2015ರಿಂದ ಪ್ರಧಾನಿ ಮೋದಿ ಸುತ್ತಿದ ದೇಶಗಳು ಎಷ್ಟು? ಖರ್ಚಾದ ಹಣ ಎಷ್ಟು?: ಡೀಟೇಲ್ಸ್‌

ನರೇಂದ್ರ ಮೋದಿಯವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗಿನಿಂದ ಕೊರೊನಾ ವೈರಸ್‌ ಬಿಕ್ಕಟ್ಟು ಎದುರಾಗುವವರೆಗೂ ಪ್ರಧಾನಿ ಮೋದಿಯವರು 58 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಕೇಂದ್ರ ಸರ್ಕಾರದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಕಳೆದ ಆರು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ಸಂಖ್ಯೆ ಮತ್ತು ಅದಕ್ಕೆ ಖರ್ಚಾಗಿರುವ ಹಣ ಎಷ್ಟು? ಎಂದು ಪ್ರಶ್ನೆ ಮಾಡಿದ್ದು, ಸರ್ಕಾರ ನೀಡಿರುವ ಉತ್ತರದಲ್ಲಿ ಮಾಹಿತಿ ನೀಡಿದೆ.

“2015 ರಿಂದ ಪ್ರಧಾನಿ ನರೇಂದ್ರ ಮೋದಿ 58 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಗಳಿಗಾಗಿ ಸರ್ಕಾರ 517.82 ಕೋಟಿ ರೂ. ಖರ್ಚು ಮಾಡಿದೆ” ಎಂದು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ.

ಕೊರೊನಾ ಸೋಂಕಿನ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಆದರೆ, ಈ ಹಿಂದೆ ದೇಶದಲ್ಲಿ ಪ್ರವಾಹ ಹಾಗೂ ಕ್ಷಾಮದ ಪರಿಸ್ಥಿತಿ ಇದ್ದಾಗಲೂ ಸಹ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದ ವಿಚಾರ ಅನೇಕ ಭಾರಿ ಟೀಕೆಗೆ ಗುರಿಯಾಗಿತ್ತು.


ಇದನ್ನೂ ಓದಿ: ಮೋದಿ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ನಾಶಮಾಡಿದ್ದಾರೆ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights