ನಾಳೆಯಿಂದ ಕರುನಾಡಿನಲ್ಲಿ ಹೊಸ ಜಗತ್ತು ಆರಂಭ : ಸಹಜ ಜೀವನದತ್ತ ಜನರ ತಯಾರಿ..!

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಧಿಸಿದ್ದ ನಿರ್ಬಂಧಗಳು ನಾಳೆಯಿಂದ ತೆರವಾಗಲಿದೆ. ಕೊರೊನಾದಿಂದಾಗಿ ಮುಚ್ಚಲ್ಪಟ್ಟಿದ್ದ ಮಾಲ್ ಗಳು, ಕಂಪನಿಗಳು, ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಕೊರೊನಾ ನಿಯಮ ಪಾಲಿಸಿ ಬಹುತೇಕ ಕ್ಷೇತ್ರಗಳು ನಾಳೆಯಿಂದ ತೆರೆಲಿವೆ.

ಇದರಿಂದಾಗಿ ನಾಳೆಯಿಂದ ಕರುನಾಡಿನಲ್ಲಿ ಹೊಸ ಜಗತ್ತು ಆರಂಭವಾಗಲಿದೆ. ಸುಮಾರು ಮೂರು ತಿಂಗಳಿನಿಂದ ಬಂದ್ ಮಾಡಲಾಗಿದ್ದ ಧಾರ್ಮಿಕ ಕ್ಷೇತ್ರಗಳಿಗೆ ನಾಳೆಯಿಂದ ಭಕ್ತರು ಭೇಟಿ ನೀಡಲು ಅವಕಾಶ ಇದೆ. ಆದರೆ ಪ್ರಸಾದ, ತೀರ್ಥ ನೀಡಲು ಅವಕಾಶ ನೀಡಲಾಗಿಲ್ಲ. ಹೀಗಾಗಿ ನಾಳೆಯಿಂದ ದೇವಸ್ಥಾನ ತೆರೆಯಲು ಸಕಲ ಸಿದ್ದತೆ ನಡೆದಿದೆ. ಅನ್ ಲಾಕ್ ನಿಂದಾಗಿ ಹೊಸ ಮಾರ್ಗ ಸೂಚಿಯಲ್ಲಿ ಬಹುತೇಕ ಕ್ಷೇತ್ರಗಳಿಗೆ ರಿಲೀಫ್ ಸಿಕ್ಕಿದೆ.

ಸಹಜವಾಗಿ ಲಾಕ್ ಡೌನ್ ನಲ್ಲಿ ಸೈಕಲಿಂಗ್, ಫಿಟ್ ನೆಸ್ ಹೀಗೆ ಬಹುತೇಕ ಕ್ಷೇತ್ರಗಳಿಗೆ ಅವಕಾಶ ಇರಲಿಲ್ಲ. ಆದರೆ ನಾಳೆಯಿಂದ ಇವೆಲ್ಲದಕ್ಕೂ ಅನುಮತಿ ನೀಡಲಾಗಿದೆ. ಹೀಗಾಗಿ ಸೈಕಲ್ ಸವಾರರು ಇಂದು ಬೆಳ್ಳಬೆಳಿಗ್ಗೆ ಸಿಲಿಕಾನ್ ಸಿಟಿಯಲ್ಲಿ ಸೈಕಲ್ ಸವಾರಿ ಮಾಡುತ್ತಿರುವುದು ಕಂಡು ಬಂತು. ಜೊತೆಗೆ ಸ್ವಿಮ್ಮಿಂಗ್ ಪೂಲ್ ಗಳ ಸ್ವಚ್ಚತಾ ಕಾರ್ಯ ಕೂಡ ನಡೆದಿದೆ.

ಮೆಟ್ರೋ, ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಗಳು, ಖಾಸಗಿ ಬಸ್ ಗಳು ನಾಳೆ ಸಹಜ ಸ್ಥಿತಿಯಲ್ಲಿ ಸಂಚಾರ ಮಾಡಲಿವೆ. ಜೊತೆಗೆ ಸ್ಪೋರ್ಟ್ ಕ್ಲಬ್ ಗಳು ಓಪನ್ ಆಗಲಿವೆ. ಬಾರ್ ಗಳು ಕೂಡ ತೆರೆಯಲಿವೆ. ಮಾಲ್ ಗಳಲ್ಲಿ ಥಿಯೇಟರ್ ಹೊರತುಪಡಿಸಿ ಬೆರೆಲ್ಲಾ ಶಾಪ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಿದೆ. ಬಾರ್, ಹೊಟೆಲ್ ಗಳಲ್ಲಿ ರಾತ್ರಿ 9 ಗಂಟೆಯವರೆಗೂ ಕುಳಿತು ಕುಡಿಯಲು ತಿನ್ನಲು ಅವಕಾಶ ನೀಡಲಾಗಿದೆ.

ಇನ್ನೂ ಕಂಪನಿಗಳಲ್ಲಿ ಶೇ.100 ರಷ್ಟು ಕೆಲಸಗಾರರು ಕೆಲಸ ಮಾಡಲು ಅವಕಾಶ ನೀಡಿದೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದ್ದು ಪೂರ್ಣ ಪ್ರಮಾಣದ ಪೂರ್ಣ ಪ್ರಮಾಣದ ಬಿಗ್ ರಿಲೀಫ್ ಸಿಕ್ಕಿದೆ. ಇದಕ್ಕೆ ಬೇಕಾದ ತಯಾರಿಯಲ್ಲಾ ಇಂದೆ ನಡೆಯುತ್ತಿದೆ.

ರಾಜ್ಯದಲ್ಲಿ ಶೈಕ್ಷೇಣಿಕ ಸಂಸ್ಥೆಗಳು, ಥಿಯೇಟರ್, ಪಬ್ ಗಳಗೆ ಮಾತ್ರ ಇನ್ನೂ ತೆರೆಯಲು ಅವಕಾಶ ಸಿಕ್ಕಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights