ಭಾರೀ ಮಳೆ : ಶಿಮ್ಲಾದಲ್ಲಿ ಬಹುಮಹಡಿ ಕಟ್ಟಡ ಕುಸಿತ – ವಿಡಿಯೋ ವೈರಲ್!

ಶಿಮ್ಲಾದಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಬಹುಮಹಡಿ ಕಟ್ಟಡ ಕುಸಿದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿಮ್ಲಾದ ಕಚ್ಚಿ ಘಾಟಿ ಪ್ರದೇಶದಲ್ಲಿ ಹೆಚ್ಚಿನ ಕಟ್ಟಡಗಳನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಜೊತೆಗೆ ಇಲ್ಲಿ ಅಧಿಕ ಮಳೆಯಾದರೆ ಭೂಕುಸಿತವಾಗುವ ಭೀತಿ ಎದುರಾಗುತ್ತದೆ. ಕೆಲ ದಿನಗಳಿಂದ ಇಲ್ಲಿ ಭಾರೀ ಮಳೆ ಸುರಿದಿದೆ. ಅಧಿಕ ಮಳೆಗೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಗುರುವಾರ ಶಿಮ್ಲಾದ ಕಚಿಘಾಟಿ ಪ್ರದೇಶದಲ್ಲಿ ಬಹು ಅಂತಸ್ತಿನ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ  ವರದಿಯಾಗಿಲ್ಲ.

ಇಂದು ಬೆಳಿಗ್ಗೆ ಎಂಟು ಅಂತಸ್ತಿನ ಕಟ್ಟಡದಲ್ಲಿ ಕೆಲವು ಬಿರುಕುಗಳು ಕಾಣಿಸಿಕೊಂಡಿತ್ತು. ಹೀಗಾಗಿ ಭಯಗೊಂಡ ಜನ ತಕ್ಷಣ ಕಟ್ಟಡವನ್ನು ಖಾಲಿ ಮಾಡಿದ್ದಾರೆ. ಕೆಲವು ಗಂಟೆಗಳ ನಂತರ ಕಟ್ಟಡ ಕುಸಿದಿದೆ. ಅವಶೇಷಗಳು ಇತರ ಕೆಲವು ಮನೆಗಳಿಗೂ ತಗುಲಿ, ಅಕ್ಕಪಕ್ಕದ ಕಟ್ಟಡಗಳಿಗೆ ಹಾಣಿಯಾಗಿದೆ.

ಕಟ್ಟಡ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights