ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಪುನರಾರಂಭ : ಮಕ್ಕಳಲ್ಲಿದಿಯಾ ಹೊಸ ಕೊರೊನಾ ಆತಂಕ?

ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಇಂದಿನಿಂದ ಎಸ್​ಎಸ್​ಎಲ್​ಸಿ  ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಹಾಗೂ 6 ರಿಂದ 9 ನೇಯ ತರಗತಿ ಮಕ್ಕಳಿಗೆ ವಿದ್ಯಾಗಮ 2 ಪುನರಾರಂಭಗೊಂಡಿವೆ. ಹೊಸ ಪ್ರಬೇಧದ ಕೊರೊನಾ ರಾಜ್ಯಕ್ಕೆ ಕಾಲಿಟ್ಟಿದ್ದು, ಮಕ್ಕಳು ಪಾಲಕರಲ್ಲಿ ಆತಂಕದ ನಡುವೆಯೂ ಶಾಲಾ ಕಾಲೇಜು ಇಂದು ಆರಂಭಗೊಂಡಿವೆ.

ಮೊನ್ನೆಯಷ್ಟೇ ರಾಜ್ಯ ಸರ್ಕಾರ ಸಾಕಷ್ಟು ವಿರೋಧದ ನಡುವೆಯೂ ಶಾಲಾ ಮತ್ತು ಕಾಲೇಜು ಹಾಗೂ ವಿದ್ಯಾಗಮ ಆರಂಭಕ್ಕೆ ಆದೇಶ ಹೊರಡಿಸಿತ್ತು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಇಂದು ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ಮಕ್ಕಳು ಹಾಜರಾಗಬೇಕು ಎನ್ನುವ ನಿಯಮವಿಲ್ಲ. ಆದರೂ ಆನ್ ಲೈನ್ ಶಿಕ್ಷಣ ಪಡೆಯಲು ನೆಟ್ ವರ್ಕ್ ಸಮಸ್ಯೆ ಇರುವ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಾಜರಾಗಿದ್ದಾರೆ.

ರಾಜ್ಯಾದ್ಯಂತ ಶಾಲೆ ಕಾಲೇಜುಗಳು ಆರಂಭಗೊಂಡಿದ್ದು ಕೆಲ ನಗರದಲ್ಲಿ ಮಕ್ಕಳು ಪೋಷಕರನ್ನು ಕೊರೊನಾ ಆತಂಕ ಕಡಿಮೆಯಾದಂತೆ ಕಾಣಿಸಲಿಲ್ಲ. ಆರಂಭದ ದಿನವೇ ಶಾಲೆಗಳಲ್ಲಿ ಮಕ್ಕಳು ಬೆರಳೆಣಿಕೆಯಷ್ಟು ಕಂಡುಬಂದಿದ್ದಾರೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಮಕ್ಕಳು, ಪೋಷಕರು ಮಾತ್ರವಲ್ಲ ಶಾಲಾ ಶಿಕ್ಷಕರಲ್ಲೂ ಕೊರೊನಾ ಆತಂಕ ಇರುವುದು ಕಂಡುಬಂದಿದೆ. ಕಾರಣ ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ಕಂಡಂತೆ ಕಾಣಲಿಲ್ಲ.

ಇನ್ನೂ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳ ಆರಂಭಕ್ಕೆ ಅದ್ದೂರಿ ಸ್ವಾಗತ ಕೋರಲಾಗಿದೆ. ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ,ಕಾಲೇಜುಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಇದರಂತೆ ರಾಯಚೂರಿನಲ್ಲೀ ಶಾಲಾಗಳತ್ತ ಮಕ್ಕಳನ್ನು ಸೆಳೆಯಲು ಅದ್ದೂರಿಯಾಗಿ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿದೆ.

ಇತ್ತ ರಾಜ್ಯದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ-ಕಾಲೇಜುಗಳಿಗೆ ತೆರಳಿ ಮಕ್ಕಳೊಂದಿಗೆ ನೇರವಾಗಿ ಮಾತನಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights