ಕನ್ನಡದ ಪವರ್‌ಗೆ ತಲೆ ಬಾಗಿದ ಆರ್‍ಸಿಬಿ ತಂಡ : ಥೀಮ್ ಹಾಡಿನಲ್ಲಿ ಕನ್ನಡ ಪದಗಳ ಬಳಕೆ!

ಕನ್ನಡದ ಪವರ್‌ಗೆ ತಲೆ ಬಾಗಿರುವ ಆರ್‍ಸಿಬಿ ತಂಡವು ತನ್ನ ಥೀಮ್ ಹಾಡಿನಲ್ಲಿ ಹೆಚ್ಚು ಕನ್ನಡ ಪದಗಳನ್ನು ಸೇರಿಸಿ ಎರಡನೇ ಬಾರಿಗೆ ಬಿಡುಗಡೆ ಮಾಡಿದೆ.

ತಂಡ ರಚನೆಯಲ್ಲಿ ಕನ್ನಡಿಗರಿಗೆ ಮಣೆ ಹಾಕದೇ ಅಭಿಮಾನಿಗಳಿಗೆ ಕೋಪಕ್ಕೆ ತುತ್ತಾಗಿರುವ, ಹೆಸರಿಗಷ್ಟೇ ಬೆಂಗಳೂರು ಎಂದಿರುವ ಆರಸ್‌ಇಬಿ ಥೀಮ್ ಹಾಡಿನಲ್ಲಿ ಸಹ ಇಂಗ್ಲಿಷ್ ಹಾಗೂ ಹಿಂದಿ ಪದಗಳ ಸಂಯೋಜಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಕನ್ನಡಿಗರ ಆಕ್ರೋಶಕ್ಕೆ ಹೆದರಿ, ಬೆದರಿದ ಆರ್‍ಸಿಬಿ ತಂಡದ ವ್ಯವಸ್ಥಾಪಕರು ಕನ್ನಡದ ಹೆಚ್ಚು ಪದಗಳನ್ನು ಸೇರಿಸಿ ಈಗ ಅದೇ ಹಾಡನ್ನು ಹೆಚ್ಚು ಕನ್ನಡಮಯವಾಗಿಸಿ ಬಿಡುಗಡೆ ಮಾಡಿದ್ದಾರೆ.

ಏನೇ ಬರಲಿ ಎಂತೇ ಇರಲಿ ಎಂಬ ಧ್ಯೇಯ ವಾಕ್ಯದೊಡನೆ ಈ ಹಾಡನ್ನು ಅಧಿಕೃತ ಚಾನೆಲ್ಲಿನಲ್ಲಿ ತೇಲಿಬಿಡಲಾಗಿದೆ.

ಸುಮಾರು ಎರಡು ನಿಮಿಷ ಕೇಳಸು ಸಮಯದ ಹಾಡಿನಲ್ಲಿ ಆರ್‍ಸಿಬಿ ತಂಡದ ಆಟಗಾರರ ಅಭ್ಯಾಸದ ದೃಶಾವಳಿಗಳು, ಅಭಿಮಾನಿಗಳ ಸಮಬ್ರಮದ ಪರಿ ವರ್ಣಿಸುವ ಕ್ಷಣಗಳನ್ನು ತೋರಿಸಲಾಗಿದೆ.

ಚೆನ್ನಾಗಿದೆ. ಆದರೆ ಹಿಂದಿ ಬದಲು ಕನ್ನಡ ಬಳಸಿದ್ರೆ ಇನ್ನೂ ಚೆನ್ನಾಗಿರೋದು ಎಂದು ಮಾಜಿ ಆಟಗಾರ ದೊಡ್ಡ ಗಣೇಶ್ ಈ ಹಾಡನ್ನು ವ್ಯಾಖ್ಯಾನಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights