ಕೊರೋನಾ ಭೀತಿ; ಭಾರಿ ಇಳಿಕೆ ಕಂಡ ಮೋದಿ ವಿದೇಶ ಪ್ರಯಾಣ ವೆಚ್ಚ

ಭಾರತದ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಖರ್ಚಿನ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದೆ. ಕಳೆದ ಐದು ವರ್ಷದಲ್ಲಿ ಪ್ರಧಾನಿ ಮೋದಿಯವರ ವಿದೆಶಿ ಭೇಟಿಗಾಗಿ 446.52 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಈ ಪೈಕಿ 2019-20ನೇ ಸಾಲಿನ ವಿದೇಶಿ ಪ್ರಯಾಣದಲ್ಲಿ ಭಾರಿ ಇಳಿಕೆ ಕಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 18 ಗಂಟೆಗಳ ನಿರಂತರ ಕೆಲಸದ ಒತ್ತಡದಿಂದ ಬಸವಳಿಯುತ್ತಿದ್ದರು. ಹೆಚ್ಚು ಒತ್ತಡದ ಕೆಲಸಗಳಿದ್ದಾಗ ವಿಶ್ರಾಂತಿಗಾಗಿ ಆಗಾಗಕೆಲವು ದೇಶಗಳಿಗೆ ಭೇಟಿ ನೀಡಿ, ದೇಶಗಳನ್ನು ಸುತ್ತಾಡಿ ಸ್ಟ್ರೆಸ್‌ ಕಡಿಮೆ ಮಾಡಿಕೊಂಡು ಬರುತ್ತಿದ್ದರು.

ಕೆಲಸದ ಒತ್ತಡಗಳಿಂದ ನಿರಾಯಾಸಗೊಳ್ಳಲು ಮೋದಿಯವರು ಪ್ರತಿವರ್ಷ ಬೆಳೆಸುತ್ತಿದ್ದ ವಿದೇಶಿ ಪ್ರಯಾಣದ ವೆಚ್ಚವು 2015-16ರ ಸಾಲಿನಲ್ಲಿ 121.85 ಕೋಟಿ ರೂ. 2016-17ರಲ್ಲಿ 78.52 ಕೋಟಿ ರೂ, 2017-18ರಲ್ಲಿ 99.90 ಕೋಟಿ ರೂಗಳು, 2018-19ರಲ್ಲಿ 100.02 ಕೋಟಿ ರೂಗಳು ಹಾಗೂ 2019-2020ನೇ ಸಾಲಿನಲ್ಲಿ 46.23 ಕೋಟಿ ರೂಗಳನ್ನು ಬಳಸಲಾಗಿದೆ. ಸೆಂಚುರಿ ಸ್ಟಾರ್ನಂತೆ ಐದು ವರ್ಷಗಳಲ್ಲಿ 446 ಕೋಟಿಗಳನ್ನು ವಿದೇಶಿ ಪ್ರವಾಸಕ್ಕಾಗಿ ಬಳಸಿರುವ ಮೋದಿಯವರು ಪ್ರಧಾನಿಗಳ ವಿದೇಶಿ ಪ್ರವಾಸದ ಮೊತ್ತದಲ್ಲಿ ಭಾರಿ ದಾಖಲೆ ಮಾಡಿದ್ದಾರೆ.

ಈ ಐದು ವರ್ಷಗಳಲ್ಲಿ 2019-20ನೇ ಸಾಲಿನಲ್ಲಿ ಮೋದಿಯವರ ವಿದೇಶಿ ಪ್ರಯಾಣದ ವೆಚ್ಚ 46 ಕೋಟಿಗೆ ಇಳಿದಿರುವುದು ಆಶ್ಚರ್ಯವನ್ನು ಸೃಷ್ಟಿಸಿದೆ. ಇಂತಹ ಆಶ್ಚರ್ಯಕ್ಕೆ ಕಾರಣವನ್ನು ಹುಡುಕಿದಾಗ ತಿಳಿದುಬಂದ ಸಂಗತಿ ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್‌ ಎಂದು ಗುರುತಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಇಡೀ ಪ್ರಪಂಚವನ್ನೇ ನಿಬ್ಬರಗು ಗೊಳಿಸಿರುವ ಕೊರೋನಾ ವೈರಸ್‌ ದಾಳಿಯಿಂದಾಗಿ ಮೋದಿಯವರು ತಮ್ಮ ಆರೋಗ್ಯದ ಮೇಲಿನ ಕಾಳಜಿಯಿಂದ ಭಾರತದಲ್ಲೇ ಇದ್ದು ತಮ್ಮ ಕೆಲಸದ ಒತ್ತಡ ಮತ್ತು ತಲೆನೋವನ್ನು ನಿವಾರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೇಳಿಬಂದಿದ್ದು, ಇದರಿಂದಾಗಿ ದೇಶದ ಬೊಕ್ಕಸಕ್ಕೆ ಸುಮಾರು 50 ಕೋಟಿ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ.

ಅಲ್ಲದೆ, ಇದೇ ಕಾರಣಕ್ಕೆ ಆರೋಗ್ಯಾಧಿಕಾರಿಗಳ ಸಲಹೆಯಂತೆ ಬೆಲ್ಜಿಯಂನ ರಾಜಧಾನಿ ಬ್ರಸೆಲ್‌ನಲ್ಲಿ ನಡೆಯಬೇಕಿದ್ದ ಭಾರತ-ಯುರೋಪಿಯನ್ ಯೂನಿಯನ್ (ಇಯು) ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights