ಫ್ಯಾಕ್ಟ್‌ಚೆಕ್: ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಮಹಿಳೆಯ ಮೃತದೇಹ! ಇದು ‘ಲವ್ ಜಿಹಾದ್’ ಪ್ರಕರಣವೇ?

ಗುರುಗ್ರಾಮ್‌ನ ಇಫ್ಕೋ ಚೌಕ್ ಬಳಿ ಸೂಟ್‌ಕೇಸ್‌ವೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವ, ಅದನ್ನು  ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ 53 ಸೆಕೆಂಡ್‌ಗಳ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ‘ಲವ್ ಜಿಹಾದ್’ಗೆ ಬಲಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಇದೊಂದು ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು, ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳ್ಳಲು ಹೀಗೆ ಬಲೆಗೆ ಬೀಳಿಸಿ, ಹತ್ಯೆ ಮಾಡುತ್ತಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಹಿಂದೂ ಹುಡುಗಿಯರ ಆತ್ಮಗಳು ಸತ್ತಿವೆಯೇ? ಅವರಿಗೆ ಅವರ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಯಾವುದೇ ಸಂಬಂಧವಿಲ್ಲವೇ? ಇದು ಹೀಗೆಯೇ ಮುಂದುವರೆದರೆ, ನಾವು ಸೂಟ್‌ಕೇಸ್‌ಗಳಲ್ಲಿ ಶವಗಳನ್ನು ಹುಡುಕುವುದನ್ನು ಮುಂದುವರೆಯುತ್ತದೆ”. ಹಿಂದೂ ಹುಡುಗಿ ತನ್ನ ಅಬ್ದುಲ್‌ನನ್ನು ನಂಬಿದ್ದಕ್ಕಾಗಿ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಎಂಬ ಹೇಳಿಕೆಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಮಾಡಲಾದ ಪೋಸ್ಟ್‌ನ ಆರ್ಕೈವ್ ಲಿಂಕ್‌ಅನ್ನು ಇಲ್ಲಿ ನೋಡಬಹುದು.

 

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, @ajaychauhan41, ಕ್ಲಿಪ್ ಅನ್ನು ಹಂಚಿಕೊಂಡಿದ್ದು, “ಇನ್ನೊಂದು ಸೂಟ್‌ಕೇಸ್, ಇನ್ನೊಂದು ಹುಡುಗಿಯ ದೇಹ ಅದೇ ಲವ್ ಜಿಹಾದ್ ಪ್ರಕರಣ. ಗುರುಗ್ರಾಮ್ ನಲ್ಲಿ ನಡೆದಿದೆ ಎಂದು ಬರೆದಿದ್ದಾರೆ.” (Archive.)

ಘಾಜಿಯಾಬಾದ್‌ನ ಬಿಜೆಪಿ ಜಿಲ್ಲಾ ಸಾಮಾಜಿಕ ಮಾಧ್ಯಮ ಮುಖ್ಯಸ್ಥರಾಗಿರುವ ಆನಂದ್ ಕಲ್ರಾ ಅವರು ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದು,  “20 ರಿಂದ 25 ವರ್ಷ ವಯಸ್ಸಿನ ಮಹಿಳೆಯ ಶವ ಇಫ್ಕೋ ಚೌಕ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಮಹಿಳೆಯ ಕೈಕಾಲುಗಳೂ ಮುರಿದಿವೆ. ಮೃತ ದೇಹವನ್ನು ನೋಡಿದಾಗ ಕೆಲ ಗಂಟೆಗಳ ಹಿಂದೆ ಕೊಲೆ ನಡೆದಿರುವಂತೆ ತೋರುತ್ತದೆ. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಮಹಿಳೆಯ ಮೃತದೇಹವನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಇದು ಲವ್ ಜಿಹಾದ್ ಪ್ರಕರಣವಾಗಿರಬಹುದು ಎಂದು ಹೇಳಲಾಗುತ್ತಿದೆ ಎಂದು ಬರೆದಿದ್ದಾರೆ. (Archive).

ಸಾಮಾನ್ಯವಾಗಿ ಬಲಪಂಥೀಯ ಪ್ರತಿಪಾದಕರು ಇಂತಹ ಅನುಮಾನಾಸ್ಪದ ಶವಗಳು ಪತ್ತೆಯಾದಾಗಲೆಲ್ಲ, ಮುಸ್ಲಿಂ ವ್ಯಕ್ತಿಗಳನ್ನು ಅಬ್ದುಲ್, ಬಶೀರ್ ಎಂಬ ಅಂಕಿತನಾಮಗಳನ್ನು ನೀಡಿ ಆದೇ ಹೆಸರುಗಳಿಂದ ಕರೆಯುವುದು ವಾಡಿಕೆ. ಹಾಗಿದ್ದರೆ ಶವವಾಗಿ ಪತ್ತೆಯಾಗಿರುವ ಮಹಿಳೆಯನ್ನು ಮುಸ್ಲಿಮ್ ವ್ಯಕ್ತಿಯು ಹತ್ಯೆ ಮಾಡಿದ್ದಾನೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿ ವರದಿಗಳನ್ನು ಪರಿಶೀಲಿಸಲು ಕೀವರ್ಡ್‌ಗಳೊಂದಿಗೆ ಚೆಕ್ ಮಾಡಿದಾಗ, ಗುರುಗ್ರಾಮ್‌ನ ಇಫ್ಕೋ ಚೌಕ್ ಬಳಿ ಮೃತದೇಹದ ಪತ್ತೆಗೆ ಸಂಬಂಧಿಸಿದ ಹಲವಾರು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಅಕ್ಟೋಬರ್ 17 ರಂದು ಹಿಂದೂಸ್ತಾನ್ ಟೈಮ್ಸ್ ಸೋಮವಾರ ಇಫ್ಕೋ ಚೌಕ್‌ನಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿದ ಮಹಿಳೆಯ ಶವ ಪತ್ತೆಯಾಗಿದೆ ಎಂದು ವರದಿ ಮಾಡಿದೆ.

ದೆಹಲಿ-ಗುರ್‌ಗಾಂವ್ ಎಕ್ಸ್‌ಪ್ರೆಸ್‌ ವೇನಲ್ಲಿರುವ ರಸ್ತೆಯುದ್ದಕ್ಕೂ ಇರುವ ಪೊದೆಗಳಲ್ಲಿ ಸೂಟ್‌ಕೇಸ್ ಅನ್ನು ಆಟೋ-ರಿಕ್ಷಾ ಚಾಲಕನೊಬ್ಬ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸಂಜೆ 4 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಮೃತ ದೇಹದ ಮೇಲೆ ಹಲವು ಸುಟ್ಟ ಗುರುತುಗಳಿವೆ ಎಂದು ತಿಳಿಸಿದ್ದಾರೆ, ಅದು ಸಿಗರೇಟ್‌ನಿಂದ ಮಾಡಿದಂತಿದೆ ಎಂದು ಉಲ್ಲೇಖಿಸಿದ್ದಾರೆ.

ಪಂಜಾಬ್ ಕೇಸರಿಯ ವೀಡಿಯೊ ವರದಿಯು ಲಭ್ಯವಾಗಿದ್ದು. ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಕ್ ಸಹಾರನ್ ಡಿಸಿಪಿ (ಪಶ್ಚಿಮ) ಮಹಿಳೆ 20-25 ವರ್ಷ ವಯಸ್ಸಿನವಳಾಗಿದ್ದಾಳೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತದೇಹವನ್ನು ಆಟೋ ರಿಕ್ಷಾ ಚಾಲಕನೊಬ್ಬ ಪತ್ತೆ ಮಾಡಿದ್ದಾನೆ ಎಂದು ಹೇಳಿದ್ದಾರೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಪೊಲೀಸ್‌ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ಯಾವುದೇ ರೀತಿಯ ಲವ್ ಜಿಹಾದ್‌ಗೆ ಸಂಬಂಧಿಸಿದೆ ಎಂಬ ಉಲ್ಲೇಖಗಳು ಲಭ್ಯವಾಗಿಲ್ಲ. ನಂತರದ ಕೀವರ್ಡ್ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಅಕ್ಟೋಬರ್ 19 ರಂದು ಪ್ರಕಟವಾದ ನವಭಾರತ್ ಟೈಮ್ಸ್‌ನ ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ, ವರದಿಯ ಪ್ರಕಾರ ಮೃತಳನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ ಮತ್ತು ಆರೋಪಿಯನ್ನು ಆಕೆಯ ಪತಿ ಸುನಿಲ್ ಎಂದು ಹೆಸರಿಸಲಾಗಿದೆ.

ಆದರೆ, ಸ್ಥಳೀಯ ಸುದ್ದಿವಾಹಿನಿ ದಿ ದೆಹಲಿ ಕ್ರೌನ್ ಆರೋಪಿಯ ಹೆಸರು ರಾಹುಲ್ ಎಂದು ವರದಿ ಮಾಡಿದೆ. ಆಜ್ ತಕ್ ವರದಿಯಲ್ಲಿ ಆರೋಪಿಯ ಹೆಸರನ್ನು ರಾಹುಲ್ ಎಂದು ಉಲ್ಲೇಖಿಸಲಾಗಿದೆ.

ಹೆಚ್ಚಿನ ಪರಿಶೀಲನೆಗಾಗಿ, ಎಸಿಪಿ ಕ್ರೈಮ್ ಪ್ರೀತ್ಪಾಲ್ ಸಿಂಗ್ ನೇತೃತ್ವದ ಗುರುಗ್ರಾಮ್ ಪೊಲೀಸರ ಪತ್ರಿಕಾಗೋಷ್ಠಿಯನ್ನು ಪರಿಶೀಲಿಸಿದಾಗ, ಈ ಹೇಳಿಕೆಯಲ್ಲಿ ಎಸಿಪಿ ಆರೋಪಿಯನ್ನು ರಾಹುಲ್ ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ. ಸಂತ್ರಸ್ತೆ 2021ರಲ್ಲಿ ರಾಹುಲ್ ಅವರನ್ನು ವಿವಾಹವಾಗಿದ್ದರು.ಅದು ಪ್ರೇಮ ವಿವಾಹವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಕೂಡಲೇ ಪರಸ್ಪರ ಜಗಳ ಆರಂಭಿಸಿದರು. ಆರೋಪಿಯು ಮೃತಳ ಹಚ್ಚೆ ತೆಗೆಯಲು ಯತ್ನಿಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾ ತಂಡದ ಭಾಗವಾಗಿದ್ದ ಸಿಐಎ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರಕರಣಕ್ಕೆ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿ ಹಿಂದೂ ಮತ್ತು ಕುಶ್ವಾ ಜಾತಿಗೆ ಸೇರಿದವನಾಗಿದ್ದು, ಮೃತ ಪ್ರಿಯಾಂಕಾ ಯಾದವ ಜಾತಿಗೆ ಸೇರಿದ್ದಾರೆ ಎಂದು ಆಲ್ಟ್‌ ನ್ಯೂಸ್‌ಗೆ ತಿಳೀಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರೀತಿಸಿ ಮದುವೆಯಾಗಿದ್ದ ರಾಹುಲ್ ಎಂಬ ಯುವಕ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಲವ್ ಜಿಹಾದ್ ಪ್ರಕರಣ ಎಂದು ಕೋಮು ಆಯಾಮ ನೀಡಲಾಗಿತ್ತು. ಆದರೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿ ಈ ಕೊಲೆಗೆ ಯಾವುದೇ ಕೋಮು ಆಯಾಮವಿಲ್ಲ ಇಬ್ಬರು ಹಿಂದೂ ಧರ್ಮದವರಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ ನ್ಯೂಸ್‌

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಿಂಗಾಗಿದ್ದಾರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights