ಗುಜರಾತ್‌ನ ಹೊಸ ಮತಾಂತರ ವಿರೋಧಿ ಕಾನೂನು; ಮೂರು ದಿನಗಳ ನಂತರ ಹೈಕೋರ್ಟ್‌ ವಿಚಾರಣೆ!

ಗುಜರಾತ್‌ನಲ್ಲಿ ಜಾರಿಗೆ ಮುಂದಾಗಿರುವ ವಿವಾಹದ ಮೂಲಕ ಅಥವಾ ವಿವಾಹದ ನಂತರ ಬಲವಂತವಾಗಿ ಧಾರ್ಮಿಕ ಮತಾಂತರ ವಿರೋಧಿ ಹೊಸ ಕಾನೂನಿನ ನಿಬಂಧನೆಗಳನ್ನು ಗುಜರಾತ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

2021 ರ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆಯ ಬಗ್ಗೆ ಜೂನ್ 15 ರಂದು ಅಧಿಸೂಚನೆ ಹೊರಡಿಸಲಾಗಿದೆ.

ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಬಿರೆನ್ ವೈಷ್ಣವ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಲಿದ್ದು, ಎರಡು ಮೂರು ದಿನಗಳ ನಂತರ ಅದನ್ನು ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಗುಜರಾತ್ ಧಾರ್ಮಿ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ಎಂಟಿಎಂ ಹಕೀಮ್ ಅವರು ಈ ಬಗ್ಗೆ ಮಾಧ್ಯಮಗಳೊಂದಿಗೆ ಈಗಲೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದ್ದು, ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಮೇ 22 ರಂದು ಮಸೂದೆಗೆ ಸಹಿ ಹಾಕಿ ಒಪ್ಪಿಗೆ ನೀಡಿದ್ದಾರೆ.

ಇದು ಜೂನ್ 15 ರಿಂದ ಜಾರಿಗೆ ಬಂದಿದ್ದು, ಅಂದಿನಿಂದ ವಿವಾದಾತ್ಮಕ ಕಾನೂನಿನಡಿಯಲ್ಲಿ ಗುಜರಾತ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಎಫ್‌ಐಆರ್ ದಾಖಲಿಸಲಾಗಿವೆ.

ಇದನ್ನೂ ಓದಿ: ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು ಶಮನ?; ನವಜೋತ್‌ ಸಿಧು ರಾಜ್ಯಾಧ್ಯಕ್ಷ; ಅಮರಿಂದರ್ ಸಿಎಂ ಆಗಿ ಮುಂದುವರಿಕೆ?

ಸಮೀರ್ ಖುರೇಷಿ (26) ಎಂಬುವವರ ವಿರುದ್ಧ ವಡೋದರಾ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಿಸಲಾಗಿದ್ದು, ಈತ 2019 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕ್ರಿಶ್ಚಿಯನ್ ಎಂದು ಬಿಂಬಿಸಿಕೊಂಡಿರುವ ಮಹಿಳೆಗೆ ಆಮಿಷವೊಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾಯಿದೆಯು ವಿವಾಹದ ಮೂಲಕ ಬಲವಂತವಾಗಿ ಧಾರ್ಮಿಕ ಮತಾಂತರಕವನ್ನು ಮಾಡುವುದಕ್ಕೆ ಕಠಿಣ ಶಿಕ್ಷೆಯನ್ನು ಹೊಂದಿದ್ದು, ಅಪರಾಧಿಗಳಿಗೆ 3 ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ ದಂಡ ವಿಧಿಸಲಾಗುತ್ತದೆ.

ಸಂತ್ರಸ್ತರು ಅಪ್ರಾಪ್ತ, ವಯಸ್ಕ ಮಹಿಳೆ, ದಲಿತ ಅಥವಾ ಬುಡಕಟ್ಟು ಜನಾಂಗದವರಾಗಿದ್ದರೆ, ಅಪರಾಧಿಗಳಿಗೆ 4 ರಿಂದ 7 ವರ್ಷ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಮೇಲ್ಪಟ್ಟು ದಂಡ ವಿಧಿಸಬಹುದು.

ಈ ಕಾನೂನನ್ನು ಒಂದು ಸಂಸ್ಥೆ ಉಲ್ಲಂಘಿಸಿದರೆ, ಆ ಸಮಯದಲ್ಲಿ ಸಂಸ್ಥೆಯ ಉಸ್ತುವಾರಿ ವಹಿಸಿದ್ದ ವ್ಯಕ್ತಿಗೆ ಕಾಯಿದೆಯ ಪ್ರಕಾರ 3 – 10 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು.

ಇದನ್ನೂ ಓದಿ: ಮೋದಿಯನ್ನು ನಾಚಿಕೆಯಿಲ್ಲದ ಪ್ರಧಾನಿ ಎಂದು ಟೀಕೆ; ಪತ್ರಕರ್ತನನ್ನು ವಜಾಗೊಳಿಸಿದ ಆಜ್‌ತಕ್‌ ಚಾನೆಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights