ಪೂರ್ಣ ಲಸಿಕೆ ಪಡೆದ 28 ವಿದ್ಯಾರ್ಥಿಗಳು ಸೇರಿ 30 ಸ್ಟೂಡೆಂಟ್ಸ್ ಗೆ ಕೊರೊನಾ ಪಾಸಿಟಿವ್!
ಪೂರ್ಣ ಲಸಿಕೆ ಪಡೆದ 28 ವಿದ್ಯಾರ್ಥಿಗಳು ಸೇರಿ ಒಟ್ಟು 30 ಮುಂಬೈ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯ 30 ವಿದ್ಯಾರ್ಥಿಳಿಕೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಪೈಕಿ 28 ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. ಸೋಂಕಿತ ವಿದ್ಯಾರ್ಥಿಗಳಲ್ಲಿ 23 ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ಏಳು ಮಂದಿ ಮೊದಲ ವರ್ಷದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ನಗರದ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಕ್ಷಣರಹಿತ ಇತರ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಕಾಲೇಜಿನಿಂದ ಒಟ್ಟು 1,100 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಕಲಿಯುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟ ಎಲ್ಲ 29 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೆಇಎಂ ಆಸ್ಪತ್ರೆಯ ಡೀನ್ ಡಾ.ಹೇಮಂತ್ ದೇಶಮುಖ್ ತಿಳಿಸಿದ್ದಾರೆ.
ಕಾಲೇಜಿನ ಇತರ ವಿದ್ಯಾರ್ಥಿಗಳನ್ನೂ ಈಗ ಪರೀಕ್ಷಿಸಲಾಗುತ್ತಿದೆ, ಪ್ರತಿದಿನ 200-250 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಡೀನ್ ಹೇಳಿದ್ದಾರೆ.
ಕೊರೋನವೈರಸ್ ಪ್ರಕರಣಗಳು ಇಳಿಮುಖವಾಗುತ್ತಿರುವುದರಿಂದ ಮತ್ತು ಲಸಿಕೆಗಳು ವೇಗವನ್ನು ಪಡೆಯುತ್ತಿರುವುದರಿಂದ ಹಲವಾರು ಕಾಲೇಜುಗಳು ಮತ್ತು ಶಾಲೆಗಳು ತೆರೆಯಲು ಪ್ರಾರಂಭಿಸಿವೆ. ಹೀಗಾಗಿ ಸೋಂಕು ಸದ್ದಿಲ್ಲದಂತೆ ಹರಡುತ್ತಿದೆ.