ಫ್ಯಾಕ್ಟ್‌ಚೆಕ್: ಪೈಪ್‌ಲೈನ್ ಮೂಲಕ ಮದ್ಯ ಸರಬರಾಜು ಮಾಡಲಿದೆಯೇ ಕೇಂದ್ರ ಸರ್ಕಾರ?
ಸರ್ಕಾರ ಪೈಪ್ ಲೈನ್ ಮೂಲಕ ಅಡುಗೆ ಅನಿಲ, ಕುಡಿಯುವ ನೀರು ಸರಬರಾಜು ಮಾಡುವುದನ್ನು ನೋಡಿದ್ದೇವೆ, ಈಗ ಪೈಪ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವ ಚಿಂತನೆ ನಡೆಸಿದೆ ಎಂಬ ಸುದ್ದಿಯೊಂದು ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ಕೇಳಿದ ಮದ್ಯ ಪ್ರಿಯರು ಒಳಗೊಳಗೆ ಖುಷಿ ಪಟ್ಟಿದ್ದಾರೆ ಎನ್ನುವ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಅನಿಯಮಿತ ಮದ್ಯ ಪಡೆಯಲು 11,000 ರೂಪಾಯಿಗಳ ಮೊತ್ತದೊಂದಿಗೆ ಪಿಎಂಒಗೆ ಸಲ್ಲಿಸಬೇಕು ಎಂಬ ವಿನಂತಿಯೊಂದಿಗೆ ಒಂದು ಫಾರ್ಮ್ ಅನ್ನೂ ಲಗತ್ತಿಸಲಾಗಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಲಿದೆಯೇ, ಈ ಸುದ್ದಿ ನಿಜವೇ ಎಂದು ವೈರಲ್ ಪೋಸ್ಟ್‌ನ ಸತ್ಯಾಸಯ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಭಾರತ ಸರ್ಕಾರವು ಪೈಪ್‌ಲೈನ್ ಮೂಲಕ ಮದ್ಯವನ್ನು ಪೂರೈಸುತ್ತದೆ ಎಂಬ ಸಾರಾಂಶ ಇರುವ ಕರಡು ಪ್ರತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕರಡನ್ನು ಪರಿಶೀಲಿಸಿದಾಗ ಇದು ನಕಲಿ ಆದೇಶ ಎಂದು ತಿಳಿದು ಬಂದಿದೆ. ಇದೊಂದು ಸುಳ್ಳು ಕರಡು ಪ್ರತಿ ಎಂಬುದನ್ನು ಪ್ರೆಸ್ ಇನ್‌ಫಾರ್ಮೇಷನ್ ಬ್ಯುರೋ (PIB) ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಬಾಲಿವುಡ್ ನಟ ನಾನಾ ಪಾಟೇಕರ್ ಅವರ ಫೋಟೋವನ್ನು ಬಳಸಿ ಪಿಐಬಿ ಈ ಟ್ವೀಟ್ ಮಾಡಿದೆ. ಇದರಲ್ಲಿ ವೈರಲ್ ಆಗುತ್ತಿರುವ ನಕಲಿ ಕರಡು ಪ್ರತಿಯ ಫೋಟೋ ಕೂಡಾ ಹಂಚಿಕೊಂಡಿದೆ.
Chill guys,
Don’t get your hopes too high‼️#PIBFactCheck pic.twitter.com/34zeYEKByq
— PIB Fact Check (@PIBFactCheck) July 18, 2022
ಈ ಫೋಟೋವನ್ನೇ ನೋಡಿದ ಕೆಲ ಮದ್ಯ ಪ್ರಿಯರಾದರೂ ತಮ್ಮ ನೀರಿನ ಟ್ಯಾಪಿನಲ್ಲಿ ಮದ್ಯದ ಸರಬರಾಜಾಗುವ ಕ್ಷಣವನ್ನು ಕಲ್ಪಿಸಿಕೊಂಡು ಖುಷಿಪಟ್ಟಿರುವುದಂತೂ ನಿಜ. ಈ ಪತ್ರದೊಂದಿಗೆ ಅನಿಯಮಿತ ಮದ್ಯ ಪಡೆಯಲು 11,000 ರೂಪಾಯಿಗಳ ಮೊತ್ತದೊಂದಿಗೆ PMOಗೆ ಸಲ್ಲಿಸಬೇಕು ಎಂಬ ವಿನಂತಿಯೊಂದಿಗೆ ಒಂದು ಅರ್ಜಿಯನ್ನೂ ಲಗತ್ತಿಸಲಾಗಿದೆ. ಆದರೆ, ಇದು ಸುಳ್ಳು, ಇದನ್ನು ನಂಬಬೇಡಿ ಎಂದು PIB ಹೇಳಿದೆ.
ಏನೆ ಹೇಳಿ ಇಂತಹದೊಂದು ಸುದ್ದಿಯಿಂದಾಗಿ ಒಳಗೊಳಗೆ ಖುಷಿ ಪಟ್ಟಿದ್ದ ಪಾನ ಪ್ರೀಯರಿಗೆ ಇದು ಸುಳ್ಳು ಎಂದು ತಿಳಿದು ಹೇಗಾಗಿರಬೇಡ. ಆದರೆ ಈ ಸುತ್ತೋಲೆ ಸರ್ಕಾರ ಹೊರಡಿಸಿಲ್ಲ ಎಂಬುದಂತೂ ಸತ್ಯ. ಆದರೆ ಇಂತಹ ಸುಳ್ಳು ಸುದ್ದಿಗಳನ್ನು ನಂಬಿ ಮೋಸ ಹೋಗಬೇಡಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಅಲ್ಲ