ಕೊಳವೆ ಬಾವಿಗೆ ಬಿದ್ದ ಮಗು; 20 ಗಂಟೆಗಳ ಕಾರ್ಯಚರಣೆಯಿಂದ ರಕ್ಷಣೆ!

ರಾಜಸ್ಥಾನದ ಜಲೋರ್ ಜಿಲ್ಲೆಯ ಲಾಚ್ಡಿ ಗ್ರಾಮದಲ್ಲಿ  ಕೊಳವೆ ಬಾವಿಯಲ್ಲಿ ಬಿದ್ದದ್ದ ಮಗುವನ್ನು ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ತೆರೆದ ಕೊಳವೆ ಬಾವಿ​ಗೆ ಬಿದ್ದ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.

ಗುರುವಾರ ಬೆಳಗ್ಗೆ ನಾಲ್ಕು ವರ್ಷದ ಬಾಲಕ ಅಜಯ್ ಎಂಬಾತ ತನ್ನ ತಂದೆಯ ಕೃಷಿ ಭೂಮಿಯಲ್ಲಿ ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಸ್ಥಳೀಯ ಆಡಳಿತ, ಪೊಲೀಸ್ ಉನ್ನತ ಅಧಿಕಾರಿಗಳು, ಎನ್‌ಡಿಆರ್‌ಎಫ್ ತಂಡಗಳು ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದರು.

ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು.ಬೋರ್​ವೆಲ್​ಗೆ ಬಿದ್ದ ಮಗುವಿನ ಚಲನವಲನ ಪತ್ತೆಹಚ್ಚಲು ಕ್ಯಾಮೆರಾವನ್ನು ಒಳಬಿಡಲಾಗಿದ್ದು, ಹಗ್ಗದ ಮೂಲಕ ನೀರಿನ ಬಾಟಲಿಯನ್ನು ಸಹ ಕಳುಹಿಸಲಾಗಿತ್ತು. ಮಗುವಿನ ಉಸಿರಾಟಕ್ಕೆ ತೊಂದರೆಯಾಗದಂತೆ ಆಕ್ಸಿಜನ್​ ಪೈಪ್​ ಸಹ ಒದಗಿಸಲಾಗಿತ್ತು.

ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜನತೆಯ ತುರ್ತು ಆಗ್ರಹ ಪತ್ರ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights