FACT CHECK | ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕನಿಗೆ ಮುಸ್ಲಿಮರು ಚಪ್ಪಲಿ ಹಾರ ಹಾಕಿದ್ದು ನಿಜವೇ?

ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ನೀಡಿದ ಗೌರವ ಎಂಬ ಹೇಳಿಕೆಯೊಂದಿಗೆ, ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ವ್ಯಕ್ತಿಯೊಬ್ಬರಿಗೆ ಚಪ್ಪಲಿ ಹಾರ ಹಾಕಿದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ಚಪ್ಪಲಿ ಹಾರ ಹಾಕಿ ಅವಮಾನಿಸಿದರೇ?

“40ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಹಿಂದೂ ಶಿಕ್ಷಕನಿಗೆ ನಿವೃತ್ತಿಯ ದಿನ ಬಾಂಗ್ಲಾದೇಶದ ಮುಸ್ಲಿಮರು ನೀಡಿದ ಗೌರವ. ಕಾಫಿರನ ಸೇವೆಗೆ ನಾವು ಕೊಡುವ ಗೌರವ ಎಂದ ಮುಸ್ಲಿಂ ಸ್ಕಾಲರ್” ಎಂದು ಹಂಚಿಕೊಂಡ ವಿಡಿಯೋವೊಂದು ಫೇಸ್‌ಬುಕ್‌ನಲ್ಲಿಯೂ ಕಂಡುಬಂದಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇವುಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು  ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 15ರಂದು ಡಾಕಾ ಟೈಮ್ಸ್ 24 ಎಂಬ ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, ಈ ಘಟನೆ ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ಬಲಿಯಕಂಡಿ ಪ್ರದೇಶದಲ್ಲಿ ನಡೆದಿದೆ ಅಲ್ಲಿ ಅಹಮದ್ ಆಲಿ ಎಂಬ ನಿವೃತ್ತ ವೈದ್ಯಾಧಿಕಾರಿಯನ್ನು ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಕೋಪಗೊಂಡ ಗುಂಪೊಂದು ಥಳಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಹಲ್ಲೆಗೊಳಗಾದ ವ್ಯಕ್ತಿ ಮುಸಲ್ಮಾನ ಎಂಬುದು ಖಚಿತವಾಗಿದೆ.

ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ಚಪ್ಪಲಿ ಹಾರ ಹಾಕಿ ಅವಮಾನಿಸಿದರೇ?

ಜೂನ್ 15, 2025ರ kopotakkhonews ವರದಿಯ ಪ್ರಕಾರ, ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ ನಿವೃತ್ತ ಆರೋಗ್ಯಾಧಿಕಾರಿ ಮೇಲೆ ಹಲ್ಲೆ ನಡೆದಿದೆ. ಆತನನ್ನು ಅಹ್ಮದ್ ಅಲಿ ಎಂದು ಗುರುತಿಸಲಾಗಿದೆ ಎಂದಿದೆ. ಚಹಾ ಅಂಗಡಿಯೊಂದರಲ್ಲಿ ಕೂತು ಆತ ಹೇಳಿಕೆ ನೀಡಿದ್ದು, ಈ ವೇಳೆ ಉದ್ರಿಕ್ತ ಗುಂಪು ಆತನಿಗೆ ಥಳಿಸಿದೆ. ಗಾಯಗೊಂಡ ಆತನನ್ನು ರಕ್ಷಿಸಲಾಗಿದೆ ಎಂದಿದೆ.

ಈ ಘಟನೆಯ ಹಿನ್ನೆಲೆಯ ಬಗ್ಗೆ ಪರಿಶೀಲನೆ ನಡೆಸಿದಾಗ ಅಲಿ ಅವರು ಚಹಾದ ಅಂಗಡಿಯಲ್ಲಿ ಕುಳಿತುಕೊಂಡು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪರ್ಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಸುತ್ತಮುತ್ತಲಿನ ಜನರು ಈ ಬಗ್ಗೆ ತಿಳಿದ ನಂತರದಲ್ಲಿ ಅಲಿಯನ್ನು ಸುತ್ತುವರೆದು ಥಳಿಸಿದರು. ಬಳಿಕ ಪೊಲೀಸರು ವೈದ್ಯಾಧಿಕಾರಿಯನ್ನು ರಕ್ಷಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನ ಹುಟ್ಟು ಹಾಕಿದ್ದು, ಬಾಂಗ್ಲಾದೇಶದ ಬರಹಗಾತಿ ತಸ್ಲೀಮಾ ನಸ್ರಿನ್ ಸೇರಿದಂತೆ ಅನೇಕರು ಡಾಕ್ಟರ್ ಅಹಮದ್ ಅಲಿ ಅವರ ಮೇಲಿನ ಹಲ್ಲೆ ಮತ್ತು ಅನುಚಿತ ವರ್ತನೆಯನ್ನು ಟೀಕಿಸಿರುವುದು ಕೂಡ ಕಂಡು ಬಂದಿದೆ.

ಜೂನ್ 16, 2025ರಂದು Daily Kholachokh Digital ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವರದಿಯಲ್ಲಿ “ಪವಿತ್ರ ಪ್ರವಾದಿ (ಸ.ಅ) ರವರ ವಿರುದ್ಧ ಅವಮಾನ, ವೈದ್ಯರ ಮೇಲೆ ಗುಂಪು ಹಲ್ಲೆ” ಎಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 40 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಹಿಂದೂ ಶಿಕ್ಷಕನನ್ನು ಬಾಂಗ್ಲಾದೇಶದ ಜನರು ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದಾರೆ ಎಂಬುದು ಸುಳ್ಳು. ಅಹಮದ್ ಆಲಿ ಎಂಬ ನಿವೃತ್ತ ವೈದ್ಯಾಧಿಕಾರಿ, ಈತ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಹಲ್ಲೆ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಫ್ಲಿಪ್‌ಕಾರ್ಟ್ ರಾಹುಲ್ ಗಾಂಧಿ ಫೋಟೋ ಬಳಸಿ ಬಿಳಿ ಟೀ ಶರ್ಟ್‌ಗಳನ್ನು ಮಾರಾಟ ಮಾಡುತ್ತಿಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights