ಹೆಚ್ಚುತ್ತಿರುವ ಕೊರೊನಾ ಕೇಸ್: ಸೌದಿ ಅರೇಬಿಯಾ, ಬ್ರೆಜಿಲ್ ಮತ್ತು ಅರ್ಜೆಂಟೀನಾ ಪ್ರವಾಸ ಬಂದ್!
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೌದಿ ಅರೇಬಿಯಾ, ಬ್ರೆಜಿಲ್ ಮತ್ತು ಅರ್ಜೆಂಟೀನಾ ಪ್ರವಾಸವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 83,347 ಹೊಸ ಪ್ರಕರಣಗಳು ಮತ್ತು 1,085 ಸಾವುಗಳ ಹೆಚ್ಚಳದೊಂದಿಗೆ ಭಾರತ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 56 ಲಕ್ಷ ಗಡಿ ದಾಟಿದೆ.
ದೇಶದಲ್ಲಿ ಒಟ್ಟು ಪ್ರಕರಣಗಳು 5,646,011 ಆಗಿದ್ದು, ಇದರಲ್ಲಿ 9,68,377 ಸಕ್ರಿಯ ಪ್ರಕರಣಗಳು, 45,87,614 ಗುಣಮುಖರಾಗಿದ್ದು, 90,020 ಸಾವುಗಳು ಸೇರಿವೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ನವೀಕರಣ ತಿಳಿಸಿದೆ.
ಇದರ ಜೊತೆಗೆ ಸತತ ಐದು ದಿನಗಳವರೆಗೆ ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಪ್ರಕರಣಗಳನ್ನು ವರದಿ ಮಾಡಿದ ಭಾರತ ನಿನ್ನೆ ಮೊದಲ ಬಾರಿಗೆ ಒಂದು ಲಕ್ಷ ಚೇತರಿಕೆಗಳನ್ನು ದಾಖಲಿಸಿದೆ.
ದಿನಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಭಾರತದಿಂದ ಸೌದಿ ಅರೇಬಿಯಾ, ಬ್ರೆಜಿಲ್ ಮತ್ತು ಅರ್ಜೆಂಟೀನಾ ಪ್ರವಾಸವನ್ನು ಸ್ಥಗಿತಗೊಳಿಸಿದೆ.