Fact Check: ಮೆಕ್ಸಿಕೋದ ಹಳೆಯ ವೀಡಿಯೋವನ್ನು ಕೇರಳದಲ್ಲಿ RSS ಕಾರ್ಯಕರ್ತನ ಹತ್ಯೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಎಂದು ಟ್ವಿಟರ್ ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ವೀಡಿಯೋದ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬನ ಕೈಗಳನ್ನು ಕತ್ತರಿಸಲಾಗಿದ್ದು, ಆತನ ದೇಹದಿಂದ ರಕ್ತ ಸುರಿಯುತ್ತಿದ್ದು ಕೊನೆಗೆ ಆ ವ್ಯಕ್ತಿಯು ನೆಲಕ್ಕುರುಳುತ್ತಿರುವುದು ಕಾಣುತ್ತದೆ.
ಮತ್ತೊಬ್ಬ ವ್ಯಕ್ತಿಯು ಕೂಡ ಇದನ್ನು ಶೇರ್ ಮಾಡಿದ್ದಾನೆ.
ಈ ವೈರಲ್ ವೀಡಿಯೋವನ್ನು ವಾಟ್ಸಪ್ ಗ್ರೂಪ್ ಗಳಲ್ಲು ಸಹ ಶೇರ್ ಮಾಡಲಾಗಿದೆ.
ಸಾಮಾನ್ಯವಾಗಿ ಕೇರಳದಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೆ ಇರುತ್ತವೆ, ಇದನ್ನು ಗಮನದಲ್ಲಿಟ್ಟುಕೊಂಡು ಏನ್ ಸುದ್ದಿ.ಕಾಮ್ ತಂಡವು ವೀಡಿಯೋದ ನೈಜತೆ ಬಗ್ಗೆ ಕೆದಕಿದಾಗ ಅದರ ವಾಸ್ತವ ಏನೆಂದು ತಿಳಿದು ಬಂದಿದೆ..
ಫ್ಯಾಕ್ಟ್ ಚೆಕ್:
ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ಮಾತನಾಡುವ ಭಾಷೆ ಭಾರತೀಯ ಭಾಷೆಯಲ್ಲ ಎಂದು ತಿಳಿಯುತ್ತದೆ. ನಾವು ಈ ವೀಡಿಯೋ ಸ್ಕ್ರೀನ್ ಶಾಟ್ ಬಳಸಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ ವೈರಲ್ ಆಗಿರುವ ವೀಡಿಯೋ 2018 ರಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಆಗಿರುವುದು ಕಂಡುಬಂದಿದೆ. ಅದನ್ನು ಪೋಸ್ಟ್ ಮಾಡಿರುವ ವ್ಯಕ್ತಿಯು ಯಾವುದೇ ಹಳಿಕೆಯನ್ನು ನೀಡದೆ ಕೇವಲ ವೀಡಿಯೋವನ್ನು ಮಾತ್ರ ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವೀಡಿಯೋ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಹೊರಟಾಗ, ADN ಸುರೆಸ್ಟೆ ಹೆಸರಿನ ವೆಬ್ ಪೋರ್ಟಲ್ ನಲ್ಲಿ ಆಗಸ್ಟ್ 4, 2018 ರಂದು ವರದಿ ಒಂದು ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಈ ವರದಿಯಲ್ಲಿ ಪ್ರಕಟಗೊಂಡಿರುವ ಘಟನೆಯು ಮೆಕ್ಸಿಕೊದ ಒಹಾಕಾ ನಗರದಲ್ಲಿ ಸಂಭವಿಸಿದೆ ಎಂದು ಹೇಳಿದೆ. ಆ ಸಮಯದಲ್ಲಿ, ಚಾಹುಯಿಟ್ಸ್ ನಗರದ ಇಬ್ಬರು ವ್ಯಕ್ತಿಗಳನ್ನು ಅಪಹರಿಸಲಾಗಿತ್ತು ಮತ್ತು ಅವರು ಕಾಣೆಯಾಗಿದ್ದಾರೆ ಎಂಬ ಸುದ್ದಿಯೂ ವರದಿಯಾಗಿದೆ.
2018 ರ ಕೆಲವು ಇತರ ಲೇಖನಗಳು (ಲಿಂಕ್ 1, ಲಿಂಕ್ 2) ಮೆಕ್ಸಿಕೋದಲ್ಲಿ ಹಿಂಸಾಚಾರ ಸಂಭವಿಸಿದೆ ಎಂದು ವರದಿ ಮಾಡಿದೆ, ಇದು ಡ್ರಗ್ ಕಾರ್ಟೆಲ್‌ನಿಂದ ನಡೆದ ಕೊಲೆ ಎಂದು ಗುರುತಿಸಿದೆ. ಘಟನೆಯ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿರುವ ಜನರು ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಮತ್ತು ‘ಜುವಾನಿಟೊ ಕ್ಯಾಸ್ಟೆಲಾನೋಸ್ ಅನ್ನು ಯಾರು ಕೊಂದರು?’ ಎಂದು ಕೇಳುತ್ತಿದ್ದಾರೆ ಎಂಬ ಅಂಶಗಳೂ ಇರುವುದು ಕಂಡುಬರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸುಮಾರು (2018) ಮೂರು ವರ್ಷಗಳ ಹಿಂದೆ ಮೆಕ್ಕಿಕೋದ ಒಹಾಕಾ ಎಂಬಲ್ಲಿ ನಡೆದ ಘಟನೆಯನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ಇದು ಕೇರಳದ ಆರ್ ಎಸ್ ಎಸ್ ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ ಎಂದು ತಪ್ಪಾಗಿ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಗಮನಿಸಬೇಕಾದ ಅಂಶವೆಂದರೆ ರಾಜ್ಯದಲ್ಲಿ ಇಂತಹ ಘಟನೆಯ ಬಗ್ಗೆ ಇತ್ತೀಚಿನ ಯಾವುದೇ ವರದಿಗಳು ಬಂದಿಲ್ಲ.