ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಕ್ತಿಯಿಂದ ಹಿಂದೂ ದೇವಾಲಯ ನಾಶ ! ವಾಸ್ತವವೇನು?

ಮುಸ್ಲಿಂ ವ್ಯಕ್ತಿಯೊಬ್ಬ ದೇವಾಲಯದ ಪ್ರವೇಶ ದ್ವಾರವನ್ನು(ಆರ್ಚ್) ಒಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಂಧ್ರಪ್ರದೇಶದ ಪುರಾತನ ದೇವಾಲಯವನ್ನು ಮುಸ್ಲಿಮರು ಕೆಡವುತ್ತಿರುವುತ್ತಿದ್ದಾರೆ, ಮುಸ್ಲಿಮರಿಂದ  ಸಸತವಾಗಿ ದಾಳಿಗೊಳಗಾಗಿದ್ದ ದೇಶದ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ ಎಂದು ಪ್ರತಿಪಾದಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪುರಾತನ ಹಿಂದೂ ದೇವಾಲಯವನ್ನು ಕೆಡವುತ್ತಿರುವ ದೃಶ್ಯಗಳನ್ನು ನೋಡಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಘಟನಗೆ ಸಂಬಂಧಿಸಿದಂತೆ ವಾಸ್ತವವನ್ನು ಪರಿಶೀಲಿಸಲು ಕೀವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಇದೇ ಘಟನೆಯ ಕುರಿತು ಹಲವು ಮಾಧ್ಯಮಗಳು ಪ್ರಕಟಿಸಿರುವ ಸುದ್ದಿ ಲೇಖನಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಈ ವರದಿಗಳ ಪ್ರಕಾರ, 12 ಅಕ್ಟೋಬರ್ 2022 ರಂದು, ಆಂಧ್ರಪ್ರದೇಶದ ಗುಂಟೂರಿನ ಎಲ್ಆರ್ ಕಾಲೋನಿಯಲ್ಲಿರುವ ‘ಹಜರತ್ ಬಾಜಿ ಬಾಬಾ ನಿಶಾನ್’ ದರ್ಗಾವನ್ನು ಕೆಲವು ಅಪರಿಚಿತರು ಕೆಡವಲು ಪ್ರಯತ್ನಿಸಿದ್ದರು.

ದರ್ಗಾದಲ್ಲಿ ಕಳೆದ 40 ವರ್ಷಗಳಿಂದ ಎಲ್ಲಾ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಜಮೀನು ಮಾಲೀಕರು ಮೃತಪಟ್ಟಾಗ ಸ್ಥಳೀಯರೇ ನಿರ್ವಹಣೆ ಮಾಡುವುದರ ಜತೆಗೆ ದುರಸ್ತಿ ಕಾರ್ಯಕ್ಕೂ ಹಣ ಸಂಗ್ರಹಿಸಿದ್ದರು. ಆದಾಗ್ಯೂ, 12 ಅಕ್ಟೋಬರ್ 2022 ರಂದು ಕೆಲವು ಜನರು ಆ ಸ್ಥಳದಲ್ಲಿ ಹೊಸ ಮಸೀದಿಯನ್ನು ನಿರ್ಮಿಸುವುದಾಗಿ ಹೇಳಿಕೊಂಡು ದರ್ಗಾವನ್ನು ಕೆಡವಲು ಪ್ರಯತ್ನಿಸಿದರು.

ಈ ಬಗ್ಗೆ ವಿಚಾರಣೆ ನಡೆಸಿದ ಲಾಲಾಪೇಟ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಭಾಕರ್, ”ಯೇಸು ರತ್ನಂ ಅಲಿಯಾಸ್ ರೆಹಮಾನ್ ಹಾಗೂ ಪತ್ನಿ ನಾಗ ರತ್ನಮ್ಮ ಗುಂಟೂರಿನ ಎಲ್‌ಆರ್ ಕಾಲೋನಿಯಲ್ಲಿ ವಾಸವಾಗಿದ್ದರು. ಸುಮಾರು 40 ವರ್ಷಗಳ ಹಿಂದೆ ಅವರ ಪತ್ನಿಯ ಮರಣದ ನಂತರ, ಅವರು ದರ್ಗಾದಂತಹ ರಚನೆಯನ್ನು (ಸ್ಮಾರಕ) ನಿರ್ಮಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇತರ ನಿವಾಸಿಗಳು ತಮ್ಮ ಧರ್ಮವನ್ನು ಲೆಕ್ಕಿಸದೆ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಯೇಸು ರತ್ನಂ ಅವರ ಮರಣದ ನಂತರ, ಅವರ ಮಗಳು ಸತ್ಯವತಿ ಮತ್ತು ಸಂಗಡಿ ಗುಂಟೂರಿನ ಹತ್ತಿರದಲ್ಲಿರುವ  ಮಸೀದಿಯ ಸದಸ್ಯರು ಯೇಸು ರತ್ನಂ ಅವರ ಮರಣದ ನಂತರ ಈ ದರ್ಗಾದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಅಕ್ಟೋಬರ್ 12, 2022 ರಂದು, ಕೆಲವು ಅಪರಿಚಿತ ವ್ಯಕ್ತಿಗಳು ಕಾಂಪೌಂಡ್ ಗೋಡೆಯನ್ನು ಕೆಡವಲು ಪ್ರಯತ್ನಿಸಿದರು, ಆದರೆ ಸ್ಥಳೀಯರು ಅದನ್ನು ಪ್ರತಿಭಟಿಸಿದರು. ಇಡೀ ಘಟನೆ ಭೂ ವಿವಾದಕ್ಕೆ ಸಂಬಂಧಿಸಿದ್ದೇ ಹೊರತು ಕೋಮುವಾದದ್ದಲ್ಲ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಾಲಾಪೇಟ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಭಾಕರ್ ತಿಳಿಸಿದ್ದಾರೆ.

“ರೆಹಮಾನ್ ಕ್ರಿಶ್ಚಿಯನ್ ಧರ್ಮದವರಾಗಿದ್ದರು, ನಂತರ ಇಸ್ಲಾಂಗೆ ಮತಾಂತರ ಹೊಂದಿದ್ದರು, ಅವರ  ಪತ್ನಿ ನಾಗ ರತ್ನಮ್ಮ, ಅವರ ಮರಣಾದ ನಂತರ ಅವರ ಹೆಸರಿನಲ್ಲಿ ನಾಗನ (ಹಾವುಗಳ) ಪ್ರತಿಮೆಯನ್ನು ಹಾಕಿದರು ಮತ್ತು ಅವರು ದರ್ಗಾದಲ್ಲಿ ಚಂದ್ರ ಮತ್ತು ನಕ್ಷತ್ರವನ್ನು ಹಾಕಿದರು. ಆದರೆ, ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವವರು ಕೇವಲ ನಾಗ ಪ್ರತಿಮೆಯತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಪ್ರಭಾಕರ್ ಬೂಮ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಂದಿನ ಪ್ರವೇಶದ ದೃಶ್ಯಗಳನ್ನು ಇಲ್ಲಿ ನೋಡಬಹುದು.

ಅಲ್ಲದೆ, ಗುಂಟೂರು ಜಿಲ್ಲಾ ವಕ್ಫ್ ಬೋರ್ಡ್ ಇನ್ಸ್‌ಪೆಕ್ಟರ್ ಮುಖ್ತಾರ್ ಬಾಷಾ ಅವರು ತನಿಖೆ ನಡೆಸಿದಾಗ, ಈ ಸ್ಥಳದಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿಯ ಸಮಾಧಿ ಇಲ್ಲ ಎಂದು ಸ್ಥಳೀಯರು ಬಹಿರಂಗಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ದರ್ಗಾಗಳು ಧಾರ್ಮಿಕ ವ್ಯಕ್ತಿಗಳ ಸಮಾಧಿಗಳ ಮೇಲೆ ನಿರ್ಮಿಸಲಾದ ದೇವಾಲಯಗಳಾಗಿವೆ. ಇನ್ನಾದರೂ ರಾಜ್ಯ ಸರಕಾರ ಈ ಬಗ್ಗೆ ಗಮನಹರಿಸಿ ನ್ಯಾಯ ಕೊಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಸ್ಲಿಂ ವ್ಯಕ್ತಿಯ ಸ್ಮಾರಕದ ಮೇಲಿನ ಭೂ ವಿವಾದವನ್ನು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಂಧ್ರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪುರಾತನ ಹಿಂದೂ ದೇವಾಲಯವನ್ನು ಕೆಡವುತ್ತಿರುವ ದೃಶ್ಯಗಳನ್ನು ಎಂದು ವಿಡಿಯೋ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳು.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಣೆಯಲ್ಲಿ ಶಿವನ ಹಚ್ಚೆಯೊಂದಿಗೆ ಆರು ಕಾಲುಗಳ ಮಗು ಜನಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights