ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಭಾರತೀಯ ಪ್ರಜೆಯನ್ನು ಅಪಹರಿಸಿದ ತಾಲಿಬಾನಿಗಳು!

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕಾಬೂಲ್ ನಲ್ಲಿ ತಾಲಿಬಾನಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಇತ್ತೀಚೆಗೆ ಸ್ಥಳೀಯ ಪತ್ರಕರ್ತರನ್ನು ಪ್ರತಿಭಟನೆಯ ವರದಿ ಮಾಡಿದ್ದಕ್ಕೆ ಮನಬಂದಂತೆ ಥಳಿಸಿದ ತಾಲಿಬಾನಿಗಳು ಅಫ್ಘಾನಿಸ್ತಾನ ಮೂಲದ ಭಾರತೀಯನನ್ನು ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಅಪಹರಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಅಪಹರಿಸಲಾದವರನ್ನು 50 ವರ್ಷದ ಅಫ್ಘಾನಿಸ್ತಾನ ಮೂಲದ ಭಾರತೀಯ ಪ್ರಜೆಯನ್ನು ಬನ್ಸ್ರಿ ಲಾಲ್ ಅರೆಂದೆಹ್ ಎಂದು ಗುರುತಿಸಲಾಗಿದೆ. ಇವರನ್ನು ಕಾಬೂಲ್‌ನಲ್ಲಿ ಗನ್‌ಪಾಯಿಂಟ್‌ನಲ್ಲಿ ಅಪಹರಿಸಲಾಗಿದೆ ಎಂದು ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಆರೋಪಿಸಿದ್ಧಾರೆ.

“ನಾನು ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಅವರು ಮಧ್ಯಸ್ಥಿಕೆ ವಹಿಸಿ ಸಹಾಯ ಮಾಡಲು ಕೋರಿದ್ದೇನೆ” ಎಂದು ಪುನೀತ್ ಸಿಂಗ್ ಚಾಂದೋಕ್ ಹೇಳಿದರು.

“ನಿನ್ನೆ ಬೆಳಿಗ್ಗೆ 8 ಗಂಟೆಗೆ ಅವರ ಔಷಧೀಯ ಉತ್ಪನ್ನಗಳ ವ್ಯಾಪಾರದಲ್ಲಿ ಸಿಬ್ಬಂದಿಯೊಂದಿಗೆ ನಿರತರಾಗಿದ್ದ ಬನ್ಶ್ರೀ ಲಾಲ್ ಅರೆಂದೆಹ್ ಅವರನ್ನು ಅಪಹರಿಸಲಾಗಿದೆ ಎಂದು ಅಫ್ಘಾನ್-ಹಿಂದೂ ಸಿಖ್ ಸಮುದಾಯದವರು ನನಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೆ ಬನ್ಶ್ರೀ ಲಾಲ್ ಅರೆಂದೆಹ್ ಅವರೊಂದಿಗೆ ಇದ್ದ ಆತನ ಸಿಬ್ಬಂದಿಯನ್ನು ಅಪಹರಿಸಲಾಯಿತು. ಆದರೆ ಆತನ ಸಿಬ್ಬಂದಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರನ್ನು ಅಪಹರಣಕಾರರು ನಿಷ್ಕರುಣೆಯಿಂದ ಥಳಿಸಿದರು. ಈ ಘಟನೆ ಕಾಬೂಲ್‌ನ 11 ನೇ ಪೊಲೀಸ್ ಜಿಲ್ಲೆಯಲ್ಲಿ ನಡೆದಿದೆ” ಎಂದು ಪುನೀತ್ ಸಿಂಗ್ ಚಾಂದೋಕ್ ಹೇಳಿದರು.

ಬನ್ಸ್ರಿ ಲಾಲ್ ಅರೆಂದೆಹ್ ಅವರ ಕುಟುಂಬ ದೆಹಲಿ ಎನ್‌ಸಿಆರ್‌ನಲ್ಲಿ ವಾಸಿಸುತ್ತಿದೆ. ಸ್ಥಳೀಯ ಸಮುದಾಯದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಸ್ಥಳೀಯ ತನಿಖಾ ಸಂಸ್ಥೆಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆತನ ಸ್ನೇಹಿತರ ಸಹಾಯ ಪಡೆದು ಶೋಧ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights