ಟೈಮ್ ಬಾಂಬ್‌ನ ಮೇಲಿದೆ ಮುಂಬೈ: ಭೂಕುಸಿತವನ್ನು ಎದುರಿಸುತ್ತಿವೆ ಮುಂಬೈನ 22,000 ಕೊಳಗೇರಿಗಳು!

ಮುಂಬೈನಲ್ಲಿ ಉಂಟಾದ ಭೂಕುಸಿತದಿಂದಾಗಿ ಮನೆಗಳ ಗೋಡೆಗಳು ಕುಸಿದಿದ್ದು, ಸುಮಾರು 35 ಜನರು ಸಾವನ್ನಪ್ಪಿದ್ದಾರೆ. ಈ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸೋಮವಾರ ದುರ್ಬಲ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದ್ದಾರೆ.

ಆದಾಗ್ಯೂ, ಭೂಕುಸಿತ ಪೀಡಿತ ವಲಯಗಳೆಂದು ಗುರುತಿಸಲಾಗಿರುವ ಪ್ರದೇಶಗಳ ಪೈಕಿ 1.50 ಲಕ್ಷಕ್ಕೂ ಹೆಚ್ಚು ಜನರು 22,000 ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಈಗ ಅಧಿಕಾರಿಗಳು ಮಾಡುತ್ತಿರುವ ತಾತ್ಕಾಲಿಕ ಸ್ಥಳಾಂತರಿಸುವಿಕೆವು ಮುಂದೆ ಎದುರಾಗುವ ದೊಡ್ಡ ಅನಾಹುತವನ್ನು ತಾತ್ಕಾಲಿಕವಾಗಿ ಮಾತ್ರವಷ್ಟೇ ತಡೆಯುತ್ತದೆ ಎಂದು ಆರ್‌ಟಿಐ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ಧಾರೆ.

2005 ರಲ್ಲಿ, ಆರ್‌ಟಿಐ ಕಾರ್ಯಕರ್ತ ಅನಿಲ್ ಗಲ್ಗಾಲಿ ಅವರು ಎಷ್ಟು ಕೊಳೆಗೇರಿಗಳು ಭೂಕುಸಿತ ಪೀಡಿತ ಸ್ಥಳಗಳಿಗೆ ಹತ್ತಿರದಲ್ಲಿವೆ ಮತ್ತು ಅವುಗಳನ್ನು ಸ್ಥಳಾಂತರಿಸಲು ಸರ್ಕಾರದ ಕ್ರಮಗಳೇನು ಎಂಬ ಬಗ್ಗೆ ಮಾಹಿತಿ ಕೋರಿದ್ದರು.

ಇದಾದ ನಂತರ, 16 ವರ್ಷಗಳು ಕಳೆದಿದ್ದು, ಬೃಹನ್ ಮುಂಬೈ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ.

ದುರ್ಬಲ ಪ್ರದೇಶಗಳ ಸಮೀಕ್ಷೆಗೆ ಚೌಹಾಣ್ ಸರ್ಕಾರ ಆದೇಶಿಸಿತ್ತು:

ಕೆಲವು ಭೂಕುಸಿತ ಘಟನೆಗಳ ನಂತರ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್‌ ಅವರು ಮುಂಬೈನಾದ್ಯಂತ ಭೂಕುಸಿತ ಪೀಡಿತ ಕೊಳೆಗೇರಿಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು ಎಂದು ಗಲ್ಗಾಲಿ ತಿಳಿಸಿದ್ದಾರೆ.

“ಸಮೀಕ್ಷೆಯಲ್ಲಿ, 22,483 ಕೊಳೆಗೇರಿಗಳು ಭೂಕುಸಿತದ ಆತಂಕವನ್ನು ಎದುರಿಸುತ್ತಿವೆ ಎಂದು ಗುರುತಿಸಲಾಗಿದೆ. ದಕ್ಷಿಣ ಮುಂಬೈ ಮತ್ತು ಉಪನಗರ ಜಿಲ್ಲೆಗಳಲ್ಲಿ ಕ್ರಮವಾಗಿ 3,968 ಮತ್ತು 18,797 ಕೊಳೆಗೇರಿಗಳು ಇದ್ದವು. ಈ ಕೊಳೆಗೇರಿಗಳು 327 ಸ್ಥಳಗಳಲ್ಲಿ ಹರಡಿಕೊಂಡಿವೆ. 22,483 ರಲ್ಲಿ 9,657 ಕೊಳೆಗೇರಿಗಳ ನಿವಾಸಿಗಳನ್ನು ತುರ್ತಾಗಿ ಸ್ಥಳಾಂತರಿಸಬೇಕಾಗಿದೆ ಎಂದು ಹೇಳಲಾಗಿತ್ತು.ಆದರೆ, ಇದೂವರೆಗೂ ಏನೂ ಮಾಡಿಲ್ಲ” ಎಂದು ಗಲ್ಗಾಲಿ ಆರೋಪಿಸಿದ್ದಾರೆ.

ಮಾಸ್ಟರ್ ಪ್ಲ್ಯಾನ್ ಕಾಣೆಯಾಗಿದೆ

ಸಾವನ್ನಪ್ಪಿದ ಜನರನ್ನು ಪತ್ತೆ ಮಾಡುವುದಕ್ಕಿಂತಲೂ, ಅವರನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಗಲ್ಗಾಲಿ ಹೇಳಿದರು.

ಇದನ್ನೂ ಓದಿ: ಮುಂಬೈ-ಪುಣೆ ಹೆದ್ದಾರಿಯಲ್ಲಿ ಭೀಕರ ಅಪಘಾತ : ಟ್ರಕ್ ಗೆ ಡಿಕ್ಕಿ ಹೊಡೆದ ಕಾರ್- ಕ್ಯಾಮಾರಾದಲ್ಲಿ ದೃಶ್ಯ ಸೆರೆ!

“ನಾನು ಈ ವಿಷಯವನ್ನು ಎಲ್ಲಾ ಸಂಸದರು ಮತ್ತು ಶಾಸಕರೊಂದಿಗೆಚರ್ಚಿಸಿದ್ದೇನೆ. ಆದರೆ ಯಾವತ್ತೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಜನರನ್ನು ಸ್ಥಳಾಂತರಿಸಲು ಸರ್ಕಾರ ದೀರ್ಘಾವಧಿಯ ಯೋಜನೆಯನ್ನು ಸಿದ್ಧಪಡಿಸದಿದ್ದರೆ, ಮುಂಬೈ ಜೀವ ಕಳೆದುಕೊಳ್ಳುವುದನ್ನು ಮುಂದುವರಿಸುತ್ತದೆ”ಎಂದು ಆರ್‌ಟಿಐ ಕಾರ್ಯಕರ್ತ ಹೇಳಿದ್ದಾರೆ.

ಹೊಸ ಸಮೀಕ್ಷೆ ಬರಲಿದೆ

ಭೂಕುಸಿತ ಪೀಡಿತ ಪ್ರದೇಶಗಳಿಗೆ ಸಮೀಪವಿರುವ ಕೊಳೆಗೇರಿ ನಿವಾಸಿಗಳ ಪುನರ್ವಸತಿಗಾಗಿ ಒಂದು ತಿಂಗಳಲ್ಲಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುವುದು ಎಂದು ಆಡಳಿತ ಮಂಡಳಿಯ ಸಭೆಯಲ್ಲಿ ಲಿಖಿತವಾಗಿ ತಿಳಿಸಲಾಗಿತ್ತು. ಆದರೆ, ಏನೂ ಆಗಲಿಲ್ಲ.

ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿರುವ ಏಕನಾಥ್ ಶಿಂಧೆ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ವ್ಯರ್ಥವಾದವು.

ಮಳೆಯಲ್ಲಿ ಮೀಯುತ್ತಿದೆ ನಗರ

ಭಾರತದ ಆರ್ಥಿಕ ರಾಜಧಾನಿ ಸತತ ಮೂರನೇ ದಿನವೂ ಮಳೆಯಿಂದ ತೋಯ್ದುಹೋಗಿದೆ. ಐದು ಸ್ಥಳಗಳಲ್ಲಿ ಗೋಡೆ ಕುಸಿದ ಘಟನೆಗಳು ವರದಿಯಾಗಿವೆ. ವಿದ್ಯುತ್ ವೈಫಲ್ಯ, ಪ್ರವಾಹ, ಶಾರ್ಟ್-ಸರ್ಕ್ಯೂಟ್ ಬೆಂಕಿ ಮತ್ತು ದಟ್ಟಣೆಯ ಕುರಿತಾದ ವರದಿಯಾಗಿವೆ.

ನವೀ ಮುಂಬಯಿಯಲ್ಲಿ ಸ್ಥಳೀಯ ನದಿಯಲ್ಲಿ 200 ಕ್ಕೂ ಹೆಚ್ಚು ಪ್ರವಾಸಿಗರು ಸಿಕ್ಕಿಬಿದ್ದಿದ್ದರು. ಸ್ಥಳೀಯ ಅಧಿಕಾರಿಗಳು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯ ಸಹಾಯದಿಂದ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಭಾರಿ ಮಳೆಯಿಂದಾಗಿ, ಉಪನಗರ ಕಂಡಿವಲಿಯ ಠಾಕೂರ್ ಕಾಂಪ್ಲೆಕ್ಸ್‌ನಲ್ಲಿ ಮುಂಬೈ ನಾಗರಿಕ ಸಂಸ್ಥೆ ನಿರ್ಮಿಸಿದ ಭೂಗತ ಸಾರ್ವಜನಿಕ ಪಾರ್ಕಿಂಗ್ ಸ್ಥಳದಲ್ಲಿ ಹೈ-ಎಂಡ್ ಕಾರುಗಳು ಮತ್ತು ಮೋಟಾರು ಬೈಕ್‌ಗಳು ಸೇರಿದಂತೆ ಸುಮಾರು 400 ವಾಹನಗಳು ಮುಳುಗಿವೆ.

ಬಿಎಂಸಿ ಒಂದು ಸಂಖ್ಯೆಯನ್ನು ಹಾಕದಿದ್ದರೂ, ಅವರ ಮಾಲೀಕರಿಗೆ ಪರಿಹಾರ ನೀಡುವ ಸಾಧ್ಯತೆಯನ್ನು ಪರಿಶೀಲಿಸುವ ಭರವಸೆ ನೀಡಿದೆ.

ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆ : ಮನೆ ಕುಸಿದು 15 ಮಂದಿ ಸಾವು – ರೈಲು ಸೇವೆ ಸ್ಥಗಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights