1991 ಮೈಕಲ್ ಜಾಕ್ಸನ್ V/s 2021 ಸ್ಟ್ರೀಟ್ ಮೈಕಲ್ : ಈ ಮಾಸ್ಟರ್ ಮೈಕಲ್ ನಿಮಗೆ ಗೊತ್ತಾ?
‘ಕಿಂಗ್ ಆಫ್ ಪಾಪ್’ ಎಂದೇ ಪ್ರಸಿದ್ಧರಾಗಿದ್ದ ಗಾಯಕ ಮತ್ತು ಡಾನ್ಸರ್ ಮೈಕಲ್ ಜಾಕ್ಸನ್ ನಂತೆ ನೃತ್ಯ ಮಾಡುವವರನ್ನು ಸಾಮಾನ್ಯವಾಗಿ ನೋಡಿರುತ್ತೆವೆ. ಆದರೆ ಈ ವ್ಯಕ್ತಿಯ ಡ್ಯಾನ್ಸ್ ನೋಡಿದರೆ ಮೈಕಲ್ ಜಾಕ್ಸನ್ ನೊಂದಿಗೆ ಪೈಪೋಟಿಗಿಳಿಯುವಂತೆ ಕಾಣಿಸುತ್ತದೆ. ಯಾರಪ್ಪ ಅದು ಮೈಕಲ್ ಜಾಕ್ಸನ್ ವಿರುದ್ಧ ಕಾಪಿಟೇಷನ್ ಮಾಡುವವರು ಅಂತಿರಾ..? ಹಾಗನ್ನೋಕು ಮುನ್ನ ಈ ವಿಡಿಯೋವನ್ನು ಒಂದು ಬಾರಿ ನೋಡಿಬಿಡಿ.
https://twitter.com/ikaveri/status/1443210918393831424?ref_src=twsrc%5Etfw%7Ctwcamp%5Etweetembed%7Ctwterm%5E1443210918393831424%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-s-street-dance-performance-reminds-netizens-of-michael-jackson-seen-viral-video-1859257-2021-09-30
ಎಸ್.. ಈತನ ಅದ್ಬುತ್ ಡ್ಯಾನ್ಸ್ ನಿಜಕ್ಕೂ ಮೈ ರೋಮಾಂಚನಗೊಳಿಸುತ್ತದೆ. ಯಾವ ವೃತ್ತಿಪರ ಡ್ಯಾನ್ಸರ್ ಗಳೂ ಇಂಥಹ ಕಠಿಣ ಸ್ಟೆಪ್ಟ್ ಗಳನ್ನ ಹಾಕುವುದು ಕಷ್ಟ. ಆದರೀತ ಸುಲಭವಾಗಿ ಮೈ ಮೂಳೆಗಳನ್ನೇ ಭಾಗಿಸುವಂತೆ ನೃತ್ಯ ಮಾಡುತ್ತಾನೆ. ನೋಡುಗರನ್ನ ಹುಬ್ಬೇರಿಸುವಂತೆ ಮಾಡಿದ್ದಾನೆ. ಈತನ ನೃತ್ಯ ಕಂಡು ನೆಟ್ಟಿಗರು ಮೈಕೆಲ್ ಜಾಕ್ಸನ್ ನನ್ನು ನೆನೆದಿದ್ದಾರೆ.
ಮೈಕೆಲ್ ಜಾಕ್ಸನ್ ಅವರ ಜನಪ್ರಿಯ ಹಾಡೊಂದಕ್ಕೆ ಬೀದಿಯಲ್ಲಿ ನೃತ್ಯ ಮಾಡುವ ಈತನ ವೀಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈತನ ವೀಡಿಯೋವನ್ನು ಕಾವೇರಿ ಎಂಬುವವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ಮೈಕಲ್ ಜಾಕ್ಸನ್ ಅವರ ಭೂತವು ಅವನೊಳಗೆ ವಾಸಿಸುತ್ತಿದೆ” ಎಂದು ಶೀರ್ಷಿಕೆಯನ್ನ ಹಾಕಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಆದರೀ ವಿಡಿಯೋ ಯಾವ ಪ್ರದೇಶದಿಂದ ಬಂದಿದೆ ಎನ್ನುವುದು ಮಾತ್ರ ಇನ್ನು ತಿಳಿದು ಬಂದಿಲ್ಲ.
ಮೈಕೆಲ್ ಜಾಕ್ಸನ್ ಅವರ ಡೇಂಜರಸ್ ಹಾಡಿಗೆ ಈ ವ್ಯಕ್ತಿ ಪಾಪ್ ರಾಜನ ಡ್ಯಾನ್ಸ್ ನ್ನು ಅನುಕರಿಸುತ್ತಾನೆ.
ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಅವರ ಡೇಂಜರಸ್ ಹಾಡು ಹೆಚ್ಚು ಮಾರಾಟವಾದ ಆಲ್ಬಂಗಳಲ್ಲಿ ಒಂದಾಗಿದೆ. ಇದು 1991 ರಲ್ಲಿ ಬಿಡುಗಡೆಯಾಯಿತು.
ವೀಡಿಯೊವನ್ನು 53,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಕಾಮೆಂಟ್‌ಗಳನ್ನು ಹೊಂದಿದೆ. ಜನರು ಮನುಷ್ಯನ ನೃತ್ಯವನ್ನು ಮನಃಪೂರ್ವಕವಾಗಿ ಹೊಗಳಿದ್ದಾರೆ. ವ್ಯಕ್ತಿಯ ಪ್ರತಿಭೆ ಕಂಡು ಕೆಲವರು ಕಾಮೆಂಟ್ ವಿಭಾಗದಲ್ಲಿ ಬಾಲಿವುಡ್ ನೃತ್ಯ ನಿರ್ದೇಶಕರನ್ನು ಟ್ಯಾಗ್ ಮಾಡಿದ್ದಾರೆ.