ಕಾರವಾರದಲ್ಲಿ ಸಮುದ್ರಕ್ಕಿಳಿದು ಮೀನುಗಾರರ ಪ್ರತಿಭಟನೆ : ಇಬ್ಬರು ಅಸ್ವಸ್ಥ….!

ಕಾರವಾರ ವಾಣಿಜ್ಯ ಬಂದರು‌ ವಿಸ್ತರಣೆಗೆ ಕಾಮಗಾರಿ ಪ್ರಾರಂಭಕ್ಕೆ ವಿರೋಧಿಸಿದ ಮೀನುಗಾರರ ಪೈಕಿ ಇಬ್ಬರು ನೀರಿಗಿಳಿದು ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ಆಕ್ರೋಶ ತಾರಕ್ಕಕ್ಕೇರಿದ್ದು ಪೋಲಿಸ್ ಮತ್ತು ಮೀನುಗಾರರ ಜಟಾಪಟಿ ಜೋರಾಯ್ತು.

ಕಳೆದ ಒಂದು ತಿಂಗಳ‌ ಹಿಂದೆಯೇ ಕಾರವಾರ ವಾಣಿಜ್ಯ ಬಂದರಿನ ವಿಸ್ತರಣೆಯ ಕಾಮಗಾರಿ ಆರಂಭವಾಗಬೇಕಿತ್ತು. ಆದ್ರೆ ಇಲ್ಲಿನ ಮೀನುಗಾರರು ಕಾಮಗಾರಿ ಪ್ರಾರಂಭಕ್ಕೆ ಸಾಕಷ್ಟು ವಿರೋಧ ಮಾಡಿ ಹತ್ತಯ ಹಲವು ಪ್ರತಿಭಟನೆ ನಡೆಸಿ ಕಾಮಗಾರಿ ಆರಂಭಕ್ಕೆ ತಡೆಯೊಡ್ಡಿದ್ದರು. ಈ ಹಿನ್ನಲೆಯಲ್ಲಿ ವಿಳಂಬವಾಗಿ ಇವತ್ತು ಖಾಕಿ ಸರ್ಪಗವಾಲಿನಲ್ಲಿ ಕಾಮಗಾರಿ ಆರಂಭ ಮಾಡಲಾಗಿತ್ತು. ಮೀನುಗಾರರ ಸಾಕಷ್ಟು ವಿರೋಧದ ಮದ್ಯೆ ಕಾಮಗಾರಿಗೆ ಕೈ ಹಾಕಿದ ಬಂದರು ಇಲಾಖೆ ಮೀನುಗಾರರ ಪ್ರತಿಭನೆಯ ಬಿಸಿ ತಟ್ಟಿಸಿಕೊಂಡ್ರು.

ಕಾಮಾಗಾರಿ ವಿರೋಧಕ್ಕೆ ಮುಂದಾದ ಮೀನುಗಾರರು ಪೋಲಿಸ್ ವಶಕ್ಕೆ

ವಿರೋಧಕ್ಕೆ ಮುಂದಾದ ಮೀನುಗಾರರನ್ನ ಪೋಲಿಸರು ಬಂದಿಸಿದ್ರೆ. ಮೀನುಗಾರ ಮಹಿಳೆಯರು ಪೋಲಿಸ್ ಸರ್ಪಗಾವಲನ್ನ ಮುರಿದು ಕಾಮಗಾರಿ ಸ್ಥಗಿತಕ್ಕೆ ಮುಂದಾದ್ರು.

ಒಂದೆಡೆ ಕಡಲ ತೀರದುದ್ದಕ್ಕೂ ಪೋಲಿಸ್ ಸರ್ಪಗಾವಲನ್ನ ಹಾಕಾಲಗಿತ್ತು..ಇನ್ನೊಂದೆಡೆ ಕಾಮಗಾರಿ ವಿರೋಧಕ್ಕೆ ಮುಂದಾದವರನ್ನ ಪೋಲಿಸರು ವಶಕ್ಕೆ ಪಡೆಯುತ್ತಿದ್ರು. ಮತ್ತೊಂದೆಡೆ ಬಂಧನ ಖಂಡಿಸಿ ಮೀನುಗಾರರ ವಿವಿಧ ಪ್ರತಿಭಟನೆ. ಪೋಲಿಸ್ ಸರ್ಪಗಾವಲಿನಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತೀವ್ರ ವಿರೋಧ. ಈ ದೃಶ್ಯಗಳು ಇವತ್ತಿನ ಕಾರವಾರ ವಾಣಿಜ್ಯ ಬಂದರು‌ವಿಸ್ತರಣೆ ವಿರೋಧದ ಹೈಲೈಟ್ಸ್ ಗಳಾಗಿದ್ದಾವು..

ಸಾಗರಮಾಲ ಯೋಜನೆಯಡಿ ಕಾರವಾರ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಆದ್ರೆ ಬಂದರು ವಿಸ್ತರಣೆಯಿಂದ ಟಾಗೋರ್ ಕಡಲ ತೀರಕ್ಕೆ ಹಾನಿಯಾಗಲಿದ್ದು ಮೀನುಗಾರಿಕೆ ಮೇಲೆ ಪರಿಣಾಮ ಬೀಳಲಿದ್ದು ಯಾವುದೇ ಕಾರಣಕ್ಕೂ ಬಂದರು ವಿಸ್ತರಣೆ ಬೇಡ ಎನ್ನುವುದು ಮೀನುಗಾರರ ಆಗ್ರಹವಾಗಿತ್ತು. ಈ ಬಗ್ಗೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದು ಇವತ್ತು ಮೀನುಗಾರರ ಹೋರಾಟದ ನಡುವೆಯೇ ಪೋಲಿಸ್ ಸರ್ಪಗಾವಲಿನಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆ ಕಾವು ಜೋರಾಯ್ತು..

ಇನ್ನು ಮೀನುಗಾರರನ್ನ ವಶಕ್ಕೆ ಪಡೆಯುತ್ತಿದ್ದಂತೆ ಸಿಟ್ಟಿಗೆದ್ದ ಕೆಲ ಮೀನುಗಾರರು ಕಾರವಾರ ನಗರದಲ್ಲಿ ಒತ್ತಾಯ ಪೂರ್ವಕವಾಗಿ ಕಾರವಾರ ಬಂದ್ ಮಾಡಲು ಮುಂದಾದರು. ಅಂಗಡಿ ಮುಂಗಟ್ಟು ಬಂದ್ ಮಾಡಲು ಒತ್ತಾಯ ಮಾಡುತ್ತಿದ್ದ ಕೆಲವರನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದರು ಇದರಿಂದ ಕೆಲ ಕಾಲ ಪರಿಸ್ಥಿತಿ ಬಿಗುವಿತ ವಾತವಾರಣಕ್ಕೆ ತಿರುಗಿತ್ತು. ನಂತರ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಿದರು. ಅಂಗಡಿ ಮುಂಗಟ್ಟುಗಳನ್ನ ವರ್ತಕರು ಸ್ವಯಂ ಘೋಷಿತವಾಗಿ ಬಂದ್ ಮಾಡಿದರು. ಇನ್ನು ಕಾರವಾರದ ಪೊಲೀಸ್ ಹೆಡ್ ಕ್ವಾಟರ್ ನಲ್ಲಿ ಬಂಧನಕ್ಕೊಳಗಾದ ಮೀನುಗಾರರನ್ನ ಇಡಲಾಗಿತ್ತು. ಪೊಲೀಸರ ಬಂಧನದಲ್ಲೇ ಮೀನುಗಾರರು ಪ್ರತಿಭಟನೆ ಮುಂದುವರೆಸಿದರು.

ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಯನ್ನ ಮುಂದುವರೆಸಿದ್ದು ಮೀನುಗಾರರು ತಮ್ಮ ಹೋರಾಟವನ್ನ ಮುಂದುವರೆಸಿದ್ದಾರೆ. ಇನ್ನೊಂದೆಡೆ ಇಂದು ಮೀನು ಮಾರಾಟ ಮಾಡುವುದನ್ನ ಸಹ ಮಹಿಳೆಯರು ಬಂದ್ ಮಾಡುವ ಮೂಲಕ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಇದೀಗ ಮೀನುಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ದಿನದಲ್ಲೂ ಕಾಮಗಾರಿ ವಿರೋಧಿಸಿ ಇನ್ನಷ್ಟು ಪ್ರತಿಭಟನೆ ನಡೆಯುವುದರಲ್ಲಿ ಅನುಮಾನವಿಲ್ಲ..

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights