Fact Check : ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ಯೋಧರಿಗೆ ಅತ್ಯಾಧುನಿಕ ಸಮವಸ್ತ್ರ ನೀಡಿದ್ದಾರೆ ಎಂಬ ಸುದ್ದಿ ನಿಜವೇ?

ನಮಗೆಲ್ಲ ತಿಳಿದಿರುವ ಹಾಗೆ ದೇಶದ ಒಟ್ಟು ಬಜೆಟ್ ನ ಹೆಚ್ಚಿನ ಭಾಗವನ್ನು ದೇಶದ ರಕ್ಷಣಾ ಚಟುವಟಿಕೆಗಳಿಗೆ, ರಕ್ಷಣಾ ವಲಯಕ್ಕೆ ಖರ್ಚುಮಾಡಲಾಗುತ್ತದೆ. ಆದರೂ ಸೈನ್ಯದೊಳಗಿರುವ ಯೋಧರಿಂದ ಸಾಕಷ್ಟು ಅಪಸ್ವರಗಳು ಕೇಳಿ ಬರುತ್ತಿವೆ. ಅದೇನೆ ಇರಲಿ ಸದ್ಯ ವೈರಲ್ ಆಗುತ್ತಿರುವ ಸುದ್ದಿ ಏನೆಂದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ CRPF ಸೈನಿಕರಿಗೆ  ಅತ್ಯಾಧುನಿಕ, ಸುಸಜ್ಜಿತ ಸಮವಸ್ತ್ರಗಳನ್ನು ನೀಡುತ್ತಿದ್ದಾರೆ ಎಂಬ ಸುದ್ದಿ ಇರುವ ಪೋಟೋಗಳು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಫೇಸ್ ಬುಕ್ ಮತ್ತು ಟ್ವಿಟ್ ನಲ್ಲಿ ವೈರಲ್ ಆದ ಫೋಟೋಗಳು

ವೈರಲ್ ಆಗಿರುವ ಎರಡು ಪೋಟೋಗಳಲ್ಲಿ ಒಂದು ಫೋಟೋದಲಿ ಒಬ್ಬ ಸೈನಿಕನು ಲಾಠಿ ಹಿಡಿದು ನಿಂತಿದ್ದರೆ ಮತ್ತೊಂದು ಫೋಟೋದಲ್ಲಿ CRPF ಕಮಾಂಡೋ ಕ್ರೀಡಾ ಸುಧಾರಿತ ಮಿಲಿಟರಿ ಯುದ್ಧತಂತ್ರದ ಸಮವಸ್ತ್ರ ವನ್ನು ಧರಿಸಿರುವ ಫೋಟೋ  ಆಗಿದೆ. ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಭಾರತೀಯ ಸೇನಾ ಯೋಧರಿಗೆ ಒದಗಿಸಲಾದ ಗೇರ್‌ಗಳಲ್ಲಿ ಭಾರಿ ಸುಧಾರಣೆಯಾಗಿದೆ ಎಂದು ಬಿಂಬಿಸಲು ಈ ಫೋಟೋಗಳನ್ನು ಶೇರ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್

ಚಿತ್ರ 1

ಮೊದಲ ಫೋಟೋದಲ್ಲಿ, ಸ್ಟಾಕ್ ಫೋಟೋ ಏಜೆನ್ಸಿ ಅಲಾಮಿಯ ಲೋಗೋ ಕಾಣಿಸುತಿದ್ದು ಅದನ್ನು ಬಳಸಿಕೊಂಡು, ನಾವು Google ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು Alamy ನಲ್ಲಿ ಮೂಲ ಫೋಟೋವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು. ಆ ಫೋಟೋ ಕಾಶ್ಮೀರದಲ್ಲಿರುವ ಸಿಆರ್‌ಪಿಎಫ್ ಸಿಬ್ಬಂದಿ ಎಂದು ತಿಳಿಸಿದೆ. ಈ ಫೋಟೋವನ್ನು 2012 ರಲ್ಲಿ ಕ್ಲಿಕ್ಕಿಸಲಾಗಿದೆ.

ಚಿತ್ರ 2

ಸುಧಾರಿತ ಮಿಲಿಟರಿ ಗೇರ್‌ನಲ್ಲಿರುವ ಕಮಾಂಡೋನ ಚಿತ್ರಕ್ಕಾಗಿ, ನಾವು ಮತ್ತೊಂದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದು ಸ್ಟಾಕ್ ಫೋಟೋ ಏಜೆನ್ಸಿ ಗೆಟ್ಟಿ ಇಮೇಜಸ್‌ನಲ್ಲಿ ಮೂಲ ಫೋಟೋವನ್ನು ತೋರಿಸುತ್ತದೆ. ವೆಬ್‌ಸೈಟ್ ಪ್ರಕಾರ, 2021 ರ ಗಣರಾಜ್ಯೋತ್ಸವದ ಮೊದಲು ಫೋಟೋವನ್ನು ಕ್ಲಿಕ್ ಮಾಡಲಾಗಿದೆ.

ಈ ಫೋಟೋಗಳಿಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ ಗೆಟ್ಟಿಯಲ್ಲಿ ಈ ಕಮಾಂಡೋನ ಮತ್ತಷ್ಟು ಫೋಟೋಗಳು ತೆರೆದುಕೊಳ್ಳುತ್ತವೆ  ಮತ್ತು ಸೂಕ್ಷ್ಮವಾಗಿ ಗಮನಿಸಿದಾಗ, ಸೈನಿಕನ ತೋಳಿನ ಬ್ಯಾಡ್ಜ್‌ನಲ್ಲಿ ಏನು ಬರೆಯಲಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಬ್ಯಾಡ್ಜ್, “ವ್ಯಾಲಿ QAT” ಎಂದು ಬರೆಯಲಾಗಿದೆ. “ವ್ಯಾಲಿ QAT”  ಎಂದರೆ  , “ವ್ಯಾಲಿ ಕ್ವಿಕ್ ಆಕ್ಷನ್ ಟೀಮ್ ಆಗಿದ್ದು, (QAT) ನ ಸಂಕ್ಷಿಪ್ತ ರೂಪವಾಗಿದೆ. ಇದು ಮುಖ್ಯವಾಗಿ J&K ಪ್ರದೇಶದಲ್ಲಿ ಕಾರ್ಯನಿರ್ವಹಿಸುವ CRPF ಮುಖ್ಯ ಭಯೋತ್ಪಾದನಾ-ನಿಗ್ರಹ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ.

QAT ಬಗ್ಗೆ ಮಾಹಿತಿ ಇರುವ CRPF ನ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಲಾಗಿದ್ದು, ಅಧಿಕಾರಿಯ ಪ್ರಕಾರ, CRPF ಖಾಕಿ ಸಮವಸ್ತ್ರವು ಸಾಮಾನ್ಯ ಸಮವಸ್ತ್ರವಾಗಿದೆ ಮತ್ತು CRPF ಅಡಿಯಲ್ಲಿ ಬರುವ ವ್ಯಾಲಿ QAT ಸುಮಾರು ಒಂದು ದಶಕದಿಂದ ಕಾರ್ಯನಿರ್ವಹಿಸುತ್ತಿದೆ. ಒಂದೇ ವ್ಯತ್ಯಾಸವೆಂದರೆ ವ್ಯಾಲಿಯ QAT ಕಮಾಂಡೋಗಳು ಹೆಚ್ಚು ತರಬೇತಿ ಪಡೆದಿದ್ದಾರೆ. ಯೋಧರಿಗೆ ನೀಡುವ ಸಕರಣೆಗಳನ್ನು ಉನ್ನತಿಕರಿಸುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ QAT ಕಮಾಂಡೋಗಳಿಗೆ 10 ವರ್ಷದ ಮುಂಚೆಯೇ ಅಂದರೆ ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನವೇ ಈ ಸುಸಜ್ಜಿತ ಸಮವಸ್ತ್ರಗಳನ್ನು ನೀಡಲಾಗಿದೆ.

CRPF ನ ಇತ್ತೀಚಿನ ಪಾಸಿಂಗ್ ಔಟ್ ಪರೇಡ್ ಅನ್ನು ಪರಿಶೀಲಿಸಿದ್ದು. ಈ ಪರೇಡ್‌ನಲ್ಲಿ ಧರಿಸಿರುವ ಸಮವಸ್ತ್ರವು 2012 ರ ಚಿತ್ರದಲ್ಲಿ ಇರುವ ಅದೇ ಸಿಆರ್‌ಪಿಎಫ್ ಖಾಕಿ ಸಮವಸ್ತ್ರವಾಗಿದ್ದು ಕೆಲವು ಹೆಚ್ಚುವರಿ ಪರಿಕರಗಳನ್ನು ಹೊಂದಿದೆ ಎಂಬುದನ್ನು ಗಮನಿಸಬಹುದು. ಆದರೆ ಫೋಟೋ ವೈರಲ್ ಆಗಿರುವಂತೆ ಎಲ್ಲಾ ಸಿಆರ್ ಪಿಎಫ್ ಯೋಧರಿಗೂ ಇದೇ ರೀತಿಯ ಸಮವಸ್ತ್ರಗಳನ್ನು ನೀಡುತ್ತಾರೆ ಎಂದು ಹೇಳುವ ಸುದ್ದಿ ತಪ್ಪಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಸಿಆರ್‌ಪಿಎಫ್ ಗೇರ್‌ಗೆ ಭಾರಿ ಅಪ್‌ಗ್ರೇಡ್ ಮಾಡಲಾಗಿದೆ ಎಂದು ಬಿಂಬಿಸಲು ಎರಡು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಅದು ತಪ್ಪುದಾರಿಗೆಳೆಯುವಂತಿದೆ. ಮೊದಲ ಫೋಟೋ 2012 ರಲ್ಲಿದ್ದರೆ, ಎರಡನೇ ಚಿತ್ರವು 2021 ರದ್ದಾಗಿದೆ ಮತ್ತು ಇದು CRPF ಅಡಿಯಲ್ಲಿ ಬರುವ ಗಣ್ಯ ವಿಭಾಗವಾದ ವ್ಯಾಲಿ QAT ಕಮಾಂಡೋನ ಫೋಟೋವಾಗಿದೆ. ಅಂದರೆ ಅಪ್ ಗ್ರೇಡ್ ಮಾಡಲಾದ ಸಮವಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೇವಲ ಒಂದು ಯೂನಿಟ್ ನ ಸೈನಿಕರಿಗೆ ಮಾತ್ರ ನೀಡಲಾಗುತ್ತದೆ ಎಂಬುದು ಗಮನಾರ್ಹ.

ದೇಶದ ಭದ್ರತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆಗೆ ಹಲವಾರು ಹಕ್ಕುಗಳಿವೆ. ಆದರೆ ಸರ್ಕಾರ ಅವುಗಳನ್ನು ಪೂರೈಸಲು ವಿಫಲವಾಗಿವೆ, ಯಾಕೆಂದರೆ ಸರ್ಕಾರ ದೇಶದ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ಸರಿಯಾದ ಸಮವಸ್ತ್ರ, ಹೊದಿಕೆ ಮತ್ತು ಪೌಷ್ಠಿಕ ಅಹಾರವನ್ನು ಒದಗಿಸುವಲ್ಲಿ  ವಿಫಲವಾಗಿವೆ. ಆದರೆ ಭಾರತದ ಕೆಲವು ಮಾಧ್ಯಮಗಳು ಸರ್ಕಾರದ ಕರ್ತವ್ಯಗಳನ್ನು ಸಾಧನೆಗಳೆಂಬತೆ ಬಿಂಬಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಅಹಮದಾಬಾದ್ ಮಿರರ್ ಮತ್ತು ಎಎನ್‌ಐ ಕಳೆದ ವರ್ಷ ತಪ್ಪುದಾರಿಗೆಳೆಯುವ ವರದಿಗಳನ್ನು ಪ್ರಕಟಿಸಿದ್ದು, ಪ್ರಧಾನಿ ಮೋದಿಯವರ ಆಡಳಿತದಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯು ಸಮವಸ್ತ್ರವನ್ನು ಹೊಲಿಯಲು ಮನೆಯಲ್ಲಿ ತಯಾರಿಸಿದ ಬಟ್ಟೆಯನ್ನು ಬಳಸುತ್ತಿದೆ ಎಂದು ಹೇಳಿತ್ತು.


ಕೃಪೆ: ಆಲ್ಟ್ ನ್ಯೂಸ್

ಇದನ್ನು ಓದಿ: ಖಾಲಿಸ್ತಾನ್ ಪರ ಬೈಕ್ ರ್‍ಯಾಲಿಯ ಹಳೆಯ ವಿಡಿಯೋವನ್ನು ಪ್ರಧಾನಿಯವರು ಪಂಜಾಬ್ ಭೇಟಿಯ ವೇಳೆ ನಡೆದ ರ್‍ಯಾಲಿ ಎಂದು ಸುಳ್ಳು ಹೇಳಲಾಗಿದೆ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.