ಡಯೂರೈಂಗ್ ನಗರದಿಂದ ಟೇಕ್ ಆಫ್ ಆಗಿದ್ದ ಲಘು ವಿಮಾನ ಪತನ : ಐವರು ಪ್ರಯಾಣಿಕರು ಸಾವು..!

ಪಶ್ಚಿಮ ಮೆಕ್ಸಿಕೋ ಸಿಟಿಯಲ್ಲಿ ಲಘು ವಿಮಾನ ಪತನಗೊಂಡಿದ್ದು, ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಬುಧವಾರ ಮಧ್ಯಾಹ್ನ ಈ ಅವಘಢ ಸಂಭವಿಸಿದ್ದು, ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ಆರಂಭಗೊಂಡಿದೆ. ಮೆಕ್ಸಿಕೊ ನಗರದ 460 ಕಿ.ಮೀ. ದೂರದ ಮಡೆರಾ ಪಟ್ಟಣದ ಲಾಂಸ್ ಜುಂಟಾಸ್ ಎಂಬಲ್ಲಿ ವಿಮಾನ ಪತನಗೊಂಡಿದೆ ಎಂದು ಮಿಶೋಕನ್ ರಾಜ್ಯ ಪ್ರಾಸಿಕ್ಯೂಟರಿ ಕಾರ್ಯಾಲಯ ತಿಳಿಸಿದೆ.

ಮೃತರ ಗುರುತು ಪತ್ತೆಯಾಗಿಲ್ಲ. ಡಯೂರೈಂಗ್ ನಗರದಿಂದ ವಿಮಾನ ಟೇಕ್ ಆಫ್ ಆಗಿತ್ತು. ಲಾಂಸ್ ಜುಂಟಾಸ್ ಬಳಿಯ ನದಿಯಲ್ಲಿ ವಿಮಾನ ಪತನಗೊಂಡಿದ್ದು, ಪ್ಲೇನ್ ನಲ್ಲಿ ಒಟ್ಟು ಆರು ಜನರು ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights