಚಂದ್ರು (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.
ಈ ಎಲ್ಲಾ ಆಧಾರದಲ್ಲಿ ಹೇಳುವುದಾದರೆ, AI ತಂತ್ರಜ್ಞಾನ ಬಳಸಿ ರಚಿಸಲಾದ ವಿಡಿಯೋವನ್ನು ಹಂಚಿಕೊಂಡು ಮೈಸೂರಿನ BM ಹ್ಯಾಬಿಟ್ಯಾಟ್ ಮಾಲ್‌ನಲ್ಲಿ ಹಲವು ಎಸ್ಕಲೇಟರ್‌ಗಳು ಏಕಕಾಲಕ್ಕೆ ಕುಸಿದು ಹಲವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಪೋಸ್ಟ್ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನೇಪಾಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆಯೇ?

