ಡಬ್ಬಿಂಗ್‌ ವಿರುದ್ಧ ಬಂಡೆದ್ದ ಜಗ್ಗೇಶ್!

ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ , ಕಿರಿಯ ಕಲಾವಿದರೆಲ್ಲರೂ ಪರಸ್ಪರ ಒಗ್ಗಟ್ಟಾದರೇ ಮಾತ್ರ ಚಿತ್ರೋದ್ಯಮ ಉಳಿಯಲು ಸಾಧ್ಯ ಎಂಬುದು ನಟ ಜಗ್ಗೇಶ್ ಅಭಿಪ್ರಾಯ.

ಚಿತ್ರೋದ್ಯಮದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪರಭಾಷೆ ನಿರ್ಮಾಪಕರು ನಿರ್ದೇಶಕರಿಗೆ ಬಿಲ್ಡ್ ಅಪ್ ಕೊಟ್ಟು ಕರ್ನಾಟಕ ಎಂದರೆ ಇಷ್ಟೇ ಜನ ಎಂದು ಮುದ್ರೆ ಹಾಕಿ ಡಬ್ಬಿಂಗ್ ಸಿನಿಮಾ, ಡಬ್ಬಿಂಗ್ ರೈಟ್ಸ್, ಪಡೆದು ಕೆಲವರು ಬಲಿಷ್ಟರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂತವರ ಕಪಿಮುಷ್ಟಿಯಿಂದ ಉದ್ಯಮ ಹೊರಬಂದರೆ! ಹೊಸ ನಿರ್ಮಾಪಕರು ನಿರ್ದೇಶಕರು, ನಟ, ನಟಿಯರು ಬೆಳೆದು ಕನ್ನಡ ಚಿತ್ರರಂಗದ ಮುಂದಿನ ಆಸ್ತಿಯಾಗಲಿದ್ದಾರೆ. ಕಲಾಭಿಮಾನಿಗಳ ಚಪ್ಪಾಳೆ ನಟ-ನಟಿ ಯನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹೀಗಾಗಿ ಕಲಾವಿದರನ್ನು ಬೆಳೆಸಿದ ನಿರ್ಮಾಪಕರು ಟಿವಿ ಮುಂದೆ,ಒಂಟಿ ಭೀಕ್ಷುಕನನ್ನಾಗಿ ಮಾಡಬೇಡಿ ಎಂದಿದ್ದಾರೆ.

ಈಗ ಹಿರಿಯರೆಲ್ಲರೂ ಒಂದಾಗದಿದ್ದರೇ, ಪರ ಭಾಷೆಯ ಚಿತ್ರಗಳು ರಾಜನಂತೆ ರಾಜ್ಯವನ್ನು ಆಕ್ರಮಿಸಿ, ನಮ್ಮ ಭಾಷೆ ಅನಾದರಣೆಗೆ ಒಳಗಾಗುವು ಖಚಿತ ನಮ್ಮ ಚಿತ್ರರಂಗಕ್ಕೆ ನಮ್ಮವರೇ ಶತ್ರುಗಳಾಗುವುದು ಬೇಡ ಎಂದು ಜಗ್ಗೇಶ್ ಹೇಳಿದ್ದಾರೆ.

ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ, ಕಿರಿಯರು ಒಂದು ವೇದಿಕೆ ರಚಿಸಿ ನಿಸ್ವಾರ್ಥ ಯತ್ನ ಮಾಡಿದರೆ ಮಾತ್ರ ಉದ್ಯಮ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಕನ್ನಡ ಭಾಷೆ, ಕನ್ನಡ ಸಿನಿಮಾ ಬಗ್ಗೆ ಮಾತನಾಡುವ ಜಗ್ಗೇಶ್‌ ಡಬ್ಬಿಂಗ್‌ ಸಿನಿಮಾಗಳನ್ನು ವಿರೋಧಿಸುತ್ತಲೇ ಇದ್ದಾರೆ. ಆದರೆ, ರಾಜ್ಯದಲ್ಲಿ ಹಿಂದಿ ಏರಿಕೆಯ ವಿರುದ್ಧ ಎಂದಿಗೂ ಮಾತನಾಡಿದ್ದಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ಭಾಷೆ ಕಡ್ಡಾಯಗೊಳಿಸಲು ಸೂಚಿಸಿತ್ತು. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಹಿಂದಿ ಏರಿಕೆಯ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆದರೆ, ಹಿಂದಿ ಏರಿಕೆಯ ವಿರುದ್ಧ ಜಗ್ಗೇಶ್ ಮಾತನಾಡಿಲ್ಲ.

ಸದಾ ಡಬ್ಬಿಂಗ್‌ ವಿರುದ್ಧ ಗುಟುರು ಹಾಕುವ ಜಗ್ಗೇಶ್‌ ಕನ್ನಡದಲ್ಲಿನ ಬಹುಸಂಖ್ಯಾತ ಸಿನಿಮಾಗಳ ಕತೆಗಳು ಏನಿರುತ್ತವೆ. ಅಷ್ಟೇ ಏಕೆ ಸ್ವತಃ ಜಗ್ಗೇಶ್ ಅಭಿನಯದ ಸಿನಿಮಾಗಳ ಕತೆಯ ಸಾರವೇನು ಎಂಬುದನ್ನು ಗಮಿಸಿದರೆ, ಡಬ್ಬಿಂಗ್‌ ಎಷ್ಟು ಕನ್ನಡಿಗರಿಗೆ ಎಷ್ಟು ಅನಿವಾರ್ಯ ಎಂಬುದು ಅರ್ಥವಾಗುತ್ತದೆ. ಕನ್ನಡ ಚಿತ್ರರಂಗದಲ್ಲೇ ಉತ್ತಮ ಸಿನಿಮಾಗಳು ಬರುವುದಾರೆ ಡಬ್ಬಿಂಗ್‌ ಅಗತ್ಯವಿಲ್ಲ. ಆದರೆ, ಸಾಮಾಜಿಕ ಕಾಳಜಿಯ ಸಿನಿಮಾಗಳಿಂದ ದೂರುಳಿದಿರುವ ಸ್ಯಾಂಡಲ್‌ವುಡ್‌ನಿಂದಾಗಿ ಅನ್ಯ ಭಾಷೆಯ ಉತ್ತಮ ಸಿನಿಮಾಗಳನ್ನು ಕನ್ನಡಿಗರಿಗೆ ಒದಗಿಸುವುದಕ್ಕಾಗಿ ಡಬ್ಬಿಂಗ್‌ ಎಂದಿಗೂ ಅನಿವಾರ್ಯವೇ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights