ಪೆಟ್ಟು ತಿಂದ ಜಿರಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದ ಸಹೃದಯಿ; ವೈದ್ಯರ ಪ್ರಶಂಸೆ

ಜಿರಳೆ ಕಂಡರೆ ಹೆದರುವುದು, ಹೊಡೆದು ಸಾಯಿಸುವುದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಗಾಯಗೊಂಡಿದ್ದ ಜಿರಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿರುವ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ.

ಏಟುತಿಂದು ರಸ್ತೆಯ ಮೇಲೆ ಬಿದ್ದಿದ್ದ ಜಿರಳೆಯನ್ನು ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ತಮ್ಮ ಬಳಿಗೆ ಕರೆದು ತಂದಿದ್ದರು ಎಂದು ಥಾಯಿಯ ಸಮುತ್​ ಸಖೋನ್​ ಅನಿಮಲ್​ ಹಾಸ್ಪಿಟಲ್​ನ ಡಾ. ತನು ಲಂಪಾಪಟ್ಟನವನಿಚ್​ ಎಂಬ ಪಶುವೈದ್ಯ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಿನ್ನೆ ರಾತ್ರಿ ಯಾರೋ ರಸ್ತೆಯ ಬದಿಯಲ್ಲಿದ್ದ ಜಿರಳೆಯನ್ನು ತುಳಿದುಬಿಟ್ಟಿದ್ದರು. ಅದರ ಸ್ಥಿತಿಯನ್ನು ನೋಡಿ ಅನುಕಂಪ ಮೂಡಿದ ಸಜ್ಜನರೊಬ್ಬರು ಅದನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರು. ಈಗ ಅದರ ಒದ್ದಾಟ ಅರ್ಧದಷ್ಟು ಕಡಿಮೆಯಾಗಿದೆ’ ಎಂದು ಡಾ. ತನು ಥಾಯಿ ಭಾಷೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಜೊತೆಗೆ, ‘ಇದು ತಮಾಷೆಯಲ್ಲ. ಇದು ಪ್ರತಿಯೊಂದು ಜೀವಿಯ ಬಗ್ಗೆಯೂ ಅಂತಃಕರಣ ಹೊಂದಿರಬೇಕೆಂಬುದಕ್ಕೆ ಉದಾಹರಣೆ. ಇಂತಹ ಜನರು ಜಗತ್ತಿನಲ್ಲಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನ; ಬಾಸ್‌ನ ಮರ್ಮಾಂಗ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights