ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕೊರೊನಾತಂಕ : ಮತ್ತಿಬ್ಬರು ಆಟಗಾರಿಗೆ ಸೋಂಕು!
ಟೋಕಿಯೊ ಒಲಿಂಪಿಕ್ಸ್ 2020ಯ ಇಬ್ಬರು ಮೆಕ್ಸಿಕನ್ ಬೇಸ್‌ಬಾಲ್ ಆಟಗಾರರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಮೆಕ್ಸಿಕನ್ ಒಲಿಂಪಿಕ್ ಸಮಿತಿ (COM) ಸ್ಥಾಪಿಸಿದ ಕೊರೊನಾ ಎಲ್ಲಾ ಪ್ರೋಟೋಕಾಲ್‌ಗಳನ್ನು ಪ್ರತಿಯೊಬ್ಬ ಆಟಗಾರರು ಅನುಸರಿಸಬೇಕು. ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಷ್ಟ್ರೀಯ ಬೇಸ್‌ಬಾಲ್ ತಂಡದ ಎಲ್ಲ ಸದಸ್ಯರು ತಮ್ಮ ಆರೋಗ್ಯದ ಬಗ್ಗೆ ಖಚಿತಪಡಿಸಬೇಕು. ಪ್ರತಿಯೊಬ್ಬ ಆಟಗಾರರು ಕೊರೊನಾ ಪರೀಕ್ಷಾ ವರದಿ ಹೊಂದಿರುವುದು ಕಡ್ಡಾಯ. ಹೀಗಾಗಿ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳು ಮುನ್ನ ಟೆಸ್ಟ್ ಮಾಡಿಸಿಕೊಂಡ ಇಬ್ಬರು ಆಟಗಾರರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಮೆಕ್ಸಿಕನ್ ಬೇಸ್‌ಬಾಲ್ ಅಧಿಕಾರಿಗಳು ಘೋಷಿಸಿದ್ದಾರೆ.
ಜುಲೈ 18 ರಂದು ಧನಾತ್ಮಕ ಪರೀಕ್ಷೆ ನಡೆಸಿದ ಕ್ರೀಡಾಪಟುಗಳಾದ ಹೆಕ್ಟರ್ ವೆಲಾಜ್ಕ್ವೆಜ್ ಮತ್ತು ಸ್ಯಾಮಿ ಸೊಲಿಸ್ ಅವರನ್ನು ಪ್ರತ್ಯೇಕಿಸಲಾಗಿದೆ. ಎಲ್ಲಾ ತಂಡದ ಸದಸ್ಯರು ಪರೀಕ್ಷೆ ಫಲಿತಾಂಶವನ್ನು ಕಾಯುತ್ತಿದ್ದಾರೆ.
ಮೆಕ್ಸಿಕೊ ತಮ್ಮ ಮೊದಲ ಒಲಿಂಪಿಕ್ ಪಂದ್ಯವನ್ನು ಜುಲೈ 30 ರಂದು ಯೊಕೊಹಾಮಾದಲ್ಲಿ ಡೊಮಿನಿಕನ್ ರಿಪಬ್ಲಿಕ್ ವಿರುದ್ಧ ಆಡುತ್ತದೆ.