ಚಿನ್ನದ ಮಾಸ್ಕ್ ಮಾಡಿಸಿಕೊಂಡ ಭೂಪ: ಇದಕ್ಕೆ ಖರ್ಚಾದ ಹಣವೆಷ್ಟು ಗೊತ್ತೆ?

ಕೊರೊನಾ ಸಾಂಕ್ರಮಿಕದ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಸರ್ಕಾರದ ನಿರ್ದೇಶನಗಳನ್ನು ಜನರು ಪಾಲಿಸುತ್ತಿದ್ದಾರೆ. ದೈಹಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿಯೂ ವ್ಯಕ್ತಿಯೊಬ್ಬ ಚಿನ್ನದ ಮಾಸ್ಕ್ ಮಾಡಿಸಿ ಗಮನ ಸೆಳೆದಿದ್ದಾನೆ.

ಮಹಾರಾಷ್ಟ್ರ ರಾಜ್ಯದ ಪುಣೆಯ ಪಿಂಪ್ರಿ ಚಿಂಚ್‌ವಾಡನ ನಿವಾಸಿ ಶಂಕರ್ ಎಂಬುವವರೆ ಆ ಮಹಾನುಭಾವರಾಗಿದ್ದು, ಅವರು ಮಾಡಿಸಿಕೊಂಡು ಚಿನ್ನದ ಮಾಸ್ಕ್‌ಗೆ 2.9 ಲಕ್ಷ ರೂ ವ್ಯಯಿಸಿದ್ದಾರೆ ಎಂದು ಪುಣೆ ಮಿರರ್ ವರದಿ ಮಾಡಿದೆ.

ತಿಂಗಳ ಹಿಂದೆಯಷ್ಟೇ ತಾವು ಹಾಕಿರುವ ಬಟ್ಟೆಗೆ ಮ್ಯಾಚಿಂಗ್ ಆದ ಮಾಸ್ಕ್‌ಗಳು ಬಂದಿದ್ದವು. ನಂತರ ನಿಮ್ಮ ಮುಖದ ಚಿತ್ರವುಳ್ಳ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದು ಕುತೂಹಲ ಹುಟ್ಟಿಸಿದ್ದವು. ಜನರು ಇವುಗಳನ್ನು ಸೃಜನಶೀಲತೆ ಎಂದು ಕರೆದಿದ್ದರು. ಆದರೆ ಈ ಚಿನ್ನದ ಮಾಸ್ಕ್ ಮಾಡಿಸಿಕೊಂಡಿರುವುದನ್ನು ಆಡಂಬರತೆ, ತೋರಿಕೆ ಎಂದು ಟೀಕಿಸಿದ್ದಾರೆ.

ಇಡೀ ಭಾರತದಲ್ಲಿಯೇ ಕೊರೊನಾದಿಂದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯ ಮಹಾರಾಷ್ಟ್ರವಾಗಿದೆ. ರಾಜ್ಯವೊಂದರಲ್ಲೇ 1.9 ಲಕ್ಷ ಪ್ರಕರಣಗಳು ದಾಖಲಾಗಿವೆ. ಸರ್ಕಾರ ಮತ್ತು ಜನರು ಪರಿಸ್ಥಿತಿ ನಿಯಂತ್ರಿಸಲು ಒದ್ದಾಡುತ್ತಿರುವಾಗ ಈ ಆಡಂಬರತೆ ಬೇಕೆ ಎಂದು ಜನರು ಪ್ರಶ್ನಿಸಿದ್ದಾರೆ.

ಎನ್ 95 ಮಾಸ್ಕ್ ವೈರಸ್ ತಡೆಯಲು ಪರಿಣಾಮಕಾರಿಯಾಗಿದೆ. ಇದರಿಂದ ಪ್ರಯೋಜನ ಇಲ್ಲ ಎಂದು ಹಲವಾರು ಸಾಮಾಜಿಕ ಜಾಲತಾಣಿಗರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ತಮ್ಮ ಬಳಿ ಹಣ ಇದೆ ಎಂದು ತೋರಿಸುವ ಅಗತ್ಯವಿಲ್ಲ. ಅದನ್ನು ಹಾಗೆ ಇಟ್ಟುಕೊಳ್ಳಬಹುದು. ಇಲ್ಲ ಕೋವಿಡ್ ನಿಧಿಗೆ ಕೊಡಬಹುದು. ಇವರು ಮಾಡಿಸಿರುವ ಒಂದು ಮಾಸ್ಕ್ ಹಣದಲ್ಲಿ ಲಕ್ಷ ಬಡಜನರಿಗೆ ಮಾಸ್ಕ್ ಕೊಡಿಸಬಹುದಿತ್ತು ಎಂದು ಇನ್ನು ಕೆಲವರು ತಿಳಿಸಿದ್ದಾರೆ.


ಇದನ್ನೂ ಓದಿ: ಪೊಲೀಸರ ಮೇಲೆ ರೌಡಿಶೀಟರ್‌ಗಳ ಗುಂಡಿನ ದಾಳಿ; 8 ಪೊಲೀಸರ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights