Lockdown ಸಂದರ್ಭ ಮತ್ತು ಮೋದಿ ಸರ್ಕಾರದ ನಡೆಗಳನ್ನು ಚರ್ಚಿಸಲು ವಿಪಕ್ಷಗಳ ಸಭೆಗೆ ಸೋನಿಯಾ ಗಾಂಧಿ ಕರೆ

ಕೊರೊನಾ ವೈರಸ್‌ನಿಂದಾಗಿರುವ ಬಿಕ್ಕಟ್ಟನ್ನು ಎದುರಿಸುವುದರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ಷಮತೆಯನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್‌, ಶುಕ್ರವಾರ ಎಲ್ಲಾ ವಿಪಕ್ಷಗಳ ವಿಡಿಯೋ ಕಾನ್ಫರೆನ್ಸ್ ಸಭೆ ಕರೆದಿದೆ.

ಸಭೆಯಲ್ಲಿ “ಕೊರೊನಾ ಸೋಂಕನ್ನು ಸರ್ಕಾರ ನಿರ್ವಹಿಸುವ ರೀತಿ, ವಲಸೆಗಾರರ ​​ಸಮಸ್ಯೆ, ರಾಜ್ಯಗಳು ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವುದು ಮತ್ತು ವಿವಿಧ ಸಂಸದೀಯ ಸಮಿತಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿರುವುದೂ” ಸೇರಿದಂತೆ ಹಲವು ನಿರ್ಣಾಯಕ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅಧ್ಯಕ್ಷತೆ ವಹಿಸಲಿದ್ದು, ಸಭೆಗೆ ಡಿಎಂಕೆ, ಎಡ ಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹದಿನೆಂಟು ಪಕ್ಷಗಳನ್ನು ಆಹ್ವಾನಿಸಲಾಗಿದೆ.

“ನಾನು ಸಭೆಯಲ್ಲಿ ಹಾಜರಾಗುತ್ತೇನೆ. ಈ ಸಭೆಯ ಅಗತ್ಯವಿದೆ, ಈನಡೆ ಒಳ್ಳೆಯದು. ನಾವು COVID-19 ಪರಿಸ್ಥಿತಿಯನ್ನು ಚರ್ಚಿಸುತ್ತೇವೆ” ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ತಿಳಿಸಿದ್ದಾರೆ.

ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ.

ಸಂಘಟಿತ ಕ್ರಿಯಾಯೋಜನೆಗಳನ್ನು ರೂಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಸಾಂಕ್ರಾಮಿಕ ರೋಗ ಹಾಗೂ  ಲಾಕ್‌ಡೌನ್ ಕ್ರಮಗಳಿಂದಾಗಿ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ನಿಭಾಯಿಸವು ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ರೂಪಿಸಲು ಸರ್ಕಾರದ ಪಾರದರ್ಶಕತೆಯ ಕೊರತೆ ಮತ್ತು ಅಸಮರ್ಥತೆಯ ಕಾರಣಕ್ಕಾಗಿ ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಧ್ವನಿ ಎತ್ತುವಂತೆ ತೋರುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ್ ತಿಳಿಸಿದ್ದಾರೆ.

“ಲಾಕ್‌ಡೌನ್ ಸಮಯದಲ್ಲಿ ಅಧಿಕಾರಗಳ ಕೇಂದ್ರೀಕರಣವು ಪ್ರತಿಪಕ್ಷಗಳಿಗೆ ಆತಂಕವನ್ನುಂಟು ಮಾಡಿದೆ ಮತ್ತು ಅನೇಕ ನಾಯಕರು ಪ್ರಜಾಪ್ರಭುತ್ವವನ್ನು ಉಳಿಸುವ ಕಾರ್ಯಗಳನ್ನು ಆದಷ್ಟು ಬೇಗ ಪುನರಾರಂಭಿಸಬೇಕು” ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಆನಂದ್ ಶರ್ಮ ಪತ್ರ ಬರೆದಿದ್ದಾರೆ.

ಇಲ್ಲಿಯವರೆಗೆ, ವಿರೋಧ ಪಕ್ಷದ ನಾಯಕರು ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ ಸರ್ಕಾರಕ್ಕೆ ಬೆಂಬಲವನ್ನು ನೀಡಿದ್ದರು, ಆದರೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಿಕೆಯು ಪ್ರಜಾಪ್ರಭುತ್ವ ವಿರೋಧಿ ನಡೆಯ ನಿದರ್ಶನವನ್ನು ಹೊಂದಿದೆ ಎಂಬ ಆತಂಕವನ್ನು ಸೃಷ್ಠಿಸಿದೆ. ವಿವಿಧ ಬಿಜೆಪಿ ಆಡಳಿತದ ರಾಜ್ಯಗಳಿಂದ ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸುವುದು, ರಾಜ್ಯಗಳಿಗೆ ಕೇಂದ್ರವು ಹಣಕಾಸಿನ ನೆರವು ನೀಡುವುದು ಮತ್ತು ವಲಸೆ ಕಾರ್ಮಿಕರ ಬಿಕ್ಕಟ್ಟು ಎಲ್ಲವೂ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಸಾಲುಗಳನ್ನು ಹುಟ್ಟುಹಾಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights