ಭಾರೀ ಮಳೆ : ಸಿಂಕ್‌ಹೋಲ್‌ಗೆ ಬಿದ್ದು ಕಣ್ಮರೆಯಾದ ಕಾನ್‌ಸ್ಟೆಬಲ್ ಕಾರು..!

ದೆಹಲಿಯಲ್ಲಿ ನಿರಂತರ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸವಾರರು ಹರಸಾಹಸವೇ ಪಡುತ್ತಿದ್ದಾರೆ. ಭಾರೀ ಮಳೆಗೆ ಕಾನ್‌ಸ್ಟೆಬಲ್ ಕಾರೊಂದು ರಸ್ತೆ ಕುಸಿದು ಸಿಂಕ್‌ಹೋಲ್‌ಗೆ ಬಿದ್ದು ಕಣ್ಮರೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 70 ಮಿ.ಮೀ ಮತ್ತು ಗುರಗಾಂವ್ 40 ಮಿ.ಮೀ ಮಳೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿಯಿಡೀ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ನದಿಗಳಾಗಿ ಮಾರ್ಪಾಡಾಗಿವೆ. ದೆಹಲಿಯ ದ್ವಾರಕಾ ಪ್ರದೇಶದ ಮೂಲಕ ಚಾಲನೆ ಮಾಡುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಅಶ್ವನಿ ಅವರ ಕಾರು ಸಿಂಕ್‌ಹೋಲ್‌ಗೆ ಬಿದ್ದು ಕಣ್ಮರೆಯಾಗಿದೆ.  ಹಲವಾರು ಅಡಿ ಆಳದ ಹಳ್ಳದಲ್ಲಿ ಮುಳುಗಿದ್ದ ಕಾರನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ.

ಕಾನ್‌ಸ್ಟೆಬಲ್ ಅಶ್ವನಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ತಿಂಗಳು ಇದೇ ರೀತಿಯ ಘಟನೆ ವರದಿಯಾಗಿತ್ತು. ಮುಂಬೈನ ವಸತಿ ಸಮುಚ್ಚಯವೊಂದರಲ್ಲಿ ನಿಲ್ಲಿಸಿದ್ದ ಕಾರು ಸೆಕೆಂಡುಗಳಲ್ಲಿ ಬಾವಿಗೆ ಬಿದ್ದು  ಕಣ್ಮರೆಯಾಗಿತ್ತು. ಭಾರಿ ಮಳೆಯಿಂದಾಗಿ ಭಾಗಶಃ ಮುಚ್ಚಿದ ಬಾವಿಗೆ ನಿಲ್ಲಿಸಿದ್ದ ಕಾರು ಬಿದ್ದು ಹೋಗಿತ್ತು.

ರಾಷ್ಟ್ರ ರಾಜಧಾನಿಯಾದ್ಯಂತ ಪ್ರವಾಹ, ಮುಳುಗುವಿಕೆ ಮತ್ತು ಸಂಚಾರ ದಟ್ಟಣೆ ಘಟನೆಗಳು ಇಂದು ವರದಿಯಾಗಿವೆ.

ಇಂದು ಮುಂಚೆಯೇ 27 ವರ್ಷದ ಯುವಕನೊಬ್ಬ ಭಾರಿ ಮಳೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನೀರಿನಿಂದ ತುಂಬಿದ ಅಂಡರ್‌ಪಾಸ್‌ನಲ್ಲಿ ಮುಳುಗಿ ತನ್ನ ಸೆಲ್‌ಫೋನ್‌ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಗುರ್ಗಾಂವ್ನಲ್ಲಿ, ವಸತಿ ಪ್ರದೇಶಗಳ ನೀರಿನಿಂದ ತುಂಬಿದ ಬೀದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights