FACT CHECK | ಸೇಬಿನ ಹಣ್ಣಿಗೆ ಕೆಂಪು ಬಣ್ಣ ಹಚ್ಚುತ್ತಿರುವ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

‘ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ’ ಎಂಬ ಇಂಗ್ಲೀಷ್​​​ ಗಾದೆ ಮಾತನ್ನು ನಾವು-ನೀವೆಲ್ಲಾ ಕೇಳಿದ್ದೇವೆ. ಆದರೆ ಈ ವಿಡಿಯೋ ನೋಡಿದರೆ ಸೇಬು ತಿನ್ನುವುದಿರಲಿ ಸೇಬನ್ನು ಕೊಂಡುಕೊಳ್ಳಲು ಹೋಗುವುದಿಲ್ಲ. ಇನ್ನು ಹಣ್ಣಾಗಿರದ ಸೇಬಿಗೆ ಕೆಂಪು ಬಣ್ಣ ಬಳಿದು ಮಾರಾಟ ಮಾಡಿ ಲಾಭಗಳಿಸಲು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು  ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ, ಮನೀಶ್ ದತ್ ತಿವಾರಿ ಎಂಬ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು “ಇದು ಮಾರುಕಟ್ಟೆಯ ಪರಿಸ್ಥಿತಿ, ಯಾರನ್ನೂ ನಂಬಲು ಸಾಧ್ಯವಿಲ್ಲ ನೀವು ಮಾರುಕಟ್ಟೆಯಿಂದ ಹಣ್ಣುಗಳನ್ನು ಖರೀದಿಸುತ್ತಿದ್ದರೆ ಅವುಗಳನ್ನು ಎಚ್ಚರಿಕೆಯಿಂದ ನೋಡಿ ನಂತರ ಖರೀದಿಸಿ. ಬಿಳಿ ಹೇಗೆ ಕೆಂಪು ಬಣ್ಣಕ್ಕೆ ತಿರುಗುತ್ತಿದೆ ನೋಡಿ” ಎಂಬ ಹೇಳಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

X ನ ಮತ್ತೊಬ್ಬ ಬಳಕೆದಾರರು ಿದೇ ವಿಡಿಯೋವನ್ನು “ಸುಂದರವಾದ ಸೇಬುಗಳನ್ನು ಹೇಗೆ ಸಿದ್ದಪಡಿಸುತ್ತಿದ್ದಾರೆ ನೋಡಿ. ಆರೋಗ್ಯಕ್ಕೆ ಹಾನಿ ಉಂಟು ಮಾಡುವ ರಾಸಾಯಾನಿಕ ಬಣ್ಣಗಳನ್ನು ಲೇಪಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದನ್ನು ಕೊಂಡು ತಿಂದು ಆಸ್ಪತ್ರೆಗಳಿಗೆ ಬಿಲ್ಲು ಪಾವತಿಸಿ, ವೈದ್ಯರಿಗೆ ಸಹಾಯ ಮಾಡಿ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೇಬಿನಂತೆ ಕಾಣುವ ವಸ್ತುವಿಗೆ ಕೆಂಪು ಬಣ್ಣವನ್ನು ಲೇಪನ ಮಾಡುವುದನ್ನು ಕಾಣಬಹುದಾಗಿದೆ. ಸೇಬುಗಳಿಗೆ ಬಣ್ಣ ಹಚ್ಚಿದ ತಕ್ಷಣ, ಅದು ಸಂಪೂರ್ಣವಾಗಿ ತಾಜಾ ಮತ್ತು ಆರೋಗ್ಯಕರವಾಗಿ ಕಾಣುತ್ತದೆ. ಮಾರುಕಟ್ಟೆಯಲ್ಲಿ ಇದನ್ನು ನೋಡಿದಾಗ, ಇದು ಉತ್ತಮ ಗುಣಮಟ್ಟದ ಸೇಬು ಎಂದು ಯಾರಾದರೂ ಭಾವಿಸುತ್ತಾರೆ, ಇದು ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಈ ವಿಡಿಯೋ ಭಾರತದದ್ದು ಎಂದು ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬ್ಯುಸಿನೆಸ್ ಟುಡೇ ಮತ್ತು ಟಿವಿ9 ಭಾರತ್‌ವಾರ್ಷ್‌ನಿಂದ ಎಂಬ ಮಾಧ್ಯಮದಲ್ಲಿ  ಅಪ್‌ಲೋಡ್ ಮಾಡಿದ ಕೆಲವು ವೆಬ್ ಸ್ಟೋರಿಗಳು ವೈರಲ್ ವೀಡಿಯೊದಿಂದ ಸ್ಕ್ರೀನ್ ಗ್ರ್ಯಾಬ್ ಅನ್ನು ಒಳಗೊಂಡಿರುವುದು ಮತ್ತು ಚೈನೀಸ್ ಭಾಷೆಯಾಗಿರಬಹುದು ಎಂದು ತಿಳಿಸುವ ಇದೇ ರೀತಿಯ ಸಂಗತಿಗಳನ್ನು ಉಲ್ಲೇಖಿಸುವ ವರದಿಗಳು ಲಭ್ಯವಾಗಿವೆ.

ವೀಡಿಯೊದಲ್ಲಿ ತೋರಿಸಿರುವ ಗೋಣಿಚೀಲಗಳ ಮೇಲೆ ಚೀನಾ ಭಾಷೆಯಲ್ಲಿ ಬರೆದಿರುವುದನ್ನು ನೋಡಬಹುದಾಗಿದೆ. ವಿಡಿಯೋವನ್ನು ಸೂಕ್ಷ್ಮಮವಾಗಿ ಪರಿಶೀಲಿಸಿದಾಗ ಚೀಲಗಳ ಮೇಲೆ ಚೈನೀಸ್ ಭಾಷೆಯಲ್ಲಿ ಬರೆದಿರುವುದನ್ನು ಕಾಣಬಹುದು.

ಫೇಸ್‌ಬುಕ್ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಾ ದ ವಿಡಿಯೋಗಳ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳು ಭಾರತಕ್ಕೆ ಸಂಬಂಧಿಸಿದ್ದಲ್ಲ. ವಿಡಿಯೋಗಳು ಚೈನಾ ದೇಶಕ್ಕೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇದು ಚೀನಾದ ಹಳೆಯ ವಿಡಿಯೋ ಮತ್ತು ನಕಲಿ ಆಪಲ್ ಕ್ಯಾಂಡಿ ತಯಾರಿಸುವ ವಿಡಿಯೋವಾಗಿದೆ. ಈ ವೈರಲ್ ವಿಡಿಯೋವನ್ನು ಹಂಚಿಕೊಂಡು ನಿಜವಾದ ಸೇಬಿಗೆ ಬಣ್ಣ ಸಿಂಪಡಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಆದರೆ ಈ ವಿಡಿಯೋ ನಕಲಿಯೋ, ಅಸಲಿಯೋ ಭಾರತ ಅಥವಾ ಚೈನಾ ದೇಶಕ್ಕೆ ಸಂಬಂಧಿಸಿದೆಯೋ ಎಂಬುಕ್ಕಿಂತ ಇಂತಹ ಆಹಾರ ಸೇವನೆ ಮಾಡಿದ ಜನರ ಆರೋಗ್ಯದ ಗತಿ ಏನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಇದೊಂದು ನಕಲಿ ವಿಡಿಯೋ ಎಂದು ಸಮಾದಾನ ಪಟ್ಟುಕೊಳ್ಳುವುದಕ್ಕಿಂತ ಇಂತಹ ಪರಿಸ್ಥಿತಿ ನಿರ್ಮಾಣಾ ಆಗದಂತೆ ಎಚ್ಚರವಹಿಸಬೇಕಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತದೆ ಎಂಬುದು ಸುಳ್ಳು


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights