ಆಸ್ಪತ್ರೆಗಳಲ್ಲಿ ಇತರ ಧರ್ಮಗಳಿಗಿಂತ ಮುಸ್ಲಿಂ ಧರ್ಮದ ಜನನ ಸಂಖ್ಯೆ ಹೆಚ್ಚಾಗಿದೆ ಎಂಬುದು ಸುಳ್ಳು ಸುದ್ದಿ

ರಾಷ್ಟೀಯ ಮತ್ತು ದೆಹಲಿ ಸರಕಾರಿ ಆಸ್ಪತ್ರೆಗಳಲ್ಲಿ ಮುಸ್ಲಿಂ ನವಜಾತ ಶಿಶುಗಳ ಜನನ ಸಂಖ್ಯೆ ಇತರ ಧರ್ಮದ ಜನನ ಸಂಖ್ಯೆಗಿಂತ ಹೆಚ್ಚಾಗಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವಂತಹ ಪೋಸ್ಟಲ್ಲಿ ಪ್ರತೀ ದಿನ ಸರಕಾರಿ ಆಸ್ಪತ್ರೆಗಳಲ್ಲಿ ಇತರ ಧರ್ಮಗಳಿಂತ 58,167 ಮುಸ್ಲಿಂ ನವಜಾತ ಶಿಶುಗಳು ಜನನವಾಗುತ್ತಿದೆ ಎಂದು ಪ್ರತಿಪಾದಿಸಲಾಗಿದೆ.

ಆ ಪೋಸ್ಟ್ ನಲ್ಲಿ ಭಾರತದ ಸರಕಾರಿ ಆಸ್ಪತ್ರೆಗಳಲ್ಲಿ  ದಿನಕ್ಕೆ 58,167 ಮುಸ್ಲಿಂ ಶಿಶುಗಳು ಜನನವಾಗುತ್ತದೆ. ಹಿಂದೂ ಧರ್ಮದಲ್ಲಿ 3,337 ಕ್ರೈಸ್ತ 1,222 ಸಿಖ್ಖ್ 1,117  ಮತ್ತು  ದೆಹಲಿಯ ಸರಕಾರಿ ಅಸ್ಪತ್ರೆಗಳಲ್ಲಿ 167 ಮುಸ್ಲಿಂ, 37 ಹಿಂದೂ, 12 ಕ್ರೈಸ್ತ, 17 ಸಿಖ್ಖ್ ಶಿಶುಗಳು ಜನನವಾಗುತ್ತದೆ ಎಂದು ಪ್ರತಿಪಾದಿಸಲಾಗಿದೆ.

ನಾಗರೀಕ ನೊಂದಾಣಿ ವ್ಯವಸ್ಥೆ { CRS}  ಹೇಳಿಕೆಯ ಪ್ರಕಾರ ಕೇಂದ್ರ ಗೃಹ ಸಚಿವಾಲಯ ಜನನ-ಮರಣ ನೊಂದಾಣಿ ಪ್ರಕ್ರಿಯೆಯನ್ನು ಮಡುತ್ತದೆ, ಆದರೆ ಅದರ ಮಾಹಿತಿ ಯಾವುದೇ ಧರ್ಮದ ಆಧಾರದ ಮೇಲೆ ಲಭಿಸುದಿಲ್ಲ. ದೆಹಲಿ ಸರಕಾರ ಕೂಡ ಇಂತಹ ದಾಖಲಾತಿಯನ್ನು ಮಾಡುತ್ತದೆ, ಇದರಲ್ಲಿ ಧರ್ಮಾತೀತವಾಗಿ ಶಿಶುಗಳ ಮಾಹಿತಿಗಳು ಲಭ್ಯವಿರುತ್ತದೆ. ಆದರೂ ಇಲ್ಲಿ ಹಿಂದೂ ಧರ್ಮಕ್ಕಿಂತ ಹೆಚ್ಚು ಮುಸ್ಲಿಂ ಧರ್ಮದ ಶಿಶುಗಳು ಜನನವಾಗುತ್ತದೆ ಎಂದು ಪೋಸ್ಟ್ ಮಾಡಲಾಗಿದೆ. ಅವುಗಳು ಈ ಕೆಳಗಿನಂತಿವೆ.

https://twitter.com/shandilyacs/status/1443944807890489344?s=20

 

ಈ ಹಿಂದೆ ಇದೇ ಪ್ರತಿಪಾದನೆಯನ್ನು ಕೇರಳದ ಆಸ್ಪತ್ರೆ ಎಂದೂ ಕೂಡ ವೈರಲ್ ಮಾಡಲಾಗಿತ್ತು.

 

 

https://twitter.com/rashipathak3/status/1439245509387034635?ref_src=twsrc%5Etfw%7Ctwcamp%5Etweetembed%7Ctwterm%5E1439245509387034635%7Ctwgr%5E%7Ctwcon%5Es1_&ref_url=https%3A%2F%2Fwww.boomlive.in%2Ffact-check%2Fpolitics%2Fmuslim-population-hospitals-hindu-children-at-birth-india-delhi-kerala-number-16271

ಫ್ಯಾಕ್ಟ್ ಚೆಕ್

ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದಿಂದ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಪ್ರಕಾರ ವೈರಲ್ ಆಗುತ್ತಿರುವ ಈ ಸಂಖ್ಯೆಗಳು ಸುಳ್ಳು ಎಂದು ತಿಳಿಯುತ್ತದೆ. CRS, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮಾತ್ರ ಸಾರ್ವಜನಿಕವಾಗಿ ಈ ಮಾಹಿತಿಗಳನ್ನು ಸಂಗ್ರಹಿಸುತ್ತದೆ.

ಇತ್ತೀಚಿನ CRS ಅನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಅವರು ಬಿಡುಗಡೆ ಮಾಡಿದ್ದಾರೆ – ಇದು 2019 ವರ್ಷಕ್ಕೆ ಸಂಬಂಧಿಸಿದ್ದಾಗಿದೆ. ಇದರ ಪ್ರಕಾರ 2019 ರಲ್ಲಿ ಭಾರತದಲ್ಲಿ 2,48,20,886 (2.48 ಕೋಟಿ) ಶಿಶುಗಳು ಜನನವಾಗಿದೆ. ಅವುಗಳಲ್ಲಿ

  1. 52.1% ಗಂಡು ಮಕ್ಕಳು ಮತ್ತು 47.9% ಹೆಣ್ಣು ಮಕ್ಕಳು ಇದ್ದಾರೆ.
  2. ವೈದ್ಯಕೀಯದ ಪ್ರಕಾರ 81.2% ಜನನಗಳು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿವೆ. 4.5% ಜನನಗಳನ್ನು ತರಬೇತಿ ಪಡೆಯದ ಹಿರಿಯರು, 8.4% ಜನನಗಳನ್ನು ಫಿಜಿಸಿಯನ್ ಮತ್ತು ನರ್ಸ್ಗಳು, 3.2% ಜನನಗಳನ್ನು ಇತರರು ಮಾಡಿಸಿದ್ದರೆ, 2.7% ರಷ್ಟು ಜನನಗಳು ನೋಂದಣಿಯಾಗಿಲ್ಲ.
  3. 2019 ರಲ್ಲಿ 92.7% ಜನನಗಳು ನೋಂದಾಯಿಸಲ್ಪಟ್ಟಿವೆ.
  4. ನೋಂದಣಿಯಾದ ಜನನಗಳನ್ನು ಜಿಲ್ಲಾವಾರು ಮತ್ತು ಲಿಂಗವಾರು ವಿಭಾಗಿಸಲಾಗುತ್ತದೆ.
  5. ಜನನದ ಲಿಂಗ ಅನುಪಾತ ದಾಖಲುಮಾಡುತ್ತದೆ.
  6. ಜನನಗಳನ್ನು ಗ್ರಾಮೀಣ ಮತ್ತು ನಗರ ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ. 2019ರಲ್ಲಿ 54.2% ನಗರ ಮತ್ತು 45.8% ಗ್ರಾಮೀಣ ಸಂಖ್ಯೆ ದಾಖಲಾಗಿದೆ.

ಆದರೆ ಎಲ್ಲಿಯೂ ಕೂಡಾ ಧರ್ಮದ ಆಧಾರದ ಮೇಲೆ ಜನನ ನೋಂದಾಣಿಯನ್ನು ಮಾಡಿಲ್ಲ, ಆದರಿಂದ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳಾಗಿದೆ. ಜನನ ನೋಂದಣಿಯ ಸಂಪೂರ್ಣ ವಿವರವನ್ನು ಇಲ್ಲಿ ನೋಡಬಹುದು.

ಭಾರತದಲ್ಲಿ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದಕ್ಕೆ ಪುರಾವೆಯಿಲ್ಲ

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡರಲ್ಲೂ ಸಮಾನಾಂತರವಾಗಿ ಫಲವತ್ತೆ (ಗರ್ಭದಾರಣೆ) ಪ್ರಮಾಣ ಇಳಿಮುಖವಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ವಾಷಿಂಗ್‌‌ಟನ್ ಮೂಲದ ಎನ್‌ಜಿಓ ಪ್ಯೂ ಸಂಶೋಧನಾ ಸಂಸ್ಥೆ ತನ್ನ ಅಧ್ಯಯನವನ್ನು ಪ್ರಕಟಿಸಿದ್ದು, ಭಾರತದ ಜನಗಣತಿ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮಾಹಿತಿಯ ಆಧಾರದ ಮೇಲೆ ಅಧ್ಯಯನ ಮಾಡಲಾಗಿದೆ. ಜನಸಂಖ್ಯೆಯ ಧಾರ್ಮಿಕ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುವ ‘ಫಲವತ್ತೆಯ ದರ, ವಲಸೆ ಮತ್ತು ಪರಿವರ್ತನೆಗಳು’- ಈ ಮೂರು ಪ್ರಮುಖ ಅಂಶಗಳ ಕುರಿತು ಅಧ್ಯಯನ ಮಾಡಲಾಗಿದೆ.

ಫಲವತ್ತತೆ ಪ್ರಮಾಣ ಹಲವು ದಶಕಗಳ ಹಿಂದೆ ಮುಸ್ಲಿಂ ಸಮುದಾಯಗಳಲ್ಲಿ ಹೆಚ್ಚಿತ್ತು. ಆದರೆ ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿಯೂ ಫಲವತ್ತತೆ ದರದಲ್ಲಿ ತೀವ್ರ ಕುಸಿತ ಕಾಣಬಹುದು ಎಂದು ವರದಿ ಹೇಳಿದೆ. 1992ರಿಂದ 2015 ಅವಧಿಯಲ್ಲಿ 4.4 ದರದಿಂದ 2.6 ದರಕ್ಕೆ ಮುಸ್ಲಿಂ ಸಮುದಾಯದಲ್ಲಿ ಫಲವತ್ತತೆ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಹಿಂದೂ ಸಮುದಾಯದಲ್ಲಿ 3.3ರಿಂದ 2.1ಕ್ಕೆ ಫಲವತ್ತತೆ ಕುಸಿತ ಕಂಡಿದೆ. ಭಾರತದ ಧಾರ್ಮಿಕ ಗುಂಪುಗಳ ನಡುವಿನ ಹೆರಿಗೆಯ ಅಂತರವು ಸಹ ಹಿಂದೆಂದಿಗಿಂತ ಕಡಿಮೆಯಾಗಿದೆ ಎಂದು ಅಧ್ಯಯನ ಹೇಳಿದೆ.

ಭಾರತದ ಸರಾಸರಿ ಫಲವತ್ತತೆ ದರ 2.2 ಇದ್ದು, ಆರ್ಥಿಕವಾಗಿ ಮುಂದುವರಿದ ಅಮೆರಿಕದಂತಹ (1.6) ದೇಶಗಳಿಗೆ ಹೋಲಿಸಿದರೆ ಹೆಚ್ಚಿದೆ. ಆದರೆ 1992 (3.4 ದರ) ಅಥವಾ 1951ನೇ (5.9 ದರ) ಇಸವಿಗೆ ಹೋಲಿಸಿದರೆ ಭಾರತದಲ್ಲಿ ಫಲವತ್ತತೆ ದರ ಕಡಿಮೆಯಾಗಿದೆ.

****

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights