ಲಾಕ್‌ಡೌನ್‌: ವಲಸೆ ಕಾರ್ಮಿಕರು ತೆರಳುತ್ತಿದ್ದ ಬಸ್‌ ಪಲ್ಟಿ; ಮೂವರು ದುರ್ಮರಣ!

ದೆಹಲಿಯಲ್ಲಿ ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ತಮ್ಮೂರುಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಬಸ್‌ವೊಂದು ಗ್ವಾಲಿಯರ್‌ ಜಿಲ್ಲೆಯ ಜೊರಾಸಿ ಘಾಟಿಯಲ್ಲಿ ಅಪಘಾತಕ್ಕೀಡಾಗಿದ್ದ ಕನಿಷ್ಟ ಮೂರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಮಂಗಳವಾರ ಬೆಳಗ್ಗೆ ಜೊರಾಸಿ ಘಾಟಿಯ ಸಿರುವುಗಳಲ್ಲಿ ಸಂಚರಿಸುತ್ತಿದ್ದ ಬಸ್‌ ಪಲ್ಟಿ ಹೊಡೆದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾಋಎ ಹಾಗೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿಯ ಸರಾಯ್ ಕೇಲ್ ಖಾನ್‌ನಿಂದ ಟಿಕಮ್‌ಗರ್‌ಗೆ ಬಸ್‌ ತೆರಳುತ್ತಿತ್ತು. ಬಸ್‌ನ ಟಾಪ್‌ ಮೇಲೆಯೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು. ಘಾಟಿ ಬಳಿ ಕಿರಿದಾದ ತಿರುವುಗಳಿದ್ದು, ಅಲ್ಲಿ ವಾಹನಗಳ ನಿಯಂತ್ರಣ ಕಷ್ಟ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿರುವ ಬಸ್‌ ಅಪಘಾತಕ್ಕೀಡಾಗಿದೆ ಎಂದು ಭಿಲೋವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅನಿಲ್ ಸಿಂಗ್ ಭಡೋರಿಯಾ ತಿಳಿಸಿದ್ದಾರೆ.

ಗಾಯಗೊಂಡವರನ್ನು ಗ್ವಾಲಿಯರ್‌ನ ಜೆ ಎ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಪ್ರಯಾಣದಲ್ಲಿ ಮುಂದೆ ಕಳುಹಿಸಲಾಗಿರುವ ಉಳಿದ ಪ್ರಯಾಣಿಕರಿಗಾಗಿ ಇನ್ನೂ ಎರಡು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬಸ್‌ನ ಚಾಲಕ ಪರಾರಿಯಾಗಿದ್ದಾರೆ. ಆತ ಕುಡಿದಿದ್ದ ಎಂದು ಹೇಳಲಾಗಿದೆ. ನಾವು ಬಸ್ ಮಾಲೀಕರನ್ನು ಸಂಪರ್ಕಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಚಾಲಕನನ್ನು ಬಂಧಿಸಲಾಗುವುದು’ ಎಂದು ಭಡೋರಿಯಾ ಹೇಳಿದ್ದಾರೆ.

ಇದನ್ನೂ ಓದಿ: ಶವ ವಾಹನಗಳ ಮುಂದೆ ಬಿಜೆಪಿ ಮುಖಂಡರ ಫೋಟೋಶೂಟ್‌; ನಾಚಿಕೆಗೇಡು ಎಂದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights