FACT CHECK | ಹೋಳಿ ಆಚರಣೆಯ ಹಳೆಯ ವಿಡಿಯೋವನ್ನು ಹಾಥರಸ್‌ನ ಕಾಲ್ತುಳಿತ ಪ್ರಕರಣ ಎಂದು ತಪ್ಪಾಗಿ ಹಂಚಿಕೆ

ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಡಿಯೊ ತುಣುಕುಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿನ ಹಂಚಿಕೊಳ್ಳುತ್ತಿದ್ದಾರೆ. ಭಾರಿ ಸಂಖ್ಯೆಯಲ್ಲಿ ಸೇರಿರುವ ಜನರು ಒತ್ತೊತ್ತಾಗಿ ನಿಂತುಕೊಂಡು ಪರಸ್ಪರ ತಳ್ಳಿಕೊಂಡು ಮುಂದಕ್ಕೆ ಹೋಗುತ್ತಿರುವ ವಿಡಿಯೊ ದೃಶ್ಯಾವಳಿಗಳನ್ನು ಹಂಚಿಕೊಂಡು, ಹಾಥರಸ್‌ನಲ್ಲಿ ನಡೆದ ಘಟನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜುಲೈ 2ರಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದರು.

 

View this post on Instagram

 

A post shared by Papawan Dhankhar (@paparazzio7)

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು, “ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕನಿಷ್ಠ 116 ಜನರು, ಹೆಚ್ಚಾಗಿ ಮಹಿಳೆಯರು, ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ”  ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಆದರೆ ವೈರಲ್ ವಿಡಿಯೋದ ದೃಶ್ಯಗಳು ಹತ್ರಾಸ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಕ್ಕಿಂತ ಭಿನ್ನವಾಗಿರುವಂತೆ ಕಾಣುತ್ತಿದ್ದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಎನ್‌ಡಿಟಿವಿ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾರ್ಚ್‌ 17ರಂದು ಅಪ್‌ಲೋಡ್‌ ಮಾಡಿದ ವಿಡಿಯೊ ಲಭ್ಯವಾಯಿತು.

NDTV ಯ ವರದಿಯ ಪ್ರಕಾರ, ಈ ವಿಡಿಯೋ ಮಥುರಾದಲ್ಲಿ ಹೋಳಿಗೂ ಮುನ್ನ ನಡೆದಿದ್ದ ಸಮಾರಂಭದಲ್ಲಿ ನಡೆದ ಕಾಲ್ತುಳಿತದ ಪ್ರಕರಣದ ವಿಡಿಯೊವಾಗಿದೆ. ಹಾಗಾಗಿ, ಹಾಥರಸ್‌ನಲ್ಲಿ ನಡೆದಿರುವುದು ಎಂದು ಹೇಳಿಕೊಂಡ ವಿಡಿಯೊ ತುಣುಕುಗಳು ಅಲ್ಲಿಯದ್ದಲ್ಲ. ಮಥುರಾದಲ್ಲಿ ನಡೆದಿದ್ದ ಕಾಲ್ತುಳಿತದ್ದು ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಲಡ್ಡೂಮಾರ್ ಹೋಳಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಭಾರಿ ಜನಜಂಗುಳಿಯಿಂದಾಗಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಕನಿಷ್ಠ ಆರು ಮಂದಿ ಪ್ರಜ್ಞೆ ಕಳೆದುಕೊಂಡು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿದ್ದ ವೈದ್ಯರು ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಇದಲ್ಲದೆ, ಪರಿಸ್ಥಿತಿಯನ್ನು ಸುಧಾರಿಸಲು, ಪೊಲೀಸರ ತುಕಡಿಯನ್ನು ದೇವಾಲಯಕ್ಕೆ ಕಳುಹಿಸಲಾಯಿತು.

ಆ ಸಮಯದಲ್ಲಿ, ಅದೇ ವೀಡಿಯೋವನ್ನು ಇತರ ಮಾಧ್ಯಮಗಳು ಸಹ ಹಂಚಿಕೊಂಡಿದ್ದರೆ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಗಾಯಗೊಂಡ ಭಕ್ತರ ವಿಡಿಯೋವನ್ನು ಹಂಚಿಕೊಂಡಿತು. ಮಥುರಾ ಎಸ್‌ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ ಅವರು ಮಾಧ್ಯಮಗಳೀಗೆ ಹೇಳಿಕೆ ನೀಡಿ ಲಡ್ಡೂಮಾರ್ ಹೋಳಿ ಆಚರಣೆಯ ಸಮಯದಲ್ಲಿ ಜನದಟ್ಟಣೆಯನ್ನು ಉಂಟಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ, ಆದರೆ ಕಾಲ್ತುಳಿತದ ವದಂತಿಗಳನ್ನು ನಿರಾಕರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹತ್ರಾಸ್ ಕಾಲ್ತುಳಿತ ಎಂದು ಮಥುರಾದ ಹೋಳಿ ಆಚರಣೆಯ ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights