ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಿಂಗಾಗಿದ್ದಾರಾ?

ಭಾರತ ಐಕ್ಯತಾ ಯಾತ್ರೆ ಜನಮನ್ನಣೆ ಪಡೆಯುತ್ತಿದೆ. ಯಾತ್ರೆ ಸಾಗುತ್ತಿರುವ ಮಾರ್ಗದಲ್ಲಿ ಜನರು ರಾಹುಲ್ ಗಾಂಧಿಯನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿಯ ವಯಸ್ಸಾದಂತೆ ಕಾಣುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಫೋಟೋದಲ್ಲಿ ರಾಹುಲ್ ಗಾಂಧಿ ಹೆಚ್ಚು ವಯಸ್ಸಾದಂತೆ ಕಾಣುತ್ತಿದ್ದು, ಯಂಗ್ ಆಗಿ ಕಾಣಲು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ, ಆದರೆ ಇದ್ಯಾವುದು ಫಲಿಸುವುದಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಸಿರ್ಫ್ ನ್ಯೂಸ್ ಸಂಸ್ಥಾಪಕ ಮತ್ತು ಸಂಪಾದಕ ಸೂರಜಿತ್ ದಾಸ್‌ಗುಪ್ತ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, “ಅವರು ಅವರನ್ನು ಯೂತ್ ಐಕಾನ್ ಬಿಂಬಿಸಿಕೊಳ್ಳಲು ಪ್ರಯತ್ನಿಸಿದರು. ಅದು ಕೆಲಸ ಮಾಡಲಿಲ್ಲ. ಅವರು ತಮ್ಮ ಸಾಕುಪ್ರಾಣಿಯಾದ ಪಿಡಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದರು. ಮಳೆಯಲ್ಲಿ ನೆನೆದು ಕೊಚ್ಚಿಕೊಂಡು ಹೋಗಿದ್ದಾರೆ, ಹಿರಿಕನಂತೆ ಕಾಣಲು ಪ್ರಯತ್ನಿಸಿದರೆ ಇದನ್ನು  ಮಾರ್ಕ್ಸ್ ಕೂಡ ಒಪುವುದಿಲ್ಲ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿಯು ನಿಜವಾಗಿಯೂ ಇಷ್ಟು ಬಳಲಿರುವಂತೆ (ವಯಸ್ಸಾದಂತೆ) ಕಾಣುತ್ತಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಬೂಮ್ ಫ್ಯಾಕ್ಟ್‌ಚೆಕ್ ತಂಡ ವರದಿ ಮಾಡಿದೆ. BOOM ವರದಿಯ ಪ್ರಕಾರ ಅಕ್ಟೋಬರ್ 18, 2022 ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್ ಮಾಡಿದ ಟ್ವೀಟ್‌ನಲ್ಲಿ ಅದನ್ನು ಕಂಡುಹಿಡಿದಿದೆ. ಫೋಟೋವನ್ನು ಹಿಂದಿಯ ಶೀರ್ಷಿಕೆಯೊಂದಿಗೆ ಮಾಡಲಾದ ಪೋಸ್ಟ್‌ಅನ್ನು ಅನುವಾದಿಸಿದಾಗ, “ಯೋಧನಂತಹ ಆತ್ಮ, ಸಂತನಂತಹ- ಮುಗುಳ್ನಗು. ಇಡೀ ಭಾರತ ಇಂದು ಭಾರತ್ ಜೋಡೋ ಯಾತ್ರೆಯ ಹಿಂದೆ ಇದೆ” . ಎಂದು ಹಂಚಿಕೊಂಡಿದೆ.

ವೈರಲ್ ಆಗಿರುವ ಪೋಟೋವನ್ನು ಮೂಲ ಪೋಟೋದೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಮೂಲ ಫೋಟೋವನ್ನು ಸಣ್ಣ ಪ್ರಮಾಣದಲ್ಲಿ ಎಡಿಟ್ ಮಾಡಿ ರಾಹುಲ್ ಗಾಂಧಿಯ ಮುಖದಲ್ಲಿ ಹೆಚ್ಚು ದಾಡಿ ಇರುವಂತೆ ಮಾಡಿ ಫೋಟೋವನ್ನು ಮಾರ್ಫ್ ಮಾಡಲಾಗಿದೆ. ಹೋಲಿಕೆ ಮಾಡಿರುವ ಪೋಟೋವನ್ನು ಇಲ್ಲಿ ನೋಡಬಹುದು.

ಮೂಲ ಫೋಟೋವನ್ನು ಎಡಿಟ್ ಮಾಡುವ ಮೂಲಕ ಇದೇ ಪೋಟೋವನ್ನು ಬಲಪಂಥೀಯ ಪ್ರತಿಪಾದಕರು ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೆತ್ತಲೆ ಪ್ರತಿಭಟನೆಗೂ, ಇರಾನ್‌ನ ಹಿಜಾಬ್‌ ವಿರುಧ್ದದ ಹೋರಾಟಕ್ಕೂ ಸಂಬಂಧವಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights