ಖಾಲಿಸ್ತಾನ್ ಪರ ಬೈಕ್ ರ್‍ಯಾಲಿಯ ಹಳೆಯ ವಿಡಿಯೋವನ್ನು ಪ್ರಧಾನಿಯವರು ಪಂಜಾಬ್ ಭೇಟಿಯ ವೇಳೆ ನಡೆದ ರ್‍ಯಾಲಿ ಎಂದು ಸುಳ್ಳು ಹೇಳಲಾಗಿದೆ!

ಸಿಖ್ ಸಮುದಾಯದ ಸದಸ್ಯರು ‘ಖಾಲಿಸ್ತಾನ್’ ಧ್ವಜ ಹಿಡಿದುಕೊಂಡು  ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುತ್ತಿರುವ ಬೈಕ್ ರ್‍ಯಾಲಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನವರಿ 5 ರಂದು ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಪ್ರತಿಭಟನೆಯಿಂದಾಗಿ ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಫ್ಲೈ ಓವರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಸಿಲುಕಿಕೊಂಡಿತ್ತು. ಈ ಘಟನೆಯನ್ನು ಗೃಹ ಸಚಿವಾಲಯವು ಪ್ರಧಾನಿಯವರ ಭದ್ರತೆಯಲ್ಲಿನ ಲೋಪ ಎಂದು ಬಣ್ಣಿಸಿದೆ. ಈ ಘಟನೆಗೆ ಸಂಬಂಧಿಸಿ ವಿಡಿಯೋವನ್ನು ಮಾಡಲಾಗಿದೆ.

https://twitter.com/IAmGMishra/status/1478993074239852546?ref_src=twsrc%5Etfw%7Ctwcamp%5Etweetembed%7Ctwterm%5E1478993074239852546%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fold-video-of-pro-khalistan-bike-rally-falsely-linked-to-pms-punjab-visit%2F

ಈ ವೀಡಿಯೋಗಳು ಫೇಸ್ಬುಕ್ ಪೇಜ್‌ಗಳಲ್ಲಿ ಕೂಡ ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್ ;

ಈ ವೀಡಿಯೋ ಪ್ರಧಾನಿಯವರ ಪಂಜಾಬ್ ಭೇಟಿಗೂ ಮುನ್ನ ನಡೆದಿರುವ ರ್ಯಾಲಿಯ ವೀಡಿಯೋ ಎಂದು ಸಾಬೀತಾಗಿದೆ.. ಮುಂದೆ ಓದಿ.

ಈ ಸುದ್ದಿಯ ಬಗ್ಗೆ ನಮ್ಮ ತಂಡ ವೀಡಿಯೋ ಮೂಲವನ್ನು ಹುಡಿಕಿ ಹೊರಟಾಗ ವೈರಲ್ ಆಗಿರುವ ವೀಡಿಯೋ ಡಿಸೆಂಬರ್ ನಲ್ಲಿ ನಡೆರಿರುವ ಒಂದು ರ್ಯಾಲಿಯ ವೀಡಿಯೋದಾಗಿದೆ. ಡಿಸೆಂಬರ್ 27, 2021 ರಿಂದ ಒಂದೇ ರೀತಿಯ ವೀಡಿಯೊವನ್ನು ಹೊಂದಿರುವ ಹಲವಾರು ಟ್ವೀಟ್‌ಗಳನ್ನು ನಾವು ಕಾಣಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋ ಪ್ರಧಾನಿ ಯವರು ಪಂಜಾಬ್ ಭೇಟಿ ನೀಡಿದ ವೇಳೆಯಲ್ಲಿ ಚಿತ್ರೀಕರಿಸಲಾದ ವೀಡಿಯೋ ಅಲ್ಲವೆಂಬುದು ನಮ್ಮ ‍ಫ್ಯಾಕ್ಟ್ ಚೆಕ್ ಮೂಲಕ ಬಯಲಾಗಿದೆ.

ಡಿಸೆಂಬರ್ 26, 2021 ರಂದು ಪಂಜಾಬ್‌ನ ಸಿರ್ಹಿಂದ್‌ನಲ್ಲಿ ಗುರು ಗೋವಿಂದ್ ಸಿಂಗ್ ಅವರ ಪುತ್ರ ಛೋಟ್ಟೆ ಸಾಹಿಬ್ಝಾದ್ ಅವರ ಸ್ಮರಣಾರ್ಥ ಬೈಕ್ ಮೆರವಣಿಗೆಯ ಸಮಯದಲ್ಲಿ ಈ ವಿಡಿಯೋವನ್ನು ಮಾಡಲಾಗಿದ್ದು ಟ್ವಿಟರ್‌ನಲ್ಲಿ ಶೇರ್ ಮಡಲಾಗಿದೆ. ಅವರು ಡಿಸೆಂಬರ್ 26, 1704 ರಂದು ಹುತಾತ್ಮರಾದರು ಎಂದು ಅಲ್ಲಿಯ ಜನರು ನಂಬಿದ್ದು ಪ್ರತಿ ವರ್ಷ ಈ ದಿನಾಂಕ ದಂದು ಶಹೀದಿ ಮೇಲ್ ಸಭಾ ಸಮಿತಿಯ ವತಿಯಿಂದ ಈ ಕಾರ್ಯಕ್ರಮವನ್ನು  ಆಚರಿಸಲಾಗುತ್ತದೆ.

 

ಅದೇ ವೀಡಿಯೊವನ್ನು ಡಿಸೆಂಬರ್ 27, 2021 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಫೇಸ್ಬುಕ್ ಪೇಜಿನಲ್ಲಿ ಕೂಡ ಅಪ್ಲೋಡ್ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಡಿಸೆಂಬರ್ 26, 2021 ರಂದು ಚಿತ್ರೀಕರಿಸಲಾದ ವೀಡಿಯೊವನ್ನು ಜನವರಿ 5, 2022 ರಂದು ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಮಯದಲ್ಲಿ ‘ಖಲಿಸ್ತಾನಿ’ ಘೋಷಣೆಗಳು ಮತ್ತು ಧ್ವಜಗಳನ್ನು ಎತ್ತಿ ತೋರಿಸಲಾಗಿದೆ ಎಂಬ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳವ ಮೂಲಕ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗಿದೆ.


ಇದನ್ನು ಓದಿ: ಆಸ್ಪತ್ರೆಗಳಲ್ಲಿ ಇತರ ಧರ್ಮಗಳಿಗಿಂತ ಮುಸ್ಲಿಂ ಧರ್ಮದ ಜನನ ಸಂಖ್ಯೆ ಹೆಚ್ಚಾಗಿದೆ ಎಂಬುದು ಸುಳ್ಳು ಸುದ್ದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights