Fact Check: ಯುಎಸ್ ಏರ್ಪೋರ್ಟ್ ನಲ್ಲಿ ಶಾರೂಕ್ ಪುತ್ರ ಆರ್ಯನ್ ಖಾನ್ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಸುಳ್ಳು ಸುದ್ದಿ ವೈರಲ್

2012 ರ  ಯಾವುದೋ ಅನ್ಯ ವೀಡಿಯೋವನ್ನು ಬಳಸಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್, ಯುಎಸ್ ಏರ್ಪೋರ್ಟ್ ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಹರಿಯಬಿಡಲಾಗಿದೆ.

 

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೈಕೋಳ ಹಾಕಿದ ಭದ್ರತಾ ಸಿಬ್ಬಂದಿ ಆತನನ್ನು ನೆಲಕ್ಕೆ ತಳ್ಳುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಆ ವ್ಯಕ್ತಿ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಎಂದು ಹೇಳಲಾಗಿದೆ. ಆರ್ಯನ್ ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದರು ಎಂಬುದು ಗಮನಾರ್ಹ. ಮೂರು ವಾರಗಳ ಕಾಲ ಜೈಲಿನಲ್ಲಿ ಇದ್ದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

60,000 ಟ್ವಿಟ್ಟರ್ ಅನುಯಾಯಿಗಳ ಸಂಖ್ಯೆಯನ್ನು ಹೊಂದಿರುವ ಅಜಯ್ ಚೌಹಾಣ್ ಅವರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಹೆಚ್ಚಿನ ಮಾಹಿತಿ ಬೇಕಿರುವ ಯಾರಾದರೂ ಅವರನ್ನು ಸಂಪರ್ಕಿಸಬಹುದು ಎಂದು  ಹೇಳಿದ್ದಾರೆ.

 

ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಬಳಕೆದಾರರು ಆರ್ಯನ್ ಯುನೈಟೆಡ್ ಸ್ಟೇಟ್ಸ್‌ನ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೇಳುವ ವೀಡಿಯೊವನ್ನು ಪ್ರಚಾರ ಮಾಡಿದರು. ನಾನು ಏನ್ ಸುದ್ದಿ.ಕಾಮ್ ಈ ಸುದ್ದಿಯ ಮೂಲದ ಬಗ್ಗೆ ತಿಳಿಸಿಕೊಡುವಂತೆ ಸಾಕಷ್ಟು ಕರೆಗಳು ಕೂಡ ಬಂದಿದ್ದವು. ಸುದ್ದಿಯ ಮೂಲವನ್ನು ಕೆದಕುತ್ತಾ ಹೊರಟಾಗ ವೀಡಿಯೋದ ಅಸಲೀಯತ್ತು ಗೊತ್ತಾಗಿದೆ.

 

ಫ್ಯಾಕ್ಟ್ ಚೆಕ್

ನಾವು Google ನಲ್ಲಿ ಕೀವರ್ಡ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ ಬೆಳಕಿಗೆ ಬಂದಿದ್ದೇನೆಂದರೆ, ಜನವರಿ 3, 2013 ರ ಡೈಲಿ ಮೇಲ್‌ ನಲ್ಲಿನ ಲೇಖನ ಪ್ರಕಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ಇದು ವೀಡಿಯೊದಲ್ಲಿರುವ ವ್ಯಕ್ತಿಯನ್ನು ‘ಟ್ವಿಲೈಟ್ ಸಾಗಾ’ ಚಲನಚಿತ್ರದ  ಫ್ರ್ಯಾಂಚೈಸ್‌ನ ಪಾತ್ರ ನಿರ್ವಹಿಸಿರುವ ನಟ ಬ್ರಾನ್ಸನ್ ಪೆಲ್ಲೆಟಿಯರ್ ಎಂದು ಗುರುತಿಸುತ್ತಿದ್ದು ಆ ವ್ಯಕ್ತಿಗೂ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.

 

ಡೈಲಿ ಮೇಲ್‌ ನಲ್ಲಿನ ಇನ್ನೊಂದು ವರದಿಯ ಪ್ರಕಾರ, ಘಟನೆಯು ಡಿಸೆಂಬರ್ 17, 2012 ರಂದು ನಡೆದಿದ್ದ. ನಟನು ಮೊದಲು ಆರೋಪಗಳನ್ನು ನಿರಾಕರಿಸಿದ್ದನು, ಅವನ ಅಭಿಮಾನಿಯೊಬ್ಬ ಆತನಿಗೆ ಕುಡಿಯಲು ತಂಪು ಪಾನೀಯಗಳನ್ನು ನೀಡಲು ಮುಂದಾದಾಗ ಆ ನಟ ಪಾನಮತ್ತಾಗಿದ್ದ ಎಂದು ತಿಳಿಸಿದ್ದಾನೆ ಹಾಗಾಗಿ ಆ ನಂತರ ಆ ವ್ಯಕ್ತಿಯು ಆ ನಟನಿಂದ  ಅಂತರ ಕಾಯ್ದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ವಿಮಾನ ನಿಲ್ದಾಣದಲ್ಲಿ ಆತನ ವರ್ತನೆಯಿಂದಾಗಿ ಆತನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ, ನ್ಯಾಯಾಲಯವು ಆತನನ್ನು ತಪ್ಪಿತಸ್ಥ ಎಂದು ಘೋಷಿಸಿ ಆತನಿಗೆ ಶಿಕ್ಷೆಯನ್ನು ವಿಧಿಸಿದೆ. ಮತ್ತು ಈ ಘಟನೆ ನಡೆದಿರುವುದು 2012 ರಲ್ಲಿ , ಆದರೆ ಈ ಸುದ್ದಿಯನ್ನು ತಿರುಚಿ ವೀಡಿಯೋವನ್ನು ತಪ್ಪು ಮಾಹಿತಿಯೊಂದಿಗೆ ವೈರಲ್ ಮಾಡಲಾಗಿದೆ. ವೈರಲ್ ಆಗಿರುವ ವೀಡಿಯೋವನ್ನು ಆರ್ಯನ್ ಖಾನ್ ಎಂದು ಸುಳ್ಳು ಹೇಳಲಾಗಿದೆ.

ವಾಸ್ತವವಾಗಿ ವೀಡಿಯೋದಲ್ಲಿರುವ ವ್ಯಕ್ತಿಗೂ ಆರ್ಯನ್ ಖಾನ್ ಗೂ ಯಾವ ಸಂಬಂಧವೂ ಇಲ್ಲಾ ಇದೊಂದು ತಪ್ಪು ಸುದ್ದಿ ಎಂದು ಗೊತ್ತಾಗಿದೆ. ವೀಡಿಯೋದಲ್ಲಿರುವ ವ್ಯಕ್ತಿ ಟ್ವಿಲೈಟ್ ಚಿತ್ರದ ನಟ ಬ್ರಾನ್ಸನ್ ಪೆಲ್ಲೆಟಿಯರ್. ಪೆಲ್ಲೆಟಿಯರ್ 25 ವರ್ಷ ವಯಸ್ಸಿನವನಾಗಿದ್ದಾಗ  2012 ರಲ್ಲಿ ಈ ಪ್ರಕರಣ ನಡೆದಿದ್ದು ಆದರೆ ಕೆಲವರು ಸುಳ್ಳು ಸುದ್ದಿಯನ್ನು ಹಂಚಿ ವೀಡಿಯೋದಲ್ಲಿರುವುದು ಆರ್ಯನ್ ಖಾನ್ ಎಂದು ಪುಕಾರು ಮಾಡಲಾಗಿದೆ.

****

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights