ಮುಂಬೈ-ಪುಣೆ ಹೆದ್ದಾರಿಯಲ್ಲಿ ಭೀಕರ ಅಪಘಾತ : ಟ್ರಕ್ ಗೆ ಡಿಕ್ಕಿ ಹೊಡೆದ ಕಾರ್- ಕ್ಯಾಮಾರಾದಲ್ಲಿ ದೃಶ್ಯ ಸೆರೆ!

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಕ್ಯಾಮಾರಾದಲ್ಲಿ ದೃಶ್ಯ ಸೆರೆಯಾಗಿದೆ.

ಗುರುವಾರ ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡ ಕಂಟೈನರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಕುಟುಂಬಸ್ಥರು ಸಾವನ್ನಪ್ಪಿದ್ದಾರೆ. ಈ ಅಪಘಾತದ ದೃಶ್ಯಗಳು ಹ್ಯುಂಡೈ ಐ 10 ಮುಂಭಾಗದಲ್ಲಿದ್ದ ಮತ್ತೊಂದು ಟ್ರಕ್‌ನ ಹಿಂದಿನ ಕ್ಯಾಮೆರಾದಿಂದ ಸೆರೆಹಿಡಿಯಲ್ಪಟ್ಟಿದ್ದು, ಎರಡು ದೊಡ್ಡ ವಾಹನಗಳ ನಡುವೆ ಕಾರು ಸಿಕ್ಕಿಬಿದ್ದಿದೆ.

ಅಪಘಾತದ ನಂತರ ಕಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ವರ್ಷದ ಬಾಲಕ ಸೇರಿದಂತೆ ಮೂವರು ಕುಟುಂಬಸ್ಥರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಹೆದ್ದಾರಿ ಪೊಲೀಸರ ಗಸ್ತು ತಂಡ ಸ್ಥಳಕ್ಕೆ ತಲುಪಿ ಚಾಲಕನನ್ನು ರಕ್ಷಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದೆ.

ಭಾರತದಾದ್ಯಂತ ಕಳೆದ ಒಂದು ವರ್ಷದಲ್ಲಿ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಜಾಗತಿಕವಾಗಿ ಪ್ರತಿವರ್ಷ 4.5 ಲಕ್ಷ ಜನರು ಇಂತಹ ಘಟನೆಗಳಲ್ಲಿ ದುರ್ಬಲರಾಗಿದ್ದಾರೆ ಮತ್ತು ಈ ವರ್ಷದ ಆರಂಭದಲ್ಲಿ ಇದರ ಪರಿಣಾಮವಾಗಿ ಜಿಡಿಪಿಯ ಶೇಕಡಾ 3.14 ರಷ್ಟು ನಷ್ಟವಾಗಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ.

https://www.ndtv.com/cities/on-camera-truck-runs-over-hyundai-i10-on-mumbai-pune-expressway-3-dead-2478250?pfrom=home-ndtv_topscroll

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights