ಸಿಎಎ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿ: ಭಾರತಕ್ಕೆ ವಿಶ್ವಸಂಸ್ಥೆ ಆಗ್ರಹ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟಿನೆ ನಡೆಸಿದ್ದಕ್ಕಾಗಿ ಬಂಧಿಸಲಾಗಿರುವ ಸಾಮಾಜಿಕ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಭಾರತ ಸರ್ಕಾರವನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.

“ಸಿಎಎಯ ತಾರತಮ್ಯ ಸ್ವರೂಪವನ್ನು ಟೀಕಿಸಿರುವ ಭಾಷಣಗಳ ಕ್ಷುಲ್ಲಕ ಆಧಾರದ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿರುವ, ವಿಚಾರಣಾ ಪೂರ್ವ ಬಂಧನದಲ್ಲಿರುವ ಎಲ್ಲಾ ಮಾನವ ಹಕ್ಕು ಹೋರಾಟಗಾರರನ್ನು ಬಿಡುಗಡೆ ಮಾಡಬೇಕು” ಎಂದು ವಿಶ್ವಸಂಸ್ಥೆಯ ತಜ್ಷರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಈ ಹೇಳಿಕೆಯಲ್ಲಿ ಮೀರನ್ ಹೈದರ್, ಗುಲ್ಫಿಶಾ ಫಾತಿಮಾ, ಸಫೂರಾ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ, ದೇವಂಗಾನಾ ಕಲಿತಾ, ನತಾಶಾ ನರ್ವಾಲ್, ಖಾಲಿದ್ ಸೈಫಿ, ಶಿಫಾ ಉರ್ ರೆಹಮಾನ್, ಡಾ. ಕಫೀಲ್‌ ಖಾನ್, ಸರ್ಜಿಲ್‌ ಇಮಾಮ್ ಮತ್ತು ಅಖಿಲ್ ಗೊಗೋಯ್‌ ಅವರ 11 ಹೆಸರನ್ನು ಮೆನ್ಶನ್‌ ಮಾಡಿದೆ.

“ಈ ಪ್ರತಿಭಟನಾಕಾರರಲ್ಲಿ ಅನೇಕರು ವಿದ್ಯರ್ಥಿಗಳಾಗಿದ್ದಾರೆ. ಸಿಎಎ ತಾರತಮ್ಯವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಇದು ಸರ್ಕಾರವು ತನ್ನ ವಿರುದ್ಧ ಪ್ರಶ್ನೆ ಮಾಡುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಿದೆ. ಪ್ರಶ್ನೆಗಳನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ” ಎಂದು ವಿಶ್ವಸಂಸ್ಥೆ ಅಭಿಪ್ರಾಯ ಪಟ್ಟಿದೆ.

ಯುಎನ್ ಪ್ರಸ್ತಾಪಿಸಿದ 11 ವ್ಯಕ್ತಿಗಳಲ್ಲಿ, ಗೊಗೊಯ್, ಇಮಾಮ್, ರೆಹಮಾನ್, ಕಲಿತಾ, ನಾರ್ವಾಲ್, ತನ್ಹಾ, ಫಾತಿಮಾ ಮತ್ತು ಹೈದರ್ ವಿರುದ್ಧ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಿಸಿದ್ದಾರೆ.

ಸಿಎಎ ವಿರೋಧಿ ಮತ್ತು ಬೆಂಬಲಿತ ಪ್ರತಿಭಟನೆಗಳಲ್ಲಿ ಸರ್ಕಾರ ಪ್ರತಿಕ್ರಿಯೆ ತಾರತಮ್ಮ ವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಸಿಎಎ ಬೆಂಬಲಿಗರು ಮಾಡಿದ ದ್ವೇಷ ಮತ್ತು ಹಿಂಸಾಚಾರದ ಆರೋಪಗಳನ್ನು ಅಧಿಕಾರಿಗಳು ತನಿಖೆ ಮಾಡಿಲ್ಲ. ಅವರಲ್ಲಿ ಕೆಲವರು ಪ್ರತಿಭಟನಾ ರ್ಯಾಲಿಗಳಲ್ಲಿ “ದೇಶದ್ರೋಹಿಗಳಿಗೆ ಗುಂಡು ಹಾರಿಸಿ” ಎಂದು ಬಹಿರಂಗವಾಗಿ ಘೋಷಣೆ ಕೂಡಿಗಿದ್ದಾರೆ. ಎಂದು ಆರೋಪಿಸಿದೆ.

“ಭಾರತೀಯ ಕಾರಾಗೃಹಗಳಲ್ಲಿ ವೈರಸ್ ಹರಡಿದೆ ಎಂದು ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕು ಹೋರಾಟಗಾರರನ್ನು ತುರ್ತಾಗಿ ಬಿಡುಗಡೆಗೊಳಿಬೇಕು ಎಂದು ವಿಶ್ವಸಂಸ್ಥೆ ತಜ್ಷರ ತಂಡ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights